ದೊಡ್ಡಬಳ್ಳಾಪುರದ ಮಾಜಿ ಶಾಸಕ ಮತ್ತು ಪತ್ನಿ ವಿರುದ್ಧ ಕೇಸ್ ದಾಖಲು; 3 ಕೋಟಿ ರೂ. ಪಡೆದು ವಂಚನೆ ಆರೋಪ
2018ರ ಚುನಾವಣೆ ಬಳಿಕ 85 ಲಕ್ಷ ರೂಪಾಯಿ ಹಣ ವಾಪಾಸ್ ನೀಡಿದ್ದರು. ಆದರೆ ಉಳಿದ ಹಣ ನೀಡಿಲ್ಲ. ಹಣ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರಕರ್ತ ಸಂಗಮ್ ದೇವ್ ಅರೋಪಿಸಿದ್ದಾರೆ.
ಬೆಂಗಳೂರು: ಚುನಾವಣೆಗಾಗಿ ಹಣ ಪಡೆದು ವಾಪಸ್ಸು ನೀಡಿಲ್ಲ ಎಂದು ದೊಡ್ಡಬಳ್ಳಾಪುರ ಮಾಜಿ ಶಾಸಕ ನರಸಿಂಹಸ್ವಾಮಿ ಮತ್ತ ಅವರ ಪತ್ನಿ ನಾಗಮಣಿ ವಿರುದ್ಧ ಪ್ರಕರಣ ದಾಖಲಾಗಿದೆ. ಪತ್ರಕರ್ತ ಸಂಗಮ್ ದೇವ್, ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರ ಅನ್ವಯ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಚುನಾವಣೆಗೆ ಮೂರು ಕೋಟಿ ರೂಪಾಯಿ ನಗದು ಸಾಲ ಪಡೆದಿದ್ದರು. ಸಾಲ ಪಡೆದಿದ್ದಕ್ಕೆ ಚೆಕ್ ಸಹ ನೀಡಿದ್ದರು. 2018ರ ಚುನಾವಣೆ ಬಳಿಕ 85 ಲಕ್ಷ ರೂಪಾಯಿ ಹಣ ವಾಪಾಸ್ ನೀಡಿದ್ದರು. ಆದರೆ ಉಳಿದ ಹಣ ನೀಡಿಲ್ಲ. ಹಣ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರಕರ್ತ ಸಂಗಮ್ ದೇವ್ ಅರೋಪಿಸಿದ್ದಾರೆ.
ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳ್ಳತನ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಖದೀಮರು ಅದೇ ಮನೆಗೆ ಕನ್ನ ಹಾಕುವ ಕೆಲಸ ಮಾಡಿದ್ದಾರೆ. ಉದ್ಯಮಿ ವಿಜಯವಾಣಿ ಎಂಬುವರ ಮನೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ದೀಪಕ್ ತಗುರ್ನಾ, ಸುರೇಶ್ ಬಹದ್ದೂರ್, ಕಮಲ್ ಬಹದ್ದೂರ್ ಮತ್ತು ರಮೇಶ್ ಎಂಬುವವರು ಕೆಲಸ ಮಾಡಿಕೊಂಡಿದ್ದರು. ಮನೆಯಲ್ಲಿದ್ದ ಡಾಲರ್ನ ಗಮನಿಸಿದ್ದ ಈ ನಾಲ್ವರು ಎಗರಿಸಿದ್ದಾರೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಗ್ರಾನೈಟ್ ಬ್ಯುಸಿನೆಸ್ ಮಾಡಿಕೊಂಡಿದ್ದ ಉದ್ಯಮಿ ವಿಜಯವಾಣಿ, ಅಮೇರಿಕದಲ್ಲಿರುವ ತನ್ನ ಮಗನಿಗೆ ಕಳುಹಿಸಿಕೊಡಲು ಡಾಲರ್ ಇಟ್ಟಿದ್ದರು. ಈ ವಿಷಯ ಆರೋಪಿಗಳಿಗೆ ತಿಳಿದಿತ್ತು. ಮನೆಯಲ್ಲಿ ಯಾರು ಇಲ್ಲದೇ ಇರುವಾಗ ಅಮೇರಿಕ ಡಾಲರ್ ಮತ್ತು 17 ಲಕ್ಷ ನಗದನ್ನು ಖದೀಮರು ದೋಚಿದ್ದಾರೆ. ಮಗನನ್ನು ಅಮೇರಿಕಾಗೆ ಕಳುಹಿಸಿಕೊಡಲು ಡಾಲರ್ ಎಕ್ಸ್ ಚೇಂಜ್ ಮಾಡಿಟ್ಟುಕೊಳ್ಳಲಾಗಿತ್ತು. ಆದರೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ನಗದು ಜೊತೆ ಕೂಡಿಟ್ಟಿದ್ದ ಡಾಲರ್ ಅನ್ನು ಕದ್ದು ಪರಾರಿಯಾಗಿದ್ದರು.
90 ಸಾವಿರ ಬೆಲೆಬಾಳುವ ಜರ್ಸಿ ತಳಿಯ ಹಸುಗಳು ಕಳ್ಳತನ ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬೈರಪುರ ಗ್ರಾಮದಲ್ಲಿ ಜರ್ಸಿ ತಳಿಯ 2 ಹಸುಗಳ ಕಳ್ಳತನವಾಗಿದೆ. ಸುಮಾರು 90 ಸಾವಿರ ಬೆಲೆಬಾಳುವ ಹಸುಗಳು ಕಳುವಾಗಿದೆ. ರೈತ ರಾಮಚಂದ್ರಯ್ಯಗೆ ಸೇರಿದ 2 ಜರ್ಸಿ ಹಸುಗಳ ಕಳ್ಳತವಾಗಿದ್ದು, ರೈತ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ನಿವೇಶನ ನೀಡುವುದಾಗಿ ಹಣ ಪಡೆದು ವಂಚನೆ ಆರೋಪ, ದಿನೇಶ್ನನ್ನು ಕೋರ್ಟ್ಗೆ ಹಾಜರುಪಡಿಸಲಿರುವ ಪೊಲೀಸರು
Published On - 11:36 am, Sun, 8 August 21