AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೂಲ್​ಕಿಟ್ ಕೇಸ್​​​; ಕಾಂಗ್ರೆಸ್​​ನಿಂದ ದೂರು, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ವಕ್ತಾರನ ವಿರುದ್ಧ ಎಫ್​ಐಆರ್​ ದಾಖಲು

Toolkit Case: ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್​​ನ್ನು ಇಂಡಿಯಾ ಸ್ಟ್ರೈನ್​, ಮೋದಿ ಸ್ಟ್ರೈನ್​ ಎಂದು ಕರೆಯುವ ಮೂಲಕ ಕಾಂಗ್ರೆಸ್​ ಕೇಂದ್ರ ಸರ್ಕಾರಕ್ಕೆ ಕಳಂಕ ತರಲು ಪ್ರಯತ್ನಿಸುತ್ತಿದೆ ಎಂಬುದು ಬಿಜೆಪಿ ಆರೋಪ ಮಾಡಿತ್ತು.

ಟೂಲ್​ಕಿಟ್ ಕೇಸ್​​​; ಕಾಂಗ್ರೆಸ್​​ನಿಂದ ದೂರು, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ವಕ್ತಾರನ ವಿರುದ್ಧ ಎಫ್​ಐಆರ್​ ದಾಖಲು
ಬಿಜೆಪಿಯ ರಮಣ್​ ಸಿಂಗ್ ಮತ್ತು ಸಂಬಿತ್ ಪಾತ್ರಾ
Lakshmi Hegde
|

Updated on:May 23, 2021 | 7:17 PM

Share

ದೆಹಲಿ: ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಮಣ್​ ಸಿಂಗ್​ ಮತ್ತು ಪಕ್ಷದ ವಕ್ತಾರ ಸಂಬಿತ್​ ಪಾತ್ರಾ ವಿರುದ್ಧ ಛತ್ತೀಸ್​ಗಡ್​​ನಲ್ಲಿ ಎಫ್​ಐಆರ್ ದಾಖಲಾಗಿದೆ. ಎಐಸಿಸಿ ರಿಸರ್ಚ್​ ಡಿಪಾರ್ಟ್​​ಮೆಂಟ್​​ನ ಲೆಟರ್​ಹೆಡ್​ನ್ನು ಫೋರ್ಜರಿ ಮಾಡಿ, ಅದರಲ್ಲಿ ಸುಳ್ಳು, ಕಲ್ಪಿತ ವಿಷಯ ಪ್ರಿಂಟ್ ಮಾಡಿರುವ ಆರೋಪದಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಬ್ಬರಿಗೂ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿದೆ ಎಂದು ರಾಯಪುರ ಸಿವಿಲ್​ ಲೈನ್ಸ್ ಪೊಲೀಸ್ ಎಸ್​ಎಚ್​ಒ ಆರ್​​ಕೆ ಮಿಶ್ರಾ ತಿಳಿಸಿದ್ದಾರೆ.

ಛತ್ತೀಸಗಡ್​ ಪ್ರದೇಶ ಕಾಂಗ್ರೆಸ್​ ಎನ್​​ಎಸ್​​ಯುಐ ಅಧ್ಯಕ್ಷ ನೀಡಿದ ದೂರಿನ ಅನ್ವಯ ಎಫ್​ಐಆರ್​ ದಾಖಲು ಮಾಡಲಾಗಿದೆ. ಇಲ್ಲಿಗೆ ಬಂದು ಅಥವಾ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸಂಬಿತ್​​ ಪಾತ್ರ ಅವರಿಗೆ ಸೂಚಿಸಲಾಗಿದೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ವಿರುದ್ಧ ಕೂಡ ದೆಹಲಿ ಪೊಲೀಸರಿಗೆ ಕಾಂಗ್ರೆಸ್​ ದೂರು ನೀಡಿದೆ.

ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್​​ನ್ನು ಇಂಡಿಯಾ ಸ್ಟ್ರೈನ್​, ಮೋದಿ ಸ್ಟ್ರೈನ್​ ಎಂದು ಕರೆಯುವ ಮೂಲಕ ಕಾಂಗ್ರೆಸ್​ ಕೇಂದ್ರ ಸರ್ಕಾರಕ್ಕೆ ಕಳಂಕ ತರಲು ಪ್ರಯತ್ನಿಸುತ್ತಿದೆ ಎಂಬುದು ಬಿಜೆಪಿ ಆರೋಪ ಮಾಡಿತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಟೂಲ್​ಕಿಟ್​ ತಯಾರಿಸಿದೆ ಎಂದೂ ಹೇಳಿತ್ತು. ಆದರೆ ಆರೋಪವನ್ನು ಅಲ್ಲಗಳೆದಿದ್ದ ಕಾಂಗ್ರೆಸ್​, ಇದು ಫೇಕ್​ ಟೂಲ್​ಕಿಟ್​ ಎಂದು ಹೇಳಿದ್ದಲ್ಲದೆ ಪೊಲೀಸರಿಗೆ ದೂರು ಕೂಡ ನೀಡಿದೆ. ಕಾಂಗ್ರೆಸ್ ಟೂಲ್​​ಕಿಟ್​ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಆರೋಪ ಮಾಡಿದ ಬಿಜೆಪಿ ನಾಯಕರೆಲ್ಲರ ವಿರುದ್ಧವೂ ಕಾಂಗ್ರೆಸ್ ದೂರು ನೀಡಿದೆ.

ಇದನ್ನೂ ಓದಿ: Fact Check: ಕಾಂಗ್ರೆಸ್ ಟೂಲ್​ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್​ಹೆಡ್ ಬಳಸಿ ಮಾಡಿದ್ದು

ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು; ಮೊಬೈಲ್ ಕಳುವಾಗಿದೆ ಎಂದು ಪತ್ರ ಬರೆದ ಕೊಡಗು ಬಾಲಕಿಗೆ ಹೊಸ ಫೋನ್!

ಮೇಘನಾ ರಾಜ್ ​- ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಹೆಜ್ಜೆ ಹೆಜ್ಜೆಗೂ ಪ್ರೀತಿ ತೋರಿಸುತ್ತಿರುವ ಫ್ಯಾನ್ಸ್​

Published On - 6:17 pm, Sun, 23 May 21

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ