ನಿವೇಶನ ನೀಡುವುದಾಗಿ ಹಣ ಪಡೆದು ವಂಚನೆ ಆರೋಪ, ದಿನೇಶ್ನನ್ನು ಕೋರ್ಟ್ಗೆ ಹಾಜರುಪಡಿಸಲಿರುವ ಪೊಲೀಸರು
ಬೃಂದಾವನ ಪ್ರಾಪರ್ಟೀಸ್ ಮಾಲೀಕ ದಿನೇಶ್ ಗೌಡ ವಿವಿಧ ಪ್ರಾಜೆಕ್ಟ್ಗಳ ಹೆಸ್ರಲ್ಲಿ ನಿವೇಶನ ನೀಡೋದಾಗಿ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ನಾಲ್ಕು ಲಕ್ಷ, ಆರು ಲಕ್ಷ, ಹತ್ತು ಲಕ್ಷ ಹೀಗೆ ಒಬ್ಬೊಬ್ಬರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ಪ್ರಾಥಮಿಕ ತನಿಖೆಯಲ್ಲಿ ₹90 ಕೋಟಿ ವಂಚನೆ ಆಗಿದ್ದು ಪತ್ತೆಯಾಗಿತ್ತು.
ಬೆಂಗಳೂರು: ನಿವೇಶನ ನೀಡುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ರಾಜಾಜಿನಗರದ 3ನೇ ಹಂತದಲ್ಲಿರುವ ಬೃಂದಾವನ ಪ್ರಾಪರ್ಟೀಸ್ ವಿರುದ್ಧ 1500 ಜನರು ದೂರು ದಾಖಲಿಸಿದ್ದಾರೆ.
ಬೃಂದಾವನ ಪ್ರಾಪರ್ಟೀಸ್ ಮಾಲೀಕ ದಿನೇಶ್ ಗೌಡ ವಿವಿಧ ಪ್ರಾಜೆಕ್ಟ್ಗಳ ಹೆಸ್ರಲ್ಲಿ ನಿವೇಶನ ನೀಡೋದಾಗಿ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ನಾಲ್ಕು ಲಕ್ಷ, ಆರು ಲಕ್ಷ, ಹತ್ತು ಲಕ್ಷ ಹೀಗೆ ಒಬ್ಬೊಬ್ಬರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ಪ್ರಾಥಮಿಕ ತನಿಖೆಯಲ್ಲಿ ₹90 ಕೋಟಿ ವಂಚನೆ ಆಗಿದ್ದು ಪತ್ತೆಯಾಗಿತ್ತು. ಸದ್ಯ ಬೃಂದಾವನ ಪ್ರಾಪರ್ಟೀಸ್ ಕಂಪನಿ ಮಾಲೀಕ ದಿನೇಶ್ ಗೌಡನನ್ನು ಪೊಲೀಸರು ಇಂದು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ದಿನೇಶ್ ಗೌಡನನ್ನು ಕಸ್ಟಡಿಗೆ ಪಡೆದು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಈ ಹಿಂದೆ ನಡೆಸಿದ ವಿಚಾರಣೆ ವೇಳೆ ಹಲವೆಡೆ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿದೆ.
ದಿನೇಶ್ ಹಾಸನ ಜಿಲ್ಲೆಯ ಅರಕಲಗೂಡು ಬಳಿ ಒಂದು ತೋಟ. ಬೆಂಗಳೂರಿನಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ. ಮತ್ತೊಂದು ಕಡೆ ಕಲ್ಯಾಣ ಮಂಟಪ ನಿರ್ಮಾಣ ಮಾಡಿಸುತ್ತಿದ್ದಾರೆ. ಇನ್ನು ₹50 ಕೋಟಿಗಿಂತ ಹೆಚ್ಚು ವಂಚನೆ ಆಗಿರುವ ಹಿನ್ನೆಲೆಯಲ್ಲಿ ಬೃಂದಾವನ ಕೇಸ್ ಶೀಘ್ರದಲ್ಲಿ ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
ದಿನೇಶ್ ಗೌಡ ಎಂಬಾತ ಬೃಂದಾವನ ಪ್ರಾಪರ್ಟಿಸ್ ಕಂಪನಿ ಹೆಸರಿನಲ್ಲಿ ಕಳೆದ ಐದು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಇದೀಗ ವಂಚನೆ ಆರೋಪ ಬೆಳಕಿಗೆ ಬರುತ್ತಿದ್ದಂತೆ ಬೃಂದಾವನ ಪ್ರಾಪರ್ಟಿ ಕಚೇರಿ ಕ್ಲೋಸ್ ಮಾಡಿ ಎಸ್ಕೇಪ್ ಆಗಿದ್ದಾನೆ. ಹಣ ಹೂಡಿಕೆ ಮಾಡಿರುವ ಸಾರ್ವಜನಿಕರು ಕಂಪನಿಯ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕ್ಯಾಬ್ ಚಾಲಕರು, ಪ್ಲಂಬರ್, ಹೋಟೆಲ್ ಸಪ್ಲೈಯರ್ ಮುಂತಾದವರು ಬೃಂದಾವನ ಪ್ರಾಪರ್ಟಿಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ತಾವರೆಕರೆ, ಹೆಸರಘಟ್ಟ, ನೆಲಮಂಗಲ ಭಾಗಗಳಲ್ಲಿ ನಿವೇಶನ ತೋರಿಸಿ, ದಿನೇಶ್ ಗೌಡ ಸಂಸ್ಥೆ ವಂಚನೆ ಎಸಗಿದೆ. ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ವಂಚನೆ ಬಗ್ಗೆ ದೂರು ನೀಡುವಂತೆ ಪೊಲೀಸರು ಹೂಡಿಕೆದಾರರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ನಿವೇಶನ ಮಾರಾಟ ನೆಪದಲ್ಲಿ ಮತ್ತೊಂದು ವಂಚನೆ ಪ್ರಕರಣ: ಪ್ರತಿಭಟನೆ, ರಾಜಾಜಿನಗರ ಪೊಲೀಸರಿಗೆ ದೂರು