ಡೆತ್​ನೋಟ್ ಬರೆದು ಕರ್ತವ್ಯ ನಿರತ ಕಂದಾಯ ನಿರೀಕ್ಷಕ ಆತ್ಮಹತ್ಯೆ; ರಾಜಕೀಯ ನಾಯಕರ ಕಿರುಕುಳವೇ ಕಾರಣ?

Chikkamagalur: ರಾಜಕೀಯ ನಾಯಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಎಂದು ಮೃತರು ಡೆತ್​ನೋಟ್ ಬರೆದಿದ್ದರು. ಡೆತ್​ನೋಟ್ ಬರೆದಿಟ್ಟು ಸೋಮಶೇಖರ್(52) ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಕುಟುಂಬಸ್ಥರು ಧರಣಿ ನಡೆಸಿದ್ದಾರೆ.

ಡೆತ್​ನೋಟ್ ಬರೆದು ಕರ್ತವ್ಯ ನಿರತ ಕಂದಾಯ ನಿರೀಕ್ಷಕ ಆತ್ಮಹತ್ಯೆ; ರಾಜಕೀಯ ನಾಯಕರ ಕಿರುಕುಳವೇ ಕಾರಣ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Aug 25, 2021 | 6:19 PM

ಚಿಕ್ಕಮಗಳೂರು: ಡೆತ್​ನೋಟ್ ಬರೆದಿಟ್ಟು ಕರ್ತವ್ಯ ನಿರತ ಕಂದಾಯ ನಿರೀಕ್ಷಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ನಡೆದಿದೆ. ಲಕ್ಕವಳ್ಳಿ ಬಳಿ ಭದ್ರಾ ಕಾಲುವೆಗೆ ಹಾರಿ ಆರ್​ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿ ಸೋಮಶೇಖರ್ (52) ಎಂಬವರಾಗಿದ್ದಾರೆ. ಡೆತ್​ನೋಟ್​ನಲ್ಲಿ ತರೀಕೆರೆ ಶಾಸಕ ಸುರೇಶ್ ಆಪ್ತರಾಗಿರುವ ಮೂವರ ಹೆಸರು ಉಲ್ಲೇಖಿಸಲಾಗಿದೆ. ಧನಪಾಲ್, ರಮೇಶ್, ಸಂಜೀವ್ ಕುಮಾರ್ ಎಂಬ ಮೂವರ ಹೆಸರು ಉಲ್ಲೇಖಿಸಿ, ಅವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡುತ್ತಿರುವುದಾಗಿ ಬರೆದಿಟ್ಟು ಜೀವ ಕಳೆದುಕೊಂಡಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್​​ನೋಟ್​ ಬರೆದಿಟ್ಟು ಕಂದಾಯ ನಿರೀಕ್ಷಕ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಂತೆ ಠಾಣೆ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಲಕ್ಕವಳ್ಳಿ ಪೊಲೀಸ್​ ಠಾಣೆ ಎದುರು ಕುಟುಂಬಸ್ಥರು ಧರಣಿ ನಡೆಸಿದ್ದಾರೆ. ರಾಜಕೀಯ ನಾಯಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಎಂದು ಮೃತರು ಡೆತ್​ನೋಟ್ ಬರೆದಿದ್ದರು. ಡೆತ್​ನೋಟ್ ಬರೆದಿಟ್ಟು ಸೋಮಶೇಖರ್(52) ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಕುಟುಂಬಸ್ಥರು ಧರಣಿ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ದಾವಣಗೆರೆ: ಚರಂಡಿಗೆ ಬಿದ್ದು ವ್ಯಕ್ತಿ ಸಾವು ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ ಚರಂಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ದಾವಣಗೆರೆ ಬಳಿಯ ಅವರಗೆರೆಯ ನಾಗರಾಜ್ (40) ಮೃತಪಟ್ಟಿದ್ದಾರೆ. ಚರಂಡಿಯನ್ನು ಸರಿಯಾಗಿ ಮುಚ್ಚದ ಹಿನ್ನೆಲೆ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸರಿಯಾಗಿ ಚರಂಡಿ ಮುಚ್ಚದ ಹಿನ್ನಲೆ ರಾತ್ರಿ ವೇಳೆ ಆಯತಪ್ಪಿ ಚರಂಡಿ ಒಳಗೆ ವ್ಯಕ್ತಿ ಬಿದ್ದಿರುವ ಬಗ್ಗೆ ಶಂಕಿಸಲಾಗಿದೆ. ಕಳೆದ ರಾತ್ರಿಯೇ ಚರಂಡಿ ಒಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಪಾಲಿಕೆಯ ದಿವ್ಯ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವು ಎನ್ನಲಾಗುತ್ತಿದೆ. ಸ್ಥಳಕ್ಕೆ ಬಸವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಮತ್ತಷ್ಟು ಮಾಹಿತಿ ಬೆಳಕಿಗೆ; ಶುಕ್ರವಾರ ಆರಗ ಜ್ಞಾನೇಂದ್ರ ಸಭೆ

ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಆಟವಾಡುತ್ತಿದ್ದ ಬಾಲಕ ಸಾವು; ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಯುವಕನ ಶವ ಪತ್ತೆ