ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಆಟವಾಡುತ್ತಿದ್ದ ಬಾಲಕ ಸಾವು; ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಯುವಕನ ಶವ ಪತ್ತೆ

ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದ ಕಾವೇರಿ ಗಾರ್ಡನ್ ಸಿಟಿ ಲೇಔಟ್ ನಲ್ಲಿ ನಿರ್ಮಾಣ ಮಾಡಲಾಗ್ತಿದ್ದ ನೀರಿನ ಟ್ಯಾಂಕ್ ಕುಸಿದು ಈ ಅವಘಡ ಸಂಭವಿಸಿದೆ. ಟ್ಯಾಂಕ್ ಸಮೀಪ ಆಟವಾಡುತ್ತಿದ್ದ ಸುದೀಪ್ ಮತ್ತು ಪ್ರದೀಪ್ ಸಹೋದರರ ಪೈಕಿ ಸುದೀಪ್ (14) ಸಾವನ್ನಪ್ಪಿದ್ದಾನೆ.

ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಆಟವಾಡುತ್ತಿದ್ದ ಬಾಲಕ ಸಾವು; ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಯುವಕನ ಶವ ಪತ್ತೆ
ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಆಟವಾಡುತ್ತಿದ್ದ ಬಾಲಕ ಸಾವು; ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಯುವಕನ ಶವ ಪತ್ತೆ

ಕೊಪ್ಪಳ: ಚಳ್ಳೂರು-ಹಗೇದಾಳದ ಪ್ರೌಢಶಾಲೆ ಆವರಣದಲ್ಲಿ ಒಬ್ಬ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ರಮೇಶ್ ಯಂಕಪ್ಪ ಭೋಗಾಪುರ (18) ಶವ ಪತ್ತೆಯಾಗಿದೆ. ಯುವಕನನ್ನು ವಿದ್ಯುತ್‌ ವಯರ್​​ನಿಂದ ಬಿಗಿದು ಕೊಲೆ ಮಾಡಿ, ನೇಣು ಹಾಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕಾರಟಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಶಿರಾ: ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ತುಮಕೂರು: ಶಿರಾದ ಎಪಿಎಂಸಿ ಯಾರ್ಡ್ ನಲ್ಲಿ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೋಹನ್ ಕುಮಾರ್ 25 ಆತ್ಮಹತ್ಯೆ ಮಾಡಿಕೊಂಡ ಯುವಕ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಶಿರಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೈಸೂರು: ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಾಲಕ ಸಾವು

ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಾಲಕ ಸಾವಿಗೀಡಾಗಿದ್ದಾನೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ ಘಟನೆ ನಡೆದಿದೆ.

ಗ್ರಾಮದ ಕಾವೇರಿ ಗಾರ್ಡನ್ ಸಿಟಿ ಲೇಔಟ್ ನಲ್ಲಿ ನಿರ್ಮಾಣ ಮಾಡಲಾಗ್ತಿದ್ದ ನೀರಿನ ಟ್ಯಾಂಕ್ ಕುಸಿದು ಈ ಅವಘಡ ಸಂಭವಿಸಿದೆ. ಟ್ಯಾಂಕ್ ಸಮೀಪ ಆಟವಾಡುತ್ತಿದ್ದ ಸುದೀಪ್ ಮತ್ತು ಪ್ರದೀಪ್ ಸಹೋದರರ ಪೈಕಿ ಸುದೀಪ್ (14) ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಬಾಲಕ ಪ್ರದೀಪ್‌ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕರಿಬ್ಬರೂ ಹುಲ್ಲೇನಹಳ್ಳಿ ಗ್ರಾಮದ ಮಂಜುನಾಯಕ ಅವರ ಪುತ್ರರು. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

Bangalore Crime: ಬನಶಂಕರಿ 6ನೇ ಹಂತದ ಚಿಕ್ಕೇಗೌಡನಪಾಳ್ಯದ ಬಳಿ ಅರೆಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ

ಒತ್ತೆಹಣಕ್ಕಾಗಿ ಅಪಹೃತ ಬಾಲಕನ ಬರ್ಬರ ಹತ್ಯೆ: ನಂಜಾಪುರದಲ್ಲಿ ಶವ ಪತ್ತೆ

(water tank collapsed boy died in hunsur and youth found hanged in koppal high school)

Read Full Article

Click on your DTH Provider to Add TV9 Kannada