ಮುಖ್ಯಮಂತ್ರಿಯಾಗಿದ್ದಾಗ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ತಾವು ಗೆಲ್ಲುತ್ತಾರೆಯೇ? ಸಿದ್ದರಾಮಯ್ಯ, ಸಿಎಂ

ಮುಖ್ಯಮಂತ್ರಿಯಾಗಿದ್ದಾಗ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ತಾವು ಗೆಲ್ಲುತ್ತಾರೆಯೇ? ಸಿದ್ದರಾಮಯ್ಯ, ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 27, 2024 | 2:25 PM

2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ್ಯೂ ತಮ್ಮ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರಂತೆಯೇ? ಅವರು ಎಷ್ಟೇ ಭಾವನಾತ್ಮಕವಾಗಿ ಮಾತಾಡಿದರೂ ಮಂಡ್ಯದಲ್ಲಿ ಗೆಲ್ಲಲಾಗಲ್ಲ. ಹಾಸನದವರಾಗಿರುವ ಕುಮಾರಸ್ವಾಮಿಗೆ ಮಂಡ್ಯ ಹೇಗೆ ಕರ್ಮಭೂಮಿಯಾದೀತು ಅಂತ ಸಿದ್ದರಾಮಯ್ಯ ಪ್ರಶ್ನಿಸಿದರು.

ಮೈಸೂರು: ಕಳೆದ 3-4 ದಿನಗಳಿಂದ ಮಾಧ್ಯಮಗಳ ಕಣ್ಣಿಗೆ ಬಿದ್ದಿರದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ನಗರದಲ್ಲಿ ಸಿಕ್ಕರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha seat) ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸ್ಪರ್ಧಿಸಲಿರುವುದು ಪಕ್ಕಾ ಆಗಿದ್ದು ಅವರು ಮಂಡ್ಯವನ್ನು ತಮ್ಮ ಕರ್ಮಭೂಮಿ ಅನ್ನುತ್ತಾ ಎಮೋಶನಲ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಅದೇ ಸಂಗತಿಯನ್ನು ಪತ್ರಕರ್ತರು ಇಂದು ಮೈಸೂರಲ್ಲಿ ಪ್ರಸ್ತಾಪಿಸಿ ಕುಮಾರಸ್ವಾಮಿ ಎದುರು ಕಾಂಗ್ರೆಸ್ ಹೊಸಮುಖವನ್ನು ಕಣಕ್ಕಿಳಿದೆಯಲ್ಲ, ಅವರು ದುರ್ಬಲ ಅಭ್ಯರ್ಥಿ ಅನಿಸುತ್ತಿಲ್ಲವೇ ಅಂದಾಗ ಸಿಡುಕಿದ ಸಿದ್ದರಾಮಯ್ಯ, ಸ್ಟಾರ್ ಚಂದ್ರು ಮಂಡ್ಯ ಕ್ಷೇತ್ರಕ್ಕೆ ಅಪರಿಚಿತರಲ್ಲ, ಅವರು ನಾಗಮಂಗಲದವರು ಮತ್ತು ಯಾವ ದೃಷ್ಟಿಯಿಂದಲೂ ವೀಕ್ ಕ್ಯಾಂಡಿಡೇಟ್ ಅಲ್ಲ ಎಂದು ಹೇಳಿದರು. 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ್ಯೂ ತಮ್ಮ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರಂತೆಯೇ? ಅವರು ಎಷ್ಟೇ ಭಾವನಾತ್ಮಕವಾಗಿ ಮಾತಾಡಿದರೂ ಮಂಡ್ಯದಲ್ಲಿ ಗೆಲ್ಲಲಾಗಲ್ಲ. ಹಾಸನದವರಾಗಿರುವ ಕುಮಾರಸ್ವಾಮಿಗೆ ಮಂಡ್ಯ ಹೇಗೆ ಕರ್ಮಭೂಮಿಯಾದೀತು ಅಂತ ಸಿದ್ದರಾಮಯ್ಯ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ