ಕರ್ನಾಟಕದ ಈ ಭಾಗದಲ್ಲಿ ಎರಡು ರೈಲು ಸಂಚಾರ ಭಾಗಶಃ ರದ್ದು: ವಿವರ ಇಲ್ಲಿದೆ

ಕುಪ್ಪಂ ಮತ್ತು ಮಲ್ಲನೂರು ನಿಲ್ದಾಣಗಳ ನಡುವಿನ ನಿರ್ವಹಣಾ ಕಾಮಗಾರಿಯಿಂದಾಗಿ ನೈಋತ್ಯ ರೈಲ್ವೆ ಕೆಲ ರೈಲು ಸೇವೆಗಳನ್ನು ರದ್ದುಪಡಿಸಿದ್ದು, ಮತ್ತೆ ಕೆಲ ರೈಲುಗಳನ್ನು ಭಾಗಶಃ ರದ್ದುಪಡಿಸಿದೆ. ಜೊತೆಗೆ ಎಸ್‌ಎಂವಿಟಿ ಬೆಂಗಳೂರು ಟು ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲನ್ನು ಮರುನಿಗದಿಪಡಿಸಲಾಗಿದೆ. ಯಾವೆಲ್ಲಾ ರೈಲುಗಳು ರದ್ದು ಮತ್ತು ಭಾಗಶಃ ರದ್ದು ತಿಳಿಯಿರಿ.

ಕರ್ನಾಟಕದ ಈ ಭಾಗದಲ್ಲಿ ಎರಡು ರೈಲು ಸಂಚಾರ ಭಾಗಶಃ ರದ್ದು: ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ

Updated on: May 19, 2025 | 6:39 PM

ಬೆಂಗಳೂರು, ಮೇ 19: ಕುಪ್ಪಂ ಮತ್ತು ಮಲ್ಲನೂರು (Kuppam and Mulanur) ನಿಲ್ದಾಣಗಳ ಮಧ್ಯೆ ನಿರ್ವಹಣಾ ಕಾಮಗಾರಿ ನಿಮಿತ್ತ ಕೆಲ ರೈಲು ಸೇವೆಗಳನ್ನು ರದ್ದುಗೊಳಿಸಿದ್ದು, ಇನ್ನು ಕೆಲ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಈ ಕುರಿತಾಗಿ ನೈರುತ್ಯ ರೈಲ್ವೆ (South Western Railway) ತನ್ನ ಅಧಿಕೃತ ಸೋಶಿಯಲ್​​ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಹಾಗಾದರೆ ಯಾವೆಲ್ಲಾ ರೈಲು ಸೇವೆಗಳು ರದ್ದು ಮತ್ತು ಭಾಗಶಃ ರದ್ದು ಗೊಳಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ರದ್ದು ಮತ್ತು ಭಾಗಶಃ ರದ್ದಾದ ರೈಲು ಸೇವೆಗಳು ಹೀಗಿವೆ

  • ರೈಲು ಸಂಖ್ಯೆ 66527: ಕುಪ್ಪಂ ಟು ಬಂಗಾರಪೇಟೆ ಮೆಮು ರೈಲು ಸೇವೆಯನ್ನು ಮೇ 22, 29 ಮತ್ತು ಜೂನ್​ 3 ರಂದು ರದ್ದುಗೊಳಿಸಲಾಗುವುದು.

ನೈರುತ್ಯ ರೈಲ್ವೆ ಟ್ವೀಟ್​

  • ರೈಲು ಸಂಖ್ಯೆ 66534: ಕೃಷ್ಣರಾಜಪುರಂ ಟು ಕುಪ್ಪಂ ಮೆಮು ರೈಲು ಸೇವೆಯನ್ನು ಮೇ 22, 29 ಮತ್ತು ಜೂನ್​​ 3 ರಂದು ಬಂಗಾರಪೇಟೆ ಮತ್ತು ಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹೆಚ್​ಬಿಅರ್ ಲೇಔಟ್​ನಲ್ಲಿ ಮಳೆಯಿಂದಾಗಿ ರಾಜಾ ಕಾಲುವೆಯ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅಸಹನೀಯ ಸನ್ನಿವೇಶ

ಎಸ್​​ಎಂವಿಟಿ ಬೆಂಗಳೂರು ಟು ಗೋರಖ್‌ಪುರ ಎಕ್ಸ್‌ಪ್ರೆಸ್ ಮರು ನಿಗದಿ

ಇನ್ನು ರೈಲು ಸಂಖ್ಯೆ 06529: ಎಸ್​​ಎಂವಿಟಿ ಬೆಂಗಳೂರು ಟು ಗೋರಖ್‌ಪುರ ಎಕ್ಸ್‌ಪ್ರೆಸ್​ ಇಂದು SMVT ಬೆಂಗಳೂರಿನಿಂದ ರಾತ್ರಿ 11.30ಕ್ಕೆ ಹೊರಡಲಿದೆ. ಕೆಲ ಕಾರ್ಯಾಚರಣೆಯ ಕಾರಣಗಳಿಂದಾಗಿ ಮರು ನಿಗದಿಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.