ಕುಶ ಆನೆ ಇನ್ನು ಸ್ವತಂತ್ರ; ರೇಡಿಯೋ ಕಾಲರ್ ಅಳವಡಿಸಿ ಅರಣ್ಯಕ್ಕೆ ಬಿಟ್ಟ ಇಲಾಖೆ

ಅಗತ್ಯ ಸಿದ್ಧತೆಗಳನ್ನು ನಡೆಸಿ ಕುಶನನ್ನು ಬಿಡುಗಡೆ ಮಾಡಬೇಕಾದ ಪ್ರದೇಶವನ್ನು ಗುರುತಿಸಿ, ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕುಶ ಆನೆ ಇನ್ನು ಸ್ವತಂತ್ರ; ರೇಡಿಯೋ ಕಾಲರ್ ಅಳವಡಿಸಿ ಅರಣ್ಯಕ್ಕೆ ಬಿಟ್ಟ ಇಲಾಖೆ
ಕುಶ ಆನೆ
Follow us
TV9 Web
| Updated By: guruganesh bhat

Updated on: Jun 04, 2021 | 5:18 PM

ಕುಶ ಆನೆಯನ್ನು ದುಬಾರೆ ಶಿಬಿರದಿಂದ ಕರೆದೊಯ್ದು ನೆನ್ನೆ ಸಂಜೆ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ಇನ್ನುಮುಂದೆ ಕುಶ ಬಂಧಮುಕ್ತ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ವಶದಲ್ಲಿದ್ದ ಆನೆ ಕುಶನನ್ನು ಸ್ವತಂತ್ರವಾಗಿ ಅರಣ್ಯದಲ್ಲಿ ಬಿಡಲು ಈ ಹಿಂದೆ ನಡೆದ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಅಗತ್ಯ ಸಿದ್ಧತೆಗಳನ್ನು ನಡೆಸಿ ಕುಶನನ್ನು ಬಿಡುಗಡೆ ಮಾಡಬೇಕಾದ ಪ್ರದೇಶವನ್ನು ಗುರುತಿಸಿ, ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಲಯಾರಣ್ಯಾಧಿಕಾರಿ ಅನನ್ಯ ಕುಮಾರ್ ಜೆ, ಉಪ ವಲಯ ಅರಣ್ಯಾಧಿಕಾರಿ ಕೆ ಪಿ ರಂಜನ್ ಹಾಗೂ ಅರಣ್ಯ ಪಶು ವೈದ್ಯಾಧಿಕಾರಿ ಡಾಕ್ಟರ್ ವಾಸಿಂ ಮಿರ್ಜಾ ಹಾಗೂ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಕುಶ ಬಿಡುಗಡೆಯ ಸಂದರ್ಭದಲ್ಲಿ ಹಾಜರಿದ್ದು ಬೀಳ್ಕೊಟ್ಟರು.

ಕುಶ ಆನೆಯ ಸ್ವಗತ ಹೀಗಿರಬಹುದೇ? ನಾನು ಕುಶ, ಈಗ ಬಂಧ ಮುಕ್ತ ಕುಶ, ನಾನೀಗ ಸ್ವತಂತ್ರ, ಮುಕ್ತ..ಮುಕ್ತ.. ಮುಕ್ತ.. ಸಚಿವ ಅರವಿಂದ ಲಿಂಬಾವಳಿ ಅವರೇ ನಿಮಗೆ ನನ್ನ ಕೃತಜ್ಞತೆಗಳು, ನೀವು ನನ್ನ ಬಗ್ಗೆ ಕಾಳಜಿವಹಿಸಿ, ಸಭೆ ಮಾಡಿ, ಅಧಿಕಾರಿಗಳಿಗೆ ನನ್ನ ಸ್ವತಂತ್ರ ಗೊಳಿಸಲು ಆದೇಶ ನೀಡದೇ ಹೋಗಿದ್ದರೆ ನಾನು ಇನ್ನೂ ದುಬಾರೆ ಶಿಬಿರದಲ್ಲಿ ಬಂಧನದಲ್ಲಿಯೇ ಇರಬೇಕಿತ್ತು. ನೆನ್ನೆ ಸಂಜೆ ಅರಣ್ಯಾಧಿಕಾರಿಗಳು ನನ್ನನ್ನು ನನ್ನ ವನ ಮನೆಯ ದಾರಿಗೆ ಕರೆದು ತಂದು ಬಿಟ್ಟು ಹೋದರು. ನನ್ನ ಕುತ್ತಿಗೆಯಲ್ಲಿ ರೇಡಿಯೋ ಕಾಲರ್ ಒಂದನ್ನು ಅಳವಡಿಸಿದ್ದಾರೆ. ನಾನೀಗ ನನ್ನ ನಿಸರ್ಗದ ಮನೆಗೆ ಹೊರಟಿದ್ದೇನೆ ಹೊರಡುವ ಮುನ್ನ ನಿಮಗೊಂದು ನಮನ.

ಅದ್ಯಾರು ನನ್ನ ದುಸ್ಥಿತಿಯನ್ನು ನಿಮ್ಮ ಗಮನಕ್ಕೆ ತಂದರೋ ಗೊತ್ತಿಲ್ಲ ,ಅವರಿಗೂ ಕೃತಜ್ಞತೆಗಳು.

ಇಂತಿ ನಿಮ್ಮವ ಕುಶ

ಇದನ್ನೂ ಓದಿ: Kerala budget: ಕೇರಳ ಬಜೆಟ್​ನಲ್ಲಿ ₹20,000 ಕೋಟಿ ಕೊವಿಡ್ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವ ಬಾಲಗೋಪಾಲ್

ಕೊವಿಡ್ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯತ್​ಗೂ 50 ಸಾವಿರ ಅನುದಾನ ಬಿಡುಗಡೆ: ಸಿಎಂ ಯಡಿಯೂರಪ್ಪ

(Kusha elephant today onwards independent says Minister Aravind Limbavali)