ಜುಲೈ 1ರಿಂದ ಶಾಲೆ ಆರಂಭ; ಶೈಕ್ಷಣಿಕ ವರ್ಷದ ಪರಿಷ್ಕೃತ ಕ್ಯಾಲೆಂಡರ್ ಇಲ್ಲಿದೆ

ಜುಲೈ 1ರಿಂದ ಶಾಲೆ ಆರಂಭ; ಶೈಕ್ಷಣಿಕ ವರ್ಷದ ಪರಿಷ್ಕೃತ ಕ್ಯಾಲೆಂಡರ್ ಇಲ್ಲಿದೆ
ಪ್ರಾತಿನಿಧಿಕ ಚಿತ್ರ

ಕೊವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್ ಲೈನ್, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ಅನುಸರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

TV9kannada Web Team

| Edited By: ganapathi bhat

Jun 04, 2021 | 5:10 PM

ಬೆಂಗಳೂರು: ಈ ಸಾಲಿನ (2021-22) ಶೈಕ್ಷಣಿಕ ವರ್ಷವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಶೈಕ್ಷಣಿಕ ವರ್ಷವನ್ನು ನಿಗದಿ ಮಾಡಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಮೊದಲ ಅವಧಿ ಜುಲೈ 1ರಿಂದ ಅಕ್ಟೋಬರ್ 10, 2021ರ ವರೆಗೆ ಇರಲಿದೆ. ಶೈಕ್ಷಣಿಕ ವರ್ಷದ 2ನೇ ಅವಧಿ ಅಕ್ಟೋಬರ್ 21, 2021ರಿಂದ ಏಪ್ರಿಲ್ 31, 2022ರ ವರೆಗೆ ಇರಲಿದೆ. ಈ ಮಧ್ಯೆ, ಅಕ್ಟೋಬರ್ 10ರಿಂದ 20ರವರೆಗೆ ದಸರಾ ರಜೆಗಳು ಇರಲಿವೆ ಎಂದು ಸೂಚಿಸಲಾಗಿದೆ.

ಮೇ 1, 2022ರಿಂದ ಮೇ 28, 2022ರವರೆಗೆ ಬೇಸಿಗೆ ರಜೆ ನಿಗದಿಪಡಿಸಲಾಗಿದೆ. ಮಕ್ಕಳ ದಾಖಲಾತಿ ಪ್ರಕ್ರಿಯೆಯು ಜೂನ್ 31ರ ಒಳಗೆ ಮುಕ್ತಾಯವಾಗಬೇಕು ಎಂದು ತಿಳಿಸಲಾಗಿದೆ. ಕೊವಿಡ್‌ನಿಂದ ಭೌತಿಕವಾಗಿ ಶಾಲೆ ನಡೆಸಲು ಆಗದಿದ್ದರೆ, ಆನ್‌ಲೈನ್, ದೂರದರ್ಶನ ಮೂಲಕ ಮಕ್ಕಳಿಗೆ ಪಾಠ ಮಾಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗಿದೆ.

ಈ ಮೊದಲು, ಜೂನ್ 15, 2021ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆರಂಭಿಸಲು ಸೂಚಿಸಲಾಗಿತ್ತು. ಆದರೆ, ಕೊವಿಡ್-19 ಸೋಂಕು ವ್ಯಾಪಕವಾದ ಹಿನ್ನೆಲೆ ಜೂನ್ 14ರ ವರೆಗೆ ಲಾಕ್​ಡೌನ್ ವಿಸ್ತರಿಸಲಾಗಿದೆ. ಅದರಂತೆ, ಜೂನ್ 14, 2021ರ ವರೆಗೆ ಶಾಲೆಗಳು ಓಪನ್ ಮಾಡುವ ಹಾಗಿಲ್ಲ. ಈ ಕಾರಣದಿಂದ ಶಿಕ್ಷಣ ಇಲಾಖೆ ಹೊಸದಾಗಿ ಶೈಕ್ಷಣಿಕ ವರ್ಷ ನಿಗದಿ ಮಾಡಿದೆ.

ಶಾಲಾ ಕರ್ತವ್ಯದ ದಿನಗಳ ವಿವರ ಹೀಗಿದೆ: ಮೊದಲನೇ‌ ಅವಧಿ: 01/07/2021 ರಿಂದ‌ 9/10/2021 ರವರೆಗೆ ಎರಡನೇ ಅವಧಿ : 21/10/2021 ರಿಂದ 30/04/22 ರವರೆಗೆ

ರಜಾ ದಿನಗಳ ವಿವರ ಇಲ್ಲಿದೆ: ದಸರಾ ರಜೆ: 10/10/2021 ರಿಂದ 20/10/2021 ರವರೆಗೆ ಬೇಸಿಗೆ ರಜೆ: 01/05/2022 ರಿಂದ 28/05/2022 ರವರೆಗೆ

ಕೊವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್ ಲೈನ್, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ಅನುಸರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಎಸ್‌ಎಸ್‌ಎಲ್​​ಸಿಗೆ ಪರೀಕ್ಷೆ: ಇದು ರಾಜ್ಯ ಸರ್ಕಾರದ ಬುದ್ಧಿಭ್ರಮಣೆ ನಿರ್ಧಾರ, ಬೃಹಸ್ಪತಿ ಶಿಕ್ಷಣ ಸಚಿವರ ನಿರ್ಧಾರ ಎಂದ ಹೆಚ್‌.ಡಿ. ಕುಮಾರಸ್ವಾಮಿ

ಕೊರೊನಾ ನಿಯಂತ್ರಣಕ್ಕೆ ಬಂದ್ರೆ ಮಾತ್ರ SSLC ಪರೀಕ್ಷೆ, ಬೆಳಗಾವಿ ಬಿಮ್ಸ್​ಗೆ ಶೀಘ್ರವೇ IAS ಆಡಳಿತಾಧಿಕಾರಿ: ಸಿಎಂ ಯಡಿಯೂರಪ್ಪ

Follow us on

Related Stories

Most Read Stories

Click on your DTH Provider to Add TV9 Kannada