ಬೆಂಗಳೂರಿನಲ್ಲಿ ನಡೆದ ಬೆಡ್ ಬ್ಲಾಕಿಂಗ್ ದಂಧೆಯ ಪಿನ್ ಟು ಪಿನ್ ಮಾಹಿತಿ.. ವಿಚಾರಣೆಯಲ್ಲಿ ಬಯಲಾಯ್ತು ಮತ್ತಷ್ಟು ಕಟು ಸತ್ಯಗಳು

ಎರಡನೆ ಅಲೆ ಏಪ್ರಿಲ್​ನಲ್ಲಿ ಶುರುವಾದಾಗ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಆದ್ರೆ ಕೆಲಸ ಮಾಡುವ ಸಿಬ್ಬಂದಿ ಕೊರತೆ ಎದುರಾಗಿತ್ತು. ಈ ವೇಳೆ ತರಾತುರಿಯಲ್ಲಿ ಮತ್ತೆ ಸಿಬ್ಬಂದಿಗಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದ್ರೆ ಸೋಂಕಿತರ ಸಂಖ್ಯೆಗೆ ತಕ್ಕ ಹಾಗೆ ಸಿಸ್ಟಮ್ ಅಪ್ಡೇಟ್ ಮಾಡಿರಲಿಲ್ಲಾ. ಹೀಗಾಗಿ ಬೆಡ್ ಅಲಾಟ್ ಮಾಡುವ ಸಮಯದಲ್ಲೇ ಸಮಸ್ಯೆ ಎದುರಾಗಿತ್ತು. ಇದು ಸದ್ಯ ಸಿಸಿಬಿ ಹೈ ಕೋರ್ಟ್ಗೆ ಸಲ್ಲಿಸಿರುವ ತನಿಖಾ ಪಾಲನ ವರದಿ ಸಾರಾಂಶ.

ಬೆಂಗಳೂರಿನಲ್ಲಿ ನಡೆದ ಬೆಡ್ ಬ್ಲಾಕಿಂಗ್ ದಂಧೆಯ ಪಿನ್ ಟು ಪಿನ್ ಮಾಹಿತಿ.. ವಿಚಾರಣೆಯಲ್ಲಿ ಬಯಲಾಯ್ತು ಮತ್ತಷ್ಟು ಕಟು ಸತ್ಯಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 04, 2021 | 5:11 PM

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಮಾಹಿತಿ ಬಯಲಾಗಿದೆ. ಬೆಡ್ ಬ್ಲಾಕ್ ಶುರುವಾಗಿದ್ದು ಯಾಕೆ? ಮತ್ತೆ ಯಾವಾಗ ಸಮಸ್ಯೆ ಶುರುವಾಗಿದ್ದು, ಬೆಡ್ ಬ್ಲಾಕ್ ಹೇಗೆಲ್ಲಾ ನಡೆದಿತ್ತು ಎನ್ನುವ ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ.  ಕೊರೊನಾ ಮಹಾಮಾರಿ ಎರಡನೇ ಅಲೆಗೆ ಯಾವ ಆಸ್ಪತ್ರೆಯಾಗಲಿ  ಅಥವಾ ಬಿಬಿಎಂಪಿ ತಯಾರಿ ಮಾಡಿಕೊಂಡಿರಲಿಲ್ಲ. ಮೊದಲ ಅಲೆ ಕಡಿಮೆ ಆಗಿದ್ದಾಗ ವಾರ್ ರೂಮ್ ಸಿಬ್ಬಂದಿಯನ್ನ ಕಡಿತಗೊಳಿಸಲಾಗಿತ್ತು. ಎರಡನೆ ಅಲೆ ಏಪ್ರಿಲ್​ನಲ್ಲಿ ಶುರುವಾದಾಗ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಆದ್ರೆ ಕೆಲಸ ಮಾಡುವ ಸಿಬ್ಬಂದಿ ಕೊರತೆ ಎದುರಾಗಿತ್ತು. ಈ ವೇಳೆ ತರಾತುರಿಯಲ್ಲಿ ಮತ್ತೆ ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದ್ರೆ ಸೋಂಕಿತರ ಸಂಖ್ಯೆಗೆ ತಕ್ಕ ಹಾಗೆ ಸಿಸ್ಟಂ ಅಪ್ಡೇಟ್ ಮಾಡಿರಲಿಲ್ಲ. ಹೀಗಾಗಿ ಬೆಡ್ ಅಲಾಟ್ ಮಾಡುವ ಸಮಯದಲ್ಲೇ ಸಮಸ್ಯೆ ಎದುರಾಗಿತ್ತು. ಇದು ಸದ್ಯ ಸಿಸಿಬಿ ಹೈ ಕೋರ್ಟ್ಗೆ ಸಲ್ಲಿಸಿರುವ ತನಿಖಾ ಪಾಲನ ವರದಿ ಸಾರಾಂಶ.

ಸೋಂಕಿತರ ಸಂಖ್ಯೆ ಬೆಡ್ ಅಲಾಟ್ನಲ್ಲಿ ಕಳ್ಳ ವ್ಯವಹಾರ ಇಲ್ಲಿಂದಲೇ ಸೋಂಕಿತರ ಸಂಖ್ಯೆ, ಬೆಡ್ ಅಲಾಟ್ನಲ್ಲಿ ಕಳ್ಳ ವ್ಯವಹಾರ ಶುರುವಾಗಿತ್ತು. ಮೂರು ಹಂತದಲ್ಲಿ ಬೆಡ್ ಬ್ಲಾಕ್ ಮಾಡವ ವ್ಯವಸ್ಥೆ ಇತ್ತು. ಒಂದು ಬಿಬಿಎಂಪಿ ವಲಯವಾರು ವಾರ್ ರೂಮ್. ಎರಡು ಬಿಎಂಪಿ ಕೇಂದ್ರ ವಾರ್ ರೂಮ್. ಮೂರು 108 ಕಂಟ್ರೋಲ್ ರೂಮ್. ಈ ರೀತಿ ಮೂರು ಹಂತಗಳಲ್ಲಿ ವಲಯವಾರು ವಾರ್ನಲ್ಲಿ ಅಕ್ರಮ ಬೆಡ್ ಬ್ಲಾಕ್ ಮಾಡಲಾಗಿದೆ. ಅವಶ್ಯಕತೆಗೆ ತಕ್ಕಹಾಗೆ ವಾರ್ ಸಿಬ್ಬಂದಿಯಿಂದ ಬೆಡ್ ಬ್ಲಾಕ್ ಮಾಡಿಸಿ ನೀಡಲಾಗಿದೆ.

ಇನ್ನು ಹಣಕಾಸಿಗೆ ಬೆಡ್ ಬ್ಲಾಕ್ ಮಾರಾಟ ಮಾಡುವುದಕ್ಕಿಂತ ಪ್ರಭಾವಿಗಳ ಮಾತಿಗೆ ಬೆಡ್ ನೀಡಿರುವುದೇ ಹೆಚ್ಚು. ಅಸ್ಪತ್ರೆಯಲ್ಲಿ ಬೆಡ್ ಖಾಲಿಯಾಗಿದ್ದರು ಅದನ್ನು ತೋರಿಸಿಲ್ಲ. ಆರೋಗ್ಯ ಮಿತ್ರ ವೆಬ್ ಸೈಟ್ನಲ್ಲಿ ರೋಗಿಯ ಮಾಹಿತಿ ಅಪ್ಡೇಟ್ ಮಾಡಬೇಕಿತ್ತು. ಅದ್ರೆ ಆಸ್ಪತ್ರೆಯ ಆಡಳಿತ ಮಂಡಳಿಗಳು ಹಾಗೂ ಆರೋಗ್ಯ ಮಿತ್ರ ಸಿಬ್ಬಂದಿ ಅಪ್ಡೇಟ್ ಮಾಡಿಲ್ಲ. ಅಪ್ಡೇಟ್ ಮಾಡದ ಕಾರಣ ಬೆಡ್ಗಳನ್ನು ಖಾಸಗಿ ಆಗಿಯೂ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಬಳಸಿಕೊಂಡಿವೆ. ಜೊತೆಗೆ ಸರಕಾರದಿಂದ ಹಣವನ್ನು ಪಡೆದಿದೆ. ಕೆಲವು ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರು ಡಿಸ್ಚಾರ್ಜ್ ಆಗಿ ಒಂದು ತಿಂಗಳು ಕಳೆದ್ರು ಸಹ ಅದನ್ನು ಅಪ್ಡೇಟ್ ಮಾಡಿಲ್ಲ. ವೆಬ್ ಸೈಟ್ನಲ್ಲಿ ಅಪ್ಡೇಟ್ ಮಾಡದ ಕಾರಣ ಸೋಂಕಿತರು ಬೆಡ್ ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಐಸಿಯು ಬೆಡ್ಗಳ ಕೊರತೆ ಇನ್ನು ಕೊರೊನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಕಾಡಿದ್ದ ಸಮಸ್ಯೆ ಎಂದರೆ ಅದು ಐಸಿಯು ಬೆಡ್ ಸಮಸ್ಯೆ. ವೆಂಟಿಲೇಟರ್ ಬೆಡ್ಗಳ ಕೊರತೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ನಗರದಲ್ಲಿ ಕೇವಲ 700 ವೆಂಟಿಲೇಟರ್ ಬೆಡ್ಗಳು ಮಾತ್ರ ಇವೆ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದ ಸಮಯದಲ್ಲಿ ವೆಂಟಿಲೇಟರ್ ಸಮಸ್ಯೆ ಅಗಿತ್ತು. ಈ ಕಾರಣಕ್ಕಾಗಿ ಸೋಂಕಿತರು ಹೆಚ್ಚು ಹೆಚ್ಚು ಸಾಯುವಂತೆ ಆಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಸೋಂಕಿತರ ಸಮಸ್ಯೆ ಹೆಚ್ಚಾಗಿದ್ದಾಗ ಬೆಡ್ ಸಮಸ್ಯೆ ಅಗಿದೆ ವಾರ್ ರೂಮ್ನಲ್ಲಿ ಕೆಲಸ ಮಾಡುತಿದ್ದವರಿಗೆ ಬೇಡಿಕೆ ಹೆಚ್ಚಾಗಿದೆ. ಬೇರೆ ಬೇರೆ ಮಾರ್ಗದಿಂದ ಬೆಡ್ ನೀಡುವ ಕೆಲಸ ಮಾಡಿದ್ದಾರೆ. ತನಿಖೆ ವೇಳೆ ಹಣಕ್ಕೆ ಮಾರಟವಾಗಿರುವ ಬೆಡ್ ಸಂಖ್ಯೆ ತೀರಾ ಕಡಿಮೆ ಕಂಡುಬಂದಿದೆ. ಹಣಕ್ಕೆ ಮಾರಾಟ ಮಾಡಿದ್ದ ಪೈಕೆ ಈಗಾಗಲೆ ಹನ್ನೆರಡು ಜನರನ್ನು ಅರೆಸ್ಟ್ ಮಾಡಲಾಗಿದೆ. ಕೇವಲ 25 ಕಿಂತ ಕಡಿಮೆ ಬೆಡ್ಗಳು ಮಾತ್ರ ನಗರದಲ್ಲಿ ಹಣಕ್ಕೆ ಮಾರಾಟ ಆಗಿದೆ. ಎಂಎಲ್ಎಗಳು , ಕಾರ್ಪೊರೇಟರ್ಗಳು, ಅಧಿಕಾರಿಗಳ ಮಾತಿಗೆ ಬೆಡ್ ನೀಡಿರುವ ಸಂಖ್ಯೆ ಹೆಚ್ಚಿದೆ. ಹನ್ನೆರಡು ಜನ ಇನ್ಸ್ಪೆಕ್ಟರ್, ಐದು ಎಸಿಪಿ, ಓರ್ವ ಡಿಸಿಪಿ ಹಾಗೂ ಓರ್ವ ಡಿಐಜಿ ನೇತ್ರತ್ವದಲ್ಲಿ ತನಿಖೆ ಮುಂದುವರೆದಿದೆ.

ಈ ದಂಧೆಯ ಪ್ರಮುಖ ಆರೋಪಿಗಳು: ಆರೋಪಿ ನಂಬರ್-1: ನೇತ್ರಾವತಿ , ಆರೋಪಿ ನಂಬರ್-2 : ರೋಹಿತ್ ಕುಮಾರ್ ನೇತ್ರಾವತಿ ಇಲ್ಲದೆ ರೋಹಿತ್ ಕುಮಾರ್ ಏನೇನು ಅಲ್ಲಾ. ನೇತ್ರಾವತಿ ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಕೆಲಸ ಮಾಡ್ತಿದ್ರು. ಬಳಿಕ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಲಿಂಕ್ ಬೆಳೆಸಿಕೊಂಡಿದ್ರು. ಕೊರೊನಾದಿಂದಾಗಿ ಕಳೆದ ವರ್ಷ ಕೆಲಸ ಕಳೆದುಕೊಂಡಿದ್ರು. ಬಳಿಕ ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸಿಕೊಂಡ್ರು. ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷದವರ ಜೊತೆಗೆ ಸಂಪರ್ಕ ಹೊಂದಿದ್ರು. ರಾಜಕೀಯ ಮುಖಂಡರ ಜೊತೆ ಕಾಣಿಸಿಕೊಂಡು ಅಧಿಕಾರಿಗಳಿಗೆ ಹತ್ತಿರವಾಗಿದ್ರು. ಜೊತೆಗೆ ತಾನೊಬ್ಬಳು ನಂಬಿಕಸ್ಥ ಬ್ರೋಕರ್ ಅನ್ನೊ ರೀತಿ ಬಿಂಬಿಸಿಕೊಂಡಿದ್ರು. ಇದನ್ನೆ ಬಂಡವಾಳ ಮಾಡಿಕೊಂಡು ಕೊವಿಡ್ ಎರಡನೆ ಅಲೆಯಲ್ಲಿ ಬೆಡ್ ಬ್ಲಾಕ್ ಮಾಡಿಸಿ ಹಣ ಮಾಡುವ ಕೆಲಸಕ್ಕೆ ಮುಂದಾಗಿದ್ರು.

ಆರೋಪಿ ನಂಬರ್-3: ಡಾ.ಸುರೇಶ್ ಇವರು ಬೊಮ್ಮನಹಳ್ಳಿ ವಲಯದ ವಾರ್ ರೂಮ್ ಇನ್ಚಾರ್ಜ್ ಆಗಿದ್ದರು. ವಲಯದ ಯಾವುದೆ ರೋಗಿಗೆ ಬೆಡ್ ಬುಕ್ ಮಾಡುವ ಅಧಿಕಾರ ವಾರ್ ರೂಮ್ನ ವೈದ್ಯರಿಗೆ ಇರುತ್ತೆ. ಈ ತನ್ನ ಅಧಿಕಾರವನ್ನೇ ದುರುಪಯೋಗ ಮಾಡಿಕೊಂಡಿಕೊಂಡು ತನ್ನದೆ ಜಾಲ ಬೆಳಸಿಕೊಂಡು ಬೆಡ್ ಬ್ಲಾಕ್ ಮಾಡುತಿದ್ದರು. ನಂತರ ಹಣ ಕೊಟ್ಟವರಿಗೆ ಬೆಡ್ ವ್ಯವಸ್ಥೆ ಮಾಡಿಸುತಿದ್ದರು.

ಆರೋಪಿ ನಂಬರ್-4: ಡಾ ರೆಹಾನ್ ಡಾ ರೆಹಾನ್ ಬೆಂಗಳೂರು ಸೌತ್ ಜೋನ್ ವಾರ್ ರೂಮ್ ಇನ್ಚಾರ್ಜ್. ಇವರ ಸಂಪರ್ಕದಲ್ಲಿ ನೇತ್ರಾವತಿ ಇದ್ದರು ಎನ್ನಲಾಗಿದೆ. ಹಣ ಪಡೆದ ಬಳಿಕ ಬ್ರೋಕರ್ಗಳು ತಿಳಿಸಿದ ವ್ಯಕ್ತಿಗಳಿಗೆ ಬೆಡ್ ಬುಕ್ ಮಾಡುತಿದ್ರು. ಹಣ ಪಡೆದವರಿಗೆ ಬೆಡ್ ನೀಡಿ ಅಕ್ರಮ ಎಸಗುತಿದ್ರು. ರೆಹಾನ್ ಸಹ ನೇತ್ರಾಳಿಗೆ ಹಲವಾರು ಬೆಡ್ ಬ್ಲಾಕ್ ಮಾಡಿಕೊಟ್ಟು ಹಣ ಪಡೆದಿರೊ ಅರೋಪ ಇದೆ.

ಆರೋಪಿ ನಂಬರ್-5: ಬಾಬು, ಶಾಸಕ ಸತೀಶ್ ರೆಡ್ಡಿ ಆಪ್ತ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ನೇತ್ರಾವತಿ ಪರಿಚಿತ ಬಾಬು. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ. ಬಾಬು ತಾನೊಬ್ಬ ಸಮಾಜ ಸೇವಕ ಎಂದು ಹೇಳಿಕೊಂಡಿದ್ದ. ನೇತ್ರಾವತಿ, ಬಾಬು ಮೂಲಕವೇ ಬೆಡ್ ಬುಕ್ ಮಾಡಿಸುತಿದ್ದರು. ನೇತ್ರಾವತಿ ಬಳಿ ಹಣ ಪಡೆದು ಬೆಡ್ ಬ್ಲಾಕ್ ಮಾಡುತಿದ್ದ. ಬಳಿಕ ಕೊವಿಡ್ ಬಂದು ಅಸ್ಪತ್ರೆ ಸೇರಿ ಮತ್ತೆ ಗುಣಮುಖನಾದ ಬಳಿಕ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ಸದ್ಯ ಸಿಸಿಬಿ ಹೈ ಕೋರ್ಟ್ಗೆ ತನಿಖಾ ಪಾಲನ ವರದಿ ನೀಡಿದೆ. ಇದುವರೆಗಿನ ತನಿಖಾ ಮಾಹಿತಿಯನ್ನ ಸಲ್ಲಿಸುತ್ತಿದೆ. ಇನ್ನೂ ಹಲವು ಪ್ರತಿಷ್ಠಿತ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ವಿಚಾರಣೆ ನಡೆಸಬೇಕಿದೆ. ಆಸ್ಪತ್ರೆ ಆಡಳಿತ ಮಂಡಳಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಮುಂದಿನ ದಿನದಲ್ಲಿ ಸಾಕಷ್ಟು ವಿಚಾರಣೆ ನಡೆಸುವುದಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಕಾಂಗ್ರೆಸ್​ನ ಕೆಲ ಬುದ್ಧಿಜೀವಿಗಳು ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ: ಸಂಸದ ತೇಜಸ್ವಿ ಸೂರ್ಯ