Tv9 Impact: ವಸತಿ ಶಾಲೆಯಲ್ಲಿ ಮೊದಲಿದ್ದ ಕುವೆಂಪು ಕವಿತೆಯ ಘೋಷವಾಕ್ಯ ಬರೆಸಿದ ಪ್ರಿನ್ಸಿಪಾಲ್

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಹಾಸ್ಟೆಲ್​​ನಲ್ಲಿ ಕುವೆಂಪು ಅವರ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಬರಹವನ್ನು ಬದಲಿಸಲಾಗಿತ್ತು. ಸದ್ಯ ಈಗ ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಬರಹವನ್ನು ಮೊದಲಿನಂತೆ ಬದಲಾಯಿಸಿದ್ದಾರೆ.

Tv9 Impact: ವಸತಿ ಶಾಲೆಯಲ್ಲಿ ಮೊದಲಿದ್ದ ಕುವೆಂಪು ಕವಿತೆಯ ಘೋಷವಾಕ್ಯ ಬರೆಸಿದ ಪ್ರಿನ್ಸಿಪಾಲ್
ಸಮಾಜ ಕಲ್ಯಾಣ ಇಲಾಖೆ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಆಯೇಷಾ ಬಾನು

Updated on:Feb 19, 2024 | 1:02 PM

ವಿಜಯಪುರ, ಫೆ.19: ವಿಜಯಪುರ (Vijayapura) ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು (Kuvempu)ಅವರ ಕವಿತೆಯ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಬರಹಕ್ಕೆ ಬದಲಾಗಿ, ‘ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಯಿಸಲಾಗಿದೆ. ಈ ಸಬಂಧ ಟಿವಿ9 (TV9) ವರದಿ ಮಾಡಿದ್ದು ಇದರಿಂದ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಮೊದಲಿದ್ದ ಬರಹವನ್ನೇ ಬರೆಸಲು ಸೂಚಿಸಿದೆ. ಸದ್ಯ ಈಗ ವಸತಿ ಶಾಲೆಯ ಪ್ರಿನ್ಸಿಪಾಲ್ ದುಂಡಪ್ಪ ಒಡಜೆ, ಹಾಸ್ಟೆಲ್​​ನಲ್ಲಿ ಮೊದಲಿದ್ದ ಘೋಷವಾಕ್ಯವನ್ನೇ ಬರೆಸಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಹಾಸ್ಟೆಲ್​​ನಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಬರಹ ಬದಲಿಸಲಾಗಿತ್ತು. ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆಸಲಾಗಿತ್ತು. ಈ ಬಗ್ಗೆ ಟಿವಿ9 ನಿರಂತರ ಸುದ್ದಿ ಬಿತ್ತರಿಸಿ ಸರ್ಕಾರಕ್ಕೆ ಪ್ರಶ್ನೆ ಮಾಡಿತ್ತು. ಸದ್ಯ ಈಗ ಟಿವಿ9 ವರದಿ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದ್ದು ವಸತಿ ಶಾಲೆ ಪ್ರಿನ್ಸಿಪಾಲ್​ ದುಂಡಪ್ಪ ಒಡಜೆ ಮೊದಲಿದ್ದ ಬರಹವನ್ನೇ ಬರೆಸಿದ್ದಾರೆ.

ಇದನ್ನೂ ಓದಿ: ಶಾಲೆಯ ಮೇಲಿನ ಬರಹ ಬದಲಾಯಿಸಿದಕ್ಕೆ ‘ಪ್ರಬುದ್ಧತೆ’ಯ ಸಮಾಜಾಯಿಷಿ ನೀಡಿದ ಪ್ರಿಯಾಂಕ್ ಖರ್ಗೆ ಅಪ್ರಬುದ್ಧರಂತೆ ಮಾತಾಡಿದರು!

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಪ್ರಿನ್ಸಿಪಾಲ್​ ದುಂಡಪ್ಪ ಒಡಜೆ, ರಾಷ್ಟ್ರಕವಿ ಕುವೆಂಪು ಅವರ ಕವನ ಸಾಲುಗಳನ್ನು ತಿರುಚಿ ಬರಹ ಬರೆಯಲಾಗಿತ್ತು. ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂದು ಪುನಃ ಮೊದಲಿನಂತೆ ಬರೆಸಿದ್ದೇವೆ ಎಂದು ಘಾಳಪೂಜಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಮಾಹಿತಿ ನೀಡಿದರು. ಟೆಲಿಗ್ರಾಂ ಗ್ರೂಪ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ ಬದಲಾವಣೆ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ನಾವು ಬರೆಸಿದ ಬರಹವನ್ನು ಬದಲಾವಣೆ ಮಾಡಿದ್ದೇವೆ. ಈಗ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂದು ಬರೆಸಿದ್ದೇವೆ ಎಂದು ತಿಳಿಸಿದರು.

ಸದ್ಯ ಈ ಮೂಲಕ ವಿವಾದಕ್ಕೆ ಈಡಾಗಿದ್ದ ಘಟನೆಗೆ ತೇಪೆ ಹಚ್ಚುವ ಕೆಲಸವನ್ನು ಇಲಾಖೆಯ ಆಧಿಕಾರಿಗಳು ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಸಕ್ತರು ಘಟನೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಟಿವಿ9 ವರದಿ

ಇನ್ನು ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರ ಸಂಬಂಧದ ಟಿವಿ9 ವರದಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಶಾಸಕ ವಿಜಯೇಂದ್ರ ಸದನದಲ್ಲಿ ಪ್ರಸ್ತಾಪ ಮಾಡಿದರು. ಕುವೆಂಪು ಅವರಿಗೆ ಅವಮಾನಿಸುವ ರೀತಿಯಲ್ಲಿ ಬದಲಿಸಿದ್ದಾರೆ ಎಂದರು. ನಾಳೆ ಸರ್ಕಾರ ಈ ಬಗ್ಗೆ ಉತ್ತರ ಕೊಡುತ್ತೆ ಎಂದು ಸ್ಪೀಕರ್ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:56 pm, Mon, 19 February 24