ಅಕ್ರಮವಾಗಿ ಕೊವಿಶೀಲ್ಡ್ ಲಸಿಕೆ ಹಾಕಿ ಹಣ ಮಾಡುತ್ತಿದ್ದ ಲೇಡಿ ಡಾಕ್ಟರ್ ವಜಾ
ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಅರ್ಹರಿಗೆ ನೀಡಬೇಕಿದ್ದ ಕೊರೊನಾ ಲಸಿಕೆಯನ್ನು ಹಣ ಪಡೆದು ಅಕ್ರಮವಾಗಿ ನೀಡುತ್ತಿದ್ದ ಬಿಬಿಎಂಪಿ ಗುತ್ತಿಗೆ ವೈದ್ಯೆಯನ್ನೂ ಸೇರಿ ಇಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದರು. ಈ ಅಕ್ರಮ ವ್ಯಾಕ್ಸಿನೇಶನ್ ದಂಧೆ ಪ್ರಕರಣ ಹಿನ್ನೆಲೆಯಲ್ಲಿ ಈಗ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಬೆಂಗಳೂರು: ಅಕ್ರಮವಾಗಿ ಕೊವಿಶೀಲ್ಡ್ ಲಸಿಕೆ ಮಾರಾಟ ಪ್ರಕರಣದಡಿ ನಗರದ ಮಂಜುನಾಥನಗರದ ಆರೋಗ್ಯ ಕೇಂದ್ರದ ವೈದ್ಯೆ ಡಾ. ಎಂ.ಕೆ.ಪುಷ್ಪಿತರನ್ನು ಕರ್ತವ್ಯದಿಂದ ವಜಾಗೊಳಿಸಿ ಬಿಬಿಎಂಪಿ ಆದೇಶಿಸಿದೆ. ಅನಧಿಕೃತವಾಗಿ ಕೋವಿಡ್ 19 ಲಸಿಕಾ ಚುಚ್ಚುಮದ್ದನ್ನು ಮಾರಾಟ ಮಾಡುತ್ತಿದ್ದ ವೇಳೆ ಸಾಕ್ಷಿ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
ಇದನ್ನು ಆಧರಿಸಿ ವೈದ್ಯರ ಕರ್ತವ್ಯಲೋಪವೆಂದು ಪರಿಗಣಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆಯ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಅರ್ಹರಿಗೆ ನೀಡಬೇಕಿದ್ದ ಕೊರೊನಾ ಲಸಿಕೆಯನ್ನು ಹಣ ಪಡೆದು ಅಕ್ರಮವಾಗಿ ನೀಡುತ್ತಿದ್ದ ಬಿಬಿಎಂಪಿ ಗುತ್ತಿಗೆ ವೈದ್ಯೆಯನ್ನೂ ಸೇರಿ ಇಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದರು. ಈ ಅಕ್ರಮ ವ್ಯಾಕ್ಸಿನೇಶನ್ ದಂಧೆ ಪ್ರಕರಣ ಹಿನ್ನೆಲೆಯಲ್ಲಿ ಈಗ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಮಂಜುನಾಥ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ.ಪುಷ್ಪಿತಾ(25) ಹಾಗೂ ಆಕೆಯ ಜೊತೆ ಕೆಲಸ ಮಾಡುತ್ತಿದ್ದ ಪ್ರೇಮಾ(34) ಬಂಧಿತ ಆರೋಪಿಗಳಾಗಿದ್ದರು. ಇವರು ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡದೆ, ಪರಿಚಯದ ಪ್ರೇಮಾಳ ಮನೆಗೆ ಲಸಿಕೆ ತೆಗೆದುಕೊಂಡು ಹೋಗಿ 500 ರೂ ಗೆ ಒಂದು ಡೋಸ್ ಲಸಿಕೆ ನೀಡುತ್ತಿದ್ದರು. ಏಪ್ರಿಲ್ 23ರಿಂದ ಇವರು ಈ ದಂಧೆ ನಡೆಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಪ್ರತಿ ದಿನ ಮಧ್ಯಾಹ್ನ 4 ಗಂಟೆಯ ನಂತರ ಮನೆಯಲ್ಲಿ ಲಸಿಕೆ ನೀಡುತ್ತಿದ್ದರು. ಲಸಿಕೆ ಪಡೆಯಲು ಇಚ್ಚಿಸಿದವರನ್ನು ಪ್ರೇಮಾಳ ಮನೆಗೆ ಕರೆಸಿಕೊಳ್ಳಲಾಗುತ್ತಿತ್ತು.
ಸಿಕ್ಕಿ ಬಿದ್ದಿದ್ದು ಹೇಗೆ? ಅಕ್ರಮ ಲಸಿಕೆ ನೀಡಿಕೆ ಬಗ್ಗೆ ಮಾಹಿತಿ ಪಡೆದ ಪಶ್ಚಿಮ ವಿಭಾಗದ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ಪೆಕ್ಟರ್ ಲೋಹಿತ್ ಖುದ್ದಾಗಿ ಲಸಿಕೆ ಪಡೆಯುವವರಂತೆ ಬಂದು ಅಕ್ರಮ ಲಸಿಕೆ ನೀಡುತ್ತಿದ್ದದನ್ನು ಖಚಿತಪಡಿಸಿಕೊಂಡಿದ್ದರು. ಈ ರೀತಿ ವೈದ್ಯೆ ಮತ್ತು ಸಹಾಯಕಿ ಅರೆಸ್ಟ್ ಆಗಿದ್ದರು. ಇನ್ನು ಅಕ್ರಮ ವ್ಯಾಕ್ಸಿನೇಷನ್ ಅನ್ನು ರೆಡ್ ಹ್ಯಾಂಡ್ ಆಗಿ ಹಿಡಿಯದಿದ್ರೆ ಸಾಕ್ಷಿಯೇ ಸಿಗುತ್ತಿರಲಿಲ್ಲ. ಅಕ್ರಮ ವ್ಯಾಕ್ಸಿನೇಷನ್ ನಲ್ಲಿ ಒಂದು ವ್ಯಾಕ್ಸಿನೇಷನ್ ಗೆ 500 ಹಣ ಪಡೆಯುತಿದ್ದರು. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವವರ ಬಳಿ ಆಧಾರ್ ಕಾರ್ಡ್ ಅನ್ನು ಪಡೆದು ಎಂಟ್ರಿ ಮಾಡುತಿದ್ರು. ವ್ಯಾಕ್ಸಿನೇಷನ್ಗೆ ಇರುವ ವೆಬ್ ಸೈಟ್ ನಲ್ಲಿ ಎಂಟ್ರಿ ಮಾಡಿ ಮೆಸೇಜ್ ಬರುವಂತೆ ಮಾಡುತ್ತಿದ್ದರು.
ಸಕ್ರಮವಾಗಿಯೇ ವ್ಯಾಕ್ಸಿನೇಷನ್ಗೆ ಇರುವ ನೀತಿ ನಿಯಮಗಳನ್ನೆ ಪಾಲಿಸುತ್ತಿದ್ದರು. ಒಂದು ದಿನಕ್ಕೆ ಸುಮಾರು 70 ಜನರಿಗೆ ವ್ಯಾಕ್ಸಿನೇಷನ್ ಹಾಕಿರುವ ಮಾಹಿತಿ ಸಿಕ್ಕಿದೆ. ಒಂದು ದಿನದಲ್ಲೇ ಅಕ್ರಮವಾಗಿ ಸುಮಾರು 30 ರಿಂದ 35 ಸಾವಿರ ಹಣ ಮಾಡುತಿದ್ದರು ಎಂದು ಹೇಳಲಾಗಿತ್ತು.
ಇದನ್ನೂ ಓದಿ: Karnataka Lockdown: ಕರ್ನಾಟಕದಲ್ಲಿ ಜೂನ್ 7ರ ಬೆಳಗ್ಗೆ 6ಗಂಟೆಯವರೆಗೂ ಲಾಕ್ಡೌನ್ ವಿಸ್ತರಣೆ; ಸಿಎಂ ಯಡಿಯೂರಪ್ಪ ಘೋಷಣೆ
ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ ( Lady doctor fired for illegally covering Covishield vaccine in Bengaluru)