‘ಲಕ್ಷ್ಮೀ’ ಬ್ಯಾಂಕ್​ ಮಹಾದೋಖಾ, ಹಿರಿಯ ಜೀವಗಳು ಕಂಗಾಲು!

ದಾವಣಗೆರೆ: ಲಕ್ಷ್ಮೀ ಕೋ ಆಪರೇಟಿವ್​​​ ಬ್ಯಾಂಕ್ ಹೆಸರಲ್ಲಿ ಕಾಂಚಾಣವನ್ನ ಇಟ್ಕೊಂಡಿರೋ ಈ ಬ್ಯಾಂಕ್​​​​ನಿಂದ ಹಿರಿಯ ಜೀವಗಳೆಲ್ಲ ಕಂಗಾಲಾಗಿವೆ. ಲಾಯರ್​ ರಸ್ತೆಯಲ್ಲಿರೋ ಈ ಬ್ಯಾಂಕ್​​ಗೆ ಹಣ ಕಟ್ಟಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಯಾಕಂದ್ರೆ, ಕಟ್ಟಿರೋ ಠೇವಣಿಗೆ ವರ್ಷದಿಂದ ಬಡ್ಡಿಕೊಟ್ಟಿಲ್ವಂತೆ. ಅಲ್ಲದೆ, ಬ್ಯಾಂಕ್​ ಹೆಸ್ರಲ್ಲಿ ಕೊಡ್ತಿರೋ ಚೆಕ್​​ ಬೌನ್ಸ್​​ ಆಗ್ತಿದೆ. ಹೀಗಾಗಿ, ಸುಮಾರು 20 ಕೋಟಿ ಹಣವನ್ನ ಠೇವಣಿ ದಾರರಿಗೆ ನೀಡಬೇಕಾಗಿದ್ದು, ಹಣ ವಾಪಸ್​ ನೀಡುವಂತೆ ಆಗ್ರಹಿಸಿ ಜನರೆಲ್ಲ ಪ್ರತಿಭಟನೆ ಕೂತಿದ್ದಾರೆ. ಬ್ಯಾಂಕ್​ನಲ್ಲಿ ಅವ್ಯವಹಾರ ಆರೋಪ:  ವೈದ್ಯ ಎಸ್​​.ಆರ್​.ಹೆಗಡೆ […]

‘ಲಕ್ಷ್ಮೀ’ ಬ್ಯಾಂಕ್​ ಮಹಾದೋಖಾ, ಹಿರಿಯ ಜೀವಗಳು ಕಂಗಾಲು!
Follow us
ಸಾಧು ಶ್ರೀನಾಥ್​
|

Updated on:Nov 23, 2019 | 12:04 PM

ದಾವಣಗೆರೆ: ಲಕ್ಷ್ಮೀ ಕೋ ಆಪರೇಟಿವ್​​​ ಬ್ಯಾಂಕ್ ಹೆಸರಲ್ಲಿ ಕಾಂಚಾಣವನ್ನ ಇಟ್ಕೊಂಡಿರೋ ಈ ಬ್ಯಾಂಕ್​​​​ನಿಂದ ಹಿರಿಯ ಜೀವಗಳೆಲ್ಲ ಕಂಗಾಲಾಗಿವೆ. ಲಾಯರ್​ ರಸ್ತೆಯಲ್ಲಿರೋ ಈ ಬ್ಯಾಂಕ್​​ಗೆ ಹಣ ಕಟ್ಟಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಯಾಕಂದ್ರೆ, ಕಟ್ಟಿರೋ ಠೇವಣಿಗೆ ವರ್ಷದಿಂದ ಬಡ್ಡಿಕೊಟ್ಟಿಲ್ವಂತೆ. ಅಲ್ಲದೆ, ಬ್ಯಾಂಕ್​ ಹೆಸ್ರಲ್ಲಿ ಕೊಡ್ತಿರೋ ಚೆಕ್​​ ಬೌನ್ಸ್​​ ಆಗ್ತಿದೆ. ಹೀಗಾಗಿ, ಸುಮಾರು 20 ಕೋಟಿ ಹಣವನ್ನ ಠೇವಣಿ ದಾರರಿಗೆ ನೀಡಬೇಕಾಗಿದ್ದು, ಹಣ ವಾಪಸ್​ ನೀಡುವಂತೆ ಆಗ್ರಹಿಸಿ ಜನರೆಲ್ಲ ಪ್ರತಿಭಟನೆ ಕೂತಿದ್ದಾರೆ.

ಬ್ಯಾಂಕ್​ನಲ್ಲಿ ಅವ್ಯವಹಾರ ಆರೋಪ:  ವೈದ್ಯ ಎಸ್​​.ಆರ್​.ಹೆಗಡೆ ಅವ್ರು, ಬ್ಯಾಂಕ್​​​ ಅಧ್ಯಕ್ಷರಾಗಿದ್ದಾಗ ಅವ್ಯವಹಾರ ನಡೆದಿರೋ ಆರೋಪವಿದೆ. ಬ್ಯಾಂಕ್​​​​​​ನ ನಷ್ಟದ ವಿಷ್ಯ ಗೊತ್ತಾಗೇ, ಅವ್ರ ನಂತರ ಅಧ್ಯಕ್ಷರಾದ ಮೋಹನ್​ ದೀಕ್ಷಿತ್​​ 20 ದಿನದ ಹಿಂದೆ ಅವ್ರು ರಾಜಿನಾಮೆ ಕೊಟ್ರು. ಇನ್ನು, 20 ಮಂದಿ ಪ್ರಭಾವಿಗಳು ಬ್ಯಾಂಕ್​​ನಿಂದ ಕೋಟ್ಯಂತರ ರೂ. ಸಾಲ ಪಡೆದಿದ್ದು, ಆ ಹಣವನ್ನ ರಿಯಲ್​ ಎಸ್ಟೇಟ್​​​ನಲ್ಲಿ ತೊಡಗಿಸಿದ್ದಾರೆ. ಆದ್ರೀಗ ಸೈಟ್​ಗಳ ದರ ಕುಸಿದಿದ್ದು, ಬಂಡವಾಳ ವಾಪಸ್​​ ಬರುತ್ತಿಲ್ಲ.

ಇದಕ್ಕೆಲ್ಲ ಕಾರಣವಾದ ವ್ಯವಸ್ಥಾಪಕ ಸತೀಶ್​ ಅವ್ರು ಬ್ಯಾಂಕ್​ಗೆ ಬರುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದ್ದು, ಸಹಕಾರ ಇಲಾಖೆ ತನಿಖೆಗೆ ಆದೇಶ ನೀಡಿದೆ. ಕೈಯಲ್ಲಿ ಇದ್ದ ಹಣವನ್ನ ಠೇವಣಿ ಕಟ್ಟಿದ ಜನರೆಲ್ಲ ಈಗ ಬರಿಗೈ ಆಗಿದ್ದಾರೆ. ಬೀದಿಯಲ್ಲಿ ನಿಂತಿರೋ ಈ ಹಿರಿಯ ಜೀವಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ.

Published On - 8:15 am, Sat, 23 November 19

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ