ಲಾಕ್​ಡೌನ್ ಪ್ಯಾಕೇಜ್: ವಾಹನ ಚಾಲಕರು ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಘೋಷಣೆ

| Updated By: ganapathi bhat

Updated on: Jul 06, 2021 | 6:52 PM

ಆಟೋ, ಟ್ಯಾಕ್ಸಿ, ಕಾರು ಚಾಲಕರು ಕೊರೊನಾ ಲಾಕ್​ಡೌನ್ ಪರಿಹಾರ ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸಾರಿಗೆ ಇಲಾಖೆ ಪ್ರಕಟಿಸಿದೆ.

ಲಾಕ್​ಡೌನ್ ಪ್ಯಾಕೇಜ್: ವಾಹನ ಚಾಲಕರು ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಘೋಷಣೆ
ಸೇವಾಸಿಂಧು ಪೋರ್ಟಲ್
Follow us on

ಬೆಂಗಳೂರು: ಆಟೋ, ಟ್ಯಾಕ್ಸಿ, ಕಾರು ಚಾಲಕರಿಗೆ ಪರಿಹಾರ ವಿಚಾರವಾಗಿ ಸಾರಿಗೆ ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಕೊರೊನಾ ಲಾಕ್​ಡೌನ್ ಸಂಕಷ್ಟ, ಆರ್ಥಿಕ ಹೊಡೆತ ಸುಧಾರಿಸಿಕೊಳ್ಳಲು ಕರ್ನಾಟಕ ಸರ್ಕಾರ ಘೋಷಿಸಿರುವ ಪರಿಹಾರ ಪ್ಯಾಕೇಜ್ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ್ದ 3000 ರೂಪಾಯಿ ಪರಿಹಾರ ಪ್ಯಾಕೇಜ್​ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸಾರಿಗೆ ಇಲಾಖೆ ತಿಳಿಸಿದೆ.

ಆಟೋ, ಟ್ಯಾಕ್ಸಿ, ಕಾರು ಚಾಲಕರು ಕೊರೊನಾ ಲಾಕ್​ಡೌನ್ ಪರಿಹಾರ ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಅರ್ಜಿ ಸಲ್ಲಿಸಲು ಜುಲೈ 15ರ ಸಂಜೆ 6 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸಾರಿಗೆ ಇಲಾಖೆ ಪ್ರಕಟಿಸಿದೆ. ಅದರಂತೆ, ಜುಲೈ 15, ಗುರುವಾರ ಸಂಜೆ 6 ಗಂಟೆಯವರೆಗೆ ಸಮಯಾವಕಾಶ ಇರಲಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಈ ಚಾಲಕರಲ್ಲಿ ಚೈತನ್ಯ ತುಂಬಲು ಪ್ರತಿ ಚಾಲಕರಿಗೂ ರಾಜ್ಯ ಸರ್ಕಾರ ತಲಾ ₹ 5 ಸಾವಿರ ಪರಿಹಾರ ಘೋಷಿಸಿತ್ತು. ಬಳಿಕ, ಪರಿಹಾರ ಮಂಜೂರಾತಿಗೆ ಸರ್ಕಾರ ಆದೇಶ ಹೊರಡಿಸಿತ್ತು.

ಅರ್ಜಿಗಳು ಸೇವಾಸಿಂಧು (seva sindhu) ಪೋರ್ಟಲ್ ಮೂಲಕ ಸ್ವೀಕೃತವಾಗಬೇಕು. ಮಾ. 24ರಂದು DL, FC ಹೊಂದಿದ್ದ ವಾಹನಗಳಿಗೆ ಅನ್ವಯ. ಆಧಾರ್​ ಕಾರ್ಡ್, DL, ವಾಹನ ನೋಂದಣಿ ಸಂಖ್ಯೆ ಕಡ್ಡಾಯ. ಮ್ಯಾಕ್ಸಿ‌ ಕ್ಯಾಬ್ ಚಾಲಕರಿಗೆ ಇದು ಅನ್ವಯವಾಗಲ್ಲ. ಪರಿಹಾರ ಧನ ಚಾಲಕರ ಖಾತೆಗೆ ಡಿಬಿಟಿ ಮೂಲಕ ಸಂದಾಯವಾಗಲಿದೆ. 1ಕ್ಕಿಂತ ಹೆಚ್ಚು ಆಟೋ, ಟ್ಯಾಕ್ಸಿ ಇದ್ರೆ ಡಬಲ್ ಪೇಮೆಂಟ್ ಇಲ್ಲ ಎಂದು ಸರ್ಕಾರ ಸ್ಷಷ್ಟಪಡಿಸಿತ್ತು.

ಇದನ್ನೂ ಓದಿ: ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರು ಕರ್ನಾಟಕ ಸರ್ಕಾರದ ಕೋವಿಡ್ ಪ್ಯಾಕೇಜ್ ರೂ. 3000 ಪಡೆಯುವುದು ಹೇಗೆ?

ಆಟೋ ಚಾಲಕರಿಗೆ ಇನ್ನೂ ಬಾರದ ಕೊವಿಡ್​ ಪರಿಹಾರ ಪ್ಯಾಕೇಜ್​; ಧಾರವಾಡ ಆಟೋ ಚಾಲಕರ ಆಕ್ರೋಶ

Published On - 6:33 pm, Tue, 6 July 21