‘ನನ್ನ ಮಗನ್ನ ಕಂಡ್ರೆ ED, PD, CD ನವರಿಗೆ ತುಂಬಾ ಪ್ರೀತಿ.. ಬೇಕಿದ್ರೆ ನನ್ನೂ ಕರೆದುಕೊಂಡು ಹೋಗಿ’
ಬೆಂಗಳೂರು: CBIನವರಿಗೆ ಬೇರೆ ಏನೂ ಕೆಲಸವಿಲ್ಲ ಎಂದು ಸಿಬಿಐ ದಾಳಿ ಬಗ್ಗೆ ರಾಮನಗರದಲ್ಲಿ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ ತಾಯಿ ಗೌರಮ್ಮ ಹೇಳಿದ್ದಾರೆ. ಟಿವಿ 9 ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ನನ್ನ ಮಗ ಕಂಡ್ರೆ ED, PD, CD, CBIನವರಿಗೆ ತುಂಬಾ ಪ್ರೀತಿ. ಅದಕ್ಕೆ ಅವನನ್ನ ಬಿಡಲ್ಲ ಎಂದು ಹೇಳಿದ್ದಾರೆ. ಬೇಕಿದ್ರೇ ಅವನನ್ನ ತಮ್ಮ ಮನೆಗೆ ಕರೆಸಿಕೊಂಡು ಹೋಗ್ಲಿ. ಬೇಕಿದ್ರೆ ನನ್ನನ್ನೂ ಅವರ ಮನೆಗೆ ಕರೆದುಕೊಂಡು ಹೋಗಲಿ. ಆದರೆ, ಟೈಂ ಟೈಂಗೆ ಊಟ ಹಾಕಿ […]
ಬೆಂಗಳೂರು: CBIನವರಿಗೆ ಬೇರೆ ಏನೂ ಕೆಲಸವಿಲ್ಲ ಎಂದು ಸಿಬಿಐ ದಾಳಿ ಬಗ್ಗೆ ರಾಮನಗರದಲ್ಲಿ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ ತಾಯಿ ಗೌರಮ್ಮ ಹೇಳಿದ್ದಾರೆ. ಟಿವಿ 9 ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ನನ್ನ ಮಗ ಕಂಡ್ರೆ ED, PD, CD, CBIನವರಿಗೆ ತುಂಬಾ ಪ್ರೀತಿ. ಅದಕ್ಕೆ ಅವನನ್ನ ಬಿಡಲ್ಲ ಎಂದು ಹೇಳಿದ್ದಾರೆ. ಬೇಕಿದ್ರೇ ಅವನನ್ನ ತಮ್ಮ ಮನೆಗೆ ಕರೆಸಿಕೊಂಡು ಹೋಗ್ಲಿ. ಬೇಕಿದ್ರೆ ನನ್ನನ್ನೂ ಅವರ ಮನೆಗೆ ಕರೆದುಕೊಂಡು ಹೋಗಲಿ. ಆದರೆ, ಟೈಂ ಟೈಂಗೆ ಊಟ ಹಾಕಿ ಎಂದು ದಾಳಿ ಬಗ್ಗೆ ಗೌರಮ್ಮ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ನನಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಸಹ ಹೇಳಿದ್ದಾರೆ.
‘ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ’ ಸಿಬಿಐ ಅಧಿಕಾರಿಗಳು ದುಡ್ಡಿಗೊಸ್ಕರ ಈ ರೀತಿ ಮಾಡುತ್ತಿದ್ದಾರೆ. ಬೇಕಾದ್ರೆ ನಮ್ಮ ಮಗನ್ನ ಜೈಲಿಗೆ ಕಳುಹಿಸಲಿ. ಸಂಸದ ಡಿ.ಕೆ. ಸುರೇಶನನ್ನೂ ಜೈಲಿಗೆ ಹಾಕಲಿ ಎಂದು ಗೌರಮ್ಮ ಹೇಳಿದ್ದಾರೆ. ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ ಎಂದು ಸಿಬಿಐ ಅಧಿಕಾರಿಗಳ ವಿರುದ್ಧ ಡಿಕೆಶಿ ತಾಯಿ ಆಕ್ರೋಶ ಹೊರಹಾಕಿದ್ದಾರೆ.
‘ನಥಿಂಗ್ ಟು ವರಿ.. ಆಲ್ ಈಸ್ ವೆಲ್’ ಇತ್ತ ಡಿ.ಕೆ. ಶಿವಕುಮಾರ್ ಸಹೋದರ ಸಂಸದ ಡಿ.ಕೆ. ಸುರೇಶ್ ತಮ್ಮ ಆಪ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ನಥಿಂಗ್ ಟು ವರಿ. ಆಲ್ ಈಸ್ ವೆಲ್ ಎಂದು ಸುರೇಶ್ ತಮ್ಮ ಆಪ್ತರಿಗೆ ಧೈರ್ಯ ತುಂಬಿದರು. ಸಿಬಿಐ ದಾಳಿಯ ಬಗ್ಗೆ ತಮ್ಮ ಆಪ್ತರ ಜೊತೆ ಮಾತುಕತೆ ನಡೆಸಿದ ಸುರೇಶ್ ಕಾನೂನಾತ್ಮಕ ಹೋರಾಟಕ್ಕೆ ಎಲ್ಲಾ ತಯಾರಿ ನಡೆಸಿದ್ದೇವೆ. ಕೋರ್ಟ್ ನಿರ್ದೇಶನಗಳಂತೆ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಹಿರಿಯ ವಕೀಲರನ್ನು ಸಂಪರ್ಕಿಸಿ ಸಲಹೆ ಪಡೆಯಲು ಮುಂದಾದರು.
ಕಾನೂನು ಸಮರಕ್ಕೆ ಸಿದ್ಧತೆ ನಡೆಸಿರುವ ಡಿಕೆಶಿ ಪರ ವಕೀಲರು ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಯುತ್ತಿದ್ದಂತೆ ಶಿವಕುಮಾರ್ ನಿವಾಸಕ್ಕೆ ಬಂದಿದ್ದ ವಕೀಲ AS ಪೊನ್ನಣ್ಣ ಡಿಕೆಶಿ ಪರ ಹಿರಿಯ ವಕೀಲ ಉದಯ್ ಹೊಳ್ಳರನ್ನು ಭೇಟಿಯಾಗಿದ್ದಾರೆ.
ಶಿವಕುಮಾರ್ ಮನೆಯ ದಾಳಿಯ ಬಗ್ಗೆ ಸಮರ್ಪಕ ಉತ್ತರ ಸಿಗಲಿಲ್ಲ. ಅಧಿಕಾರಿಗಳು ಯಾವ ಕಾರಣಕ್ಕೆ ದಾಳಿ ನಡೆಸಿದ್ದಾರೆ ಎಂದು ಹೇಳಿಲ್ಲ ಎಂದು ಉದಯ್ ಹೊಳ್ಳರಿಗೆ ಪೊನ್ನಣ್ಣ ಮಾಹಿತಿ ನೀಡಿದ್ದಾರಂತೆ. ಈ ನಡುವೆ, ಡಿಕೆಶಿ ಪರ ವಕೀಲರು ಕಾನೂನು ಸಮರಕ್ಕೆ ಸಿದ್ಧತೆ ನಡೆಸಿರುವ ಮಾಹಿತಿ ಸಹ ದೊರೆತಿದೆ. ದೊಡ್ಡಆಲಹಳ್ಳಿಯ ಡಿ.ಕೆ.ಶಿ ಮನೆ ಮೇಲೆ ರೇಡ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ರ ಬೆಂಗಳೂರು ನಿವಾಸದ ಜೊತೆ ಅಧಿಕಾರಿಗಳು ರಾಮನಗರ ಜಿಲ್ಲೆಯ ದೊಡ್ಡಆಲಹಳ್ಳಿಯಲ್ಲಿರುವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಹ ರೇಡ್ ಮಾಡಿದ್ದಾರೆ.
ದಾಳಿ ವೇಳೆ ಲಾಕರ್ ಓಪನ್ ಮಾಡಲು ಸಿಬಿಐ ಅಧಿಕಾರಿಗಳು ಪರದಾಡಿದರಂತೆ. ರಾಡ್‌ನಿಂದ ಒಡೆದು ಲಾಕರ್ ಓಪನ್ ಮಾಡಲು ಪ್ರಯತ್ನ ಸಹ ನಡೆಸಿದರು.
ಡಿಕೆಶಿ ಆಪ್ತ ಸಚಿನ್ ನಾರಾಯಣ್ ಮನೆಯಲ್ಲಿ ಶೋಧ ಇತ್ತ ಹಾಸನದಲ್ಲಿ ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೂ ಸಿಬಿಐ ದಾಳಿ ನಡೆದಿದ್ದು ಡಿಕೆಶಿ ಆಪ್ತ ಸಚಿನ್ ನಾರಾಯಣ್ ಮನೆಯಲ್ಲಿ ಶೋಧ ನಡೆದಿದೆ. ಹಾಸನದ ಬಿಎಂ ರಸ್ತೆಯಲ್ಲಿರುವ ಮನೆಯಲ್ಲಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಸಚಿನ್ ನಾರಾಯಣ್ ಮನೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಸಿಬ್ಬಂದಿಯ ವಿಚಾರಣೆ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು. ಜೊತೆಗೆ, ಮನೆಯಲ್ಲಿದ್ದ ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸಿದರು.
Published On - 12:31 pm, Mon, 5 October 20