ರಾಜ್ಯ ಕಾಂಗ್ರೆಸ್ ಅವಸಾನ ಸಿದ್ದರಾಮಯ್ಯರಿಂದಲೇ ಆಗುತ್ತೆ -HDK ಟಾಂಗ್
ಬೆಂಗಳೂರು: JDS ಎಲ್ಲಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಗೆ ಮಾಜಿ ಸಿಎಂ HD ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. JDS ಬಗ್ಗೆ ಲಘುವಾಗಿ ಮಾತನಾಡಬೇಡಿ. ನಾವು ಯಾರ ಹಂಗಿನಲ್ಲೂ ಇಲ್ಲ ಎಂದು ಹೇಳಿದ್ದಾರೆ. ನಿಮ್ಮಂಥ ರಾಷ್ಟ್ರೀಯ ಪಕ್ಷಗಳು ನಮ್ಮ ದುರುಪಯೋಗ ಮಾಡಿಕೊಳ್ಳುತ್ತಿವೆ. JDSನಲ್ಲಿ ಬೆಳೆದು, JDSನ ಮುಗಿಸಲು ಹೊರಟಿದ್ದೀರಿ. ಅದು ಎಂದಿಗೂ ಸಾಧ್ಯವಾಗಲ್ಲ. ಆದರೆ, ರಾಜ್ಯ ಕಾಂಗ್ರೆಸ್ ಅವಸಾನ ಸಿದ್ದರಾಮಯ್ಯರಿಂದಲೇ ಆಗುತ್ತೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ‘ರಾಜೇಶ್ ಗೌಡ ಮತ್ತು ನಿಮ್ ಪುತ್ರ ಯತೀಂದ್ರ ಸಂಬಂಧ ಏನು?’ […]
ಬೆಂಗಳೂರು: JDS ಎಲ್ಲಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಗೆ ಮಾಜಿ ಸಿಎಂ HD ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. JDS ಬಗ್ಗೆ ಲಘುವಾಗಿ ಮಾತನಾಡಬೇಡಿ. ನಾವು ಯಾರ ಹಂಗಿನಲ್ಲೂ ಇಲ್ಲ ಎಂದು ಹೇಳಿದ್ದಾರೆ.
ನಿಮ್ಮಂಥ ರಾಷ್ಟ್ರೀಯ ಪಕ್ಷಗಳು ನಮ್ಮ ದುರುಪಯೋಗ ಮಾಡಿಕೊಳ್ಳುತ್ತಿವೆ. JDSನಲ್ಲಿ ಬೆಳೆದು, JDSನ ಮುಗಿಸಲು ಹೊರಟಿದ್ದೀರಿ. ಅದು ಎಂದಿಗೂ ಸಾಧ್ಯವಾಗಲ್ಲ. ಆದರೆ, ರಾಜ್ಯ ಕಾಂಗ್ರೆಸ್ ಅವಸಾನ ಸಿದ್ದರಾಮಯ್ಯರಿಂದಲೇ ಆಗುತ್ತೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
‘ರಾಜೇಶ್ ಗೌಡ ಮತ್ತು ನಿಮ್ ಪುತ್ರ ಯತೀಂದ್ರ ಸಂಬಂಧ ಏನು?’ ಇತ್ತ BJP ಮತ್ತು JDS ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲೂ ಹೇಳಿದ್ರು. ಈಗಲೂ ಹೇಳಿ ಗೊಂದಲ ಸೃಷ್ಟಿ ಮಾಡ್ತಾಯಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಆದ್ರೆ, ರಾಜೇಶ್ ಗೌಡ ಮತ್ತು ನಿಮ್ಮ ಪುತ್ರ ಯತೀಂದ್ರ ನಡುವಿನ ಸಂಬಂಧ ಏನು? ಇಬ್ಬರೂ ಬಿಸಿನೆಸ್ ಪಾಲುದಾರರು ಅಲ್ಲವೇ? ಈಗ ಏಕಾಏಕಿ ರಾಜೇಶ್ ಗೌಡ ಬಿಜೆಪಿಗೆ ಹೋಗಿದ್ದು ಯಾಕೆ? ಇಂಥ ರಾಜೇಶ್ ಗೌಡ ಬಿಜೆಪಿಗೆ ಹೋಗಿದ್ದು ಯಾರ ಚಿತಾವಣೆಯಿಂದ? ಬಿಜೆಪಿಗೆ ನೀವೇ ಪರೋಕ್ಷವಾಗಿ ಬೆಂಬಲ ಕೊಡ್ತಾ ಇದ್ದೀರಾ? ಎಂದು ಸಿದ್ದರಾಮಯ್ಯರಿಗೆ ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜೊತೆಗೆ, ಸಿದ್ದರಾಮಯ್ಯನವರೇ ಚಿಲ್ಲರೆ ರಾಜಕಾರಣ ಬಿಡಿ ಅಂತಾ ಹೇಳಿದ್ದಾರೆ.
Published On - 2:26 pm, Mon, 5 October 20