ಬಾಗಲಕೋಟೆ: ಚಿತ್ರ ಸಾಹಿತಿ ಕೆ ಕಲ್ಯಾಣ ದಾಂಪತ್ಯದಲ್ಲಿ ಬಿರುಕಿನ ಪ್ರಕರಣದ ಸಂಬಂಧ ಕೆ.ಕಲ್ಯಾಣ್ ದೂರಿನ ಮೇರೆಗೆ ನಿನ್ನೆ ರಾತ್ರಿ ಬಂಧನಕ್ಕೊಳಗಾಗಿರುವ ಮಂತ್ರವಾದಿ ಶಿವಾನಂದ ವಾಲಿ ಬಗ್ಗೆ ಪತ್ನಿ ಭಾರತಿ ಪ್ರತಿಕ್ರಿಯಿಸಿದ್ದಾರೆ. ಆರೋಪಿ ಶಿವಾನಂದ ವಾಲಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇನ್ನು, ಶಿವಾನಂದ ವಾಲಿ ಪತ್ನಿ ಭಾರತಿ ಅವರು ನನ್ನ ಗಂಡನದು ಏನೂ ತಪ್ಪಿಲ್ಲ, ನನ್ನ ಗಂಡನ ಮೇಲೆ ಸುಳ್ಳು ಆರೋಪ ಮಾಡಲಾಗ್ತಿದೆ.. ನಮ್ಮ ಯಜಮಾನ್ರದು ಏನೂ ತಪ್ಪಿಲ್ಲ.. 10-15 ವರ್ಷಗಳಿಂದ ವಾಹನ ಉದ್ಯೋಗ ಮಾಡ್ತಾ ಇದಾರೆ.. ಒಬ್ಬ ಮಗ ಇದಾನೆ, ಆತನು ಶಾಲೆಗೆ ಹೋಗ್ತಿದಾನೆ.. ಆ ರೀತಿಯ ಯಾವುದೇ ಕೆಲಸವನ್ನು ನನ್ನ ಪತಿ ಮಾಡೋದಿಲ್ಲ.. ಎಂದು ಜಿಲ್ಲೆಯ ಬೂದಿಹಾಳ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.