ಬೀದರ್: ರಾಜ್ಯದಲ್ಲಿ 4ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಜಿಲ್ಲೆಯ ಹುಮ್ನಾಬಾದ್ನಲ್ಲಿ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಸರ್ಕಾರಕ್ಕೆ ಹಾಗೂ ಸಾರಿಗೆ ನೌಕರರಿಗೆ ಶಾಪ ಹಾಕುತ್ತಿದ್ದಾರೆ. ಹೀಗಾಗಿ ಹಟಮಾರಿ ಧೋರಣೆ ಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಸಾರಿಗೆ ನೌಕರಿಗೆ ತಿಳಿಸಿದ್ದಾರೆ. ನೌಕರರ ಸಂಬಳ ಹೆಚ್ಚಳ ಮಾಡುವ ಕೆಲಸ ಮಾಡುತ್ತೇವೆ. ಯಾರದ್ದೋ ಮಾತು ಕೇಳಿ ಗೊಂದಲ ಮಾಡಿಕೊಳ್ಳಬೇಡಿ ಎಂದು ಸಾರಿಗೆ ನೌಕರರಲ್ಲಿ ಮನವಿ ಮಾಡಿದ್ದಾರೆ.
ಅನೇಕ ಚಾಲಕರು, ನಿರ್ವಾಹಕರು ನನಗೆ ಕರೆ ಮಾಡಿದ್ದಾರೆ. ಬೆದರಿಕೆಯಿಂದ ಕೆಲ ಸಾರಿಗೆ ನೌಕರರು ಕೆಲಸಕ್ಕೆ ಬರುತ್ತಿಲ್ಲ ಎಂದು ಸವದಿ ಹೇಳಿದರು. ಸಾರಿಗೆ ನೌಕರರ ವಸತಿಗೃಹ ಖಾಲಿ ಮಾಡಿಸುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವರು ಇದು ವಸತಿಗೃಹ, ಸಂಬಳ ಕೊಡದ ವಿಚಾರ ಅಲ್ಲವೇ ಅಲ್ಲ. ನೌಕರಿ ಕಳೆದುಕೊಂಡ ಮೇಲೆ ವಸತಿಗೃಹವೇ ಇರುವುದಿಲ್ಲ. ಕೆಲಸಕ್ಕೆ ಬಂದರೆ ಎಲ್ಲ ಸಿಗುತ್ತದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. 4 ದಿನ ಬರದಿರುವುದರಿಂದ ಸಂಬಳ ಕೊಡಲು ಇಲಾಖೆ ಬಳಿ ಹಣ ಇಲ್ಲ. ಇನ್ನು 3ರಿಂದ 4 ದಿನದಲ್ಲಿ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಬೆಂಕಿ ಹಚ್ಚಿದ ಉರಿಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಅವರು ಮಾಡುವುದು ಅವರು ಅನುಭವಿಸುತ್ತಾರೆ ಎಂದು ಟಿವಿ9ಗೆ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಏಪ್ರಿಲ್ 12 ರಂದು ಬಸವಕಲ್ಯಾಣಕ್ಕೆ ಸಿಎಂ
ಏಪ್ರಿಲ್ 17ರಂದು ಬಸವಕಲ್ಯಾಣ ಉಪಚುನಾವಣೆ ಹಿನ್ನೆಲೆ ಏಪ್ರಿಲ್ 12ರಂದು ಬಿಜೆಪಿ ಅಭ್ಯರ್ಥಿ ಪರ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಚಾರ ಮಾಡಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಬಸವಕಲ್ಯಾಣಕ್ಕೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಹ ಬರುತ್ತಾರೆ. ಸಚಿವರು, ಶಾಸಕರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲಾ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುತ್ತಾರೆ. ಬಸವಕಲ್ಯಾಣದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಸಾಧಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಅಭ್ಯರ್ಥಿ ಶ್ರೀಮಂತ ಅಭ್ಯರ್ಥಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ನಮ್ಮ ಅಭ್ಯರ್ಥಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿಗಿಂತ ಕಾಂಗ್ರೆಸ್ ಅಭ್ಯಥಿಯೇ ಶ್ರೀಮಂತರು ಎಂದು ಹೇಳಿದರು.
ಇದನ್ನೂ ಓದಿ
Prashant Kishor: ಬಿಜೆಪಿ ಗೆಲುವಿನ ಸುಳಿವು ಕೊಟ್ಟಿರುವ ಟಿಎಮ್ಸಿ ಸಲಹೆಗಾರ ಪ್ರಶಾಂತ್ ಕಿಶೋರ್
ಕೊರೊನಾ ನೈಟ್ ಕರ್ಫ್ಯೂ: ಭದ್ರತೆಗೆ ಪೊಲೀಸರಿಂದ ಸಿದ್ಧತೆ, ಎಲ್ಲಾ ಡಿಸಿಪಿಗಳ ಜೊತೆ ಕಮಲ್ ಪಂತ್ ಚರ್ಚೆ
(laxman savadi appealed to the transport Workers to leave the stubbornness and attend the job in bidar Kannada News)