Namma Cargo | ಕೊವಿಡ್ ನಷ್ಟ ಭರಿಸಲು ನಾಳೆಯಿಂದ ‘ನಮ್ಮ ಕಾರ್ಗೊ’ ಪಾರ್ಸೆಲ್ ವ್ಯವಸ್ಥೆ ಜಾರಿ -ಲಕ್ಷ್ಮಣ ಸವದಿ ಘೋಷಣೆ

| Updated By: ಸಾಧು ಶ್ರೀನಾಥ್​

Updated on: Feb 26, 2021 | 2:10 PM

Laxman Savadi : ಕೊವಿಡ್​ ಮೊದಲು 1,508 ಕೋಟಿ ರೂಪಾಯಿ ನಷ್ಟವಾಗಿದೆ. ಕೊವಿಡ್ ಬಳಿಕ ಸಾರಿಗೆ ಇಲಾಖೆಗೆ 4 ಸಾವಿರ ಕೋಟಿ ಆದಾಯ ಕೊರತೆ ಉಂಟಾಗಿದೆ. ಸಾರಿಗೆ ಇಲಾಖೆಗೆ ನಷ್ಟವಾಗಿದ್ದರೂ ಸಾರಿಗೆ ಸಿಬ್ಬಂದಿಗೆ ಸಂಬಳ ಕಡಿತ ಮಾಡಿಲ್ಲ ಎಂದು ಲಕ್ಷಣ ಸವದಿ ಹೇಳಿದ್ದಾರೆ. Namma Cargo

Namma Cargo | ಕೊವಿಡ್ ನಷ್ಟ ಭರಿಸಲು ನಾಳೆಯಿಂದ ‘ನಮ್ಮ ಕಾರ್ಗೊ’ ಪಾರ್ಸೆಲ್ ವ್ಯವಸ್ಥೆ ಜಾರಿ -ಲಕ್ಷ್ಮಣ ಸವದಿ ಘೋಷಣೆ
ಲಕ್ಷ್ಮಣ್​ ಸವದಿ
Follow us on

ಬೆಂಗಳೂರು: ಸಾರಿಗೆ ಇಲಾಖೆಯಿಂದ ‘ನಮ್ಮ ಕಾರ್ಗೊ’ ವ್ಯವಸ್ಥೆ ಜಾರಿಯಾಗಲಿದ್ದು, ವಿಧಾನಸೌಧದ ಎದುರು ನಾಳೆ (ಫೆಬ್ರವರಿ 26) ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಬಿಎಂಟಿಸಿ (BMTC) ಹೊರತುಪಡಿಸಿ ಕೆಎಸ್ಆರ್​ಟಿಸಿ (KSRTC), ಎನ್​ಡಬ್ಲೂಕೆಆರ್​ಟಿಸಿ (NWKRTC), ಎನ್ಇಕೆಆರ್​ಟಿಸಿ (NEKRTC) ಸಂಸ್ಥೆಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಮಾಡುತ್ತಿದ್ದೇವೆ. ಒಟ್ಟು 109 ಸ್ಥಳಗಳಲ್ಲಿ ‘ನಮ್ಮ ಕಾರ್ಗೊ’ ಸೌಲಭ್ಯ ಸಿಗತ್ತದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು. ಕೊವಿಡ್​ನಿಂದ ಸಾರಿಗೆ ಇಲಾಖೆಗೆ 2,780 ಕೋಟಿ ರೂ. ನಷ್ಟವಾಗಿತ್ತು. ಈ ನಷ್ಟವನ್ನು ಭರಿಸಲು ‘ನಮ್ಮ ಕಾರ್ಗೊ’ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಒಟ್ಟು 109 ಸ್ಥಳಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಗೋವಾಗೂ ಕಾಡಾ ಈ ಸೌಲಭ್ಯ ಸಿಗಲಿದೆ. ಕೊವಿಡ್ ಬಳಿಕ ಸಾರಿಗೆ ಇಲಾಖೆಗೆ 2,780 ಕೋಟಿ ನಷ್ಟವಾಗಿದೆ. ಕೊವಿಡ್​ ಮೊದಲು 1,508 ಕೋಟಿ ರೂಪಾಯಿ ನಷ್ಟವಾಗಿದೆ. ಕೊವಿಡ್ ಬಳಿಕ ಸಾರಿಗೆ ಇಲಾಖೆಗೆ 4 ಸಾವಿರ ಕೋಟಿ ಆದಾಯ ಕೊರತೆ ಉಂಟಾಗಿದೆ. ಸಾರಿಗೆ ಇಲಾಖೆಗೆ ನಷ್ಟವಾಗಿದ್ದರೂ ಸಾರಿಗೆ ಸಿಬ್ಬಂದಿಗೆ ಸಂಬಳ ಕಡಿತ ಮಾಡಿಲ್ಲ ಎಂದು ಹೇಳಿದ್ದಾರೆ.

ಬಿಎಂಟಿಸಿಗೆ ಆದಾಯದ ಕೊರತೆ
ಬಿಎಂಟಿಸಿಗೆ ಬಹಳ ಆದಾಯಯದ ಕೊರತೆ ಇದೆ. ಸಂಬಳ ನೀಡಲು 80 ಕೋಟಿ ರೂ. ಸರ್ಕಾರದಿಂದ ಪಡೆದಿದ್ದೇವೆ. 556 ಕೋಟಿ ರೂ. ಬ್ಯಾಂಕಿನಿಂದ ಸಾಲ ಪಡೆದಿದ್ದೇವೆ ಎಂದು ತಿಳಿಸಿದ ಸಚಿವ ಲಕ್ಷ್ಮಣ ಸವದಿ ಸುಮಾರು 2,980 ಕೋಟಿ ವಿದ್ಯಾರ್ಥಿಗಳ ಬಸ್ ಪಾಸ್ ಹಣ ಬರಬೇಕು ಎಂದರು. ಜೊತೆಗೆ ಘಟಕ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಿರುಕುಳ ತಪ್ಪಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಭತ್ಯೆಯನ್ನು ನೀಡುವುದು ನಿಂತಿತ್ತು. ಅದನ್ನು ನಾಳೆಯಿಂದ ಮತ್ತೆ ಜಾರಿಗೆ ತರುತ್ತೇವೆ. ಅಂತರ್ ನಿಗಮ ವರ್ಗಾವಣೆ ಬಗ್ಗೆ ಸಮತಿ ರಚನೆ ಮಾಡಿ, ಎಷ್ಟು ಪ್ರತಿಶತ ಮಾಡಬೇಕು ಅಂತ ನಿರ್ಧಾರ ಮಾಡುತ್ತೀವಿ ಎಂದು ತಿಳಿಸಿದರು.

ರೈತ ಸಂಘಕ್ಕೂ ಸಾರಿಗೆ ಇಲಾಖೆಗೆ ಸಂಬಂಧ ಇಲ್ಲ. ಸಮಸ್ಯೆ ಬಗ್ಗೆ ಸಿಬ್ಬಂದಿಯೇ ಬಂದು ಚರ್ಚಿಸಬೇಕು..
ಸಾರಿಗೆ ಸಿಬ್ಬಂದಿ 9 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡಿದ್ದರು. ಈ ಪೈಕಿ ನಾವು 6 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಕೊರೊನಾಗೆ ಬಲಿಯಾದ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ನಾಳೆ ಸಾಂಕೇತಿಕವಾಗಿ ಚೆಕ್ ಹಸ್ತಾಂತರ ಮಾಡಲಾಗುವುದು. 15 ದಿನದಲ್ಲಿ ಎಲ್ಲರಿಗೂ ಪರಿಹಾರ ಹಣ ತಲುಪಿಸುತ್ತೇವೆ ಎಂದು ತಿಳಿಸಿದ ಸವದಿ ರೈತ ಸಂಘಕ್ಕೂ ಸಾರಿಗೆ ಇಲಾಖೆಗೆ ಸಂಬಂಧ ಇಲ್ಲ. ಸಮಸ್ಯೆ ಬಗ್ಗೆ ಸಿಬ್ಬಂದಿಯೇ ಬಂದು ಚರ್ಚಿಸಬೇಕು. ಕೋಡಿಹಳ್ಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.

ಇದನ್ನೂ ಓದಿ

ಪಕ್ಷೇತರ ಅಭ್ಯರ್ಥಿಯಾಗಿಯೇ ಇದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುತ್ತೇನೆ: ಸಿದ್ದರಾಮಯ್ಯ ನಿವಾಸದಲ್ಲಿ ಶರತ್ ಬಚ್ಚೇಗೌಡ ಘೋಷಣೆ

Ind vs Eng, 3rd Test, Day 2, LIVE Score: ಸಂಕಷ್ಟದಲ್ಲಿ ಟೀಂ ಇಂಡಿಯಾ, ರೋಹಿತ್, ರಹಾನೆ, ಪಂತ್​ ಔಟ್​

Published On - 3:36 pm, Thu, 25 February 21