ಒಂದೊಂದು ಗಂಟೆಗೆ ಒಂದೊಂದು ಹೇಳಿಕೆ ಕೊಡ್ತಿದ್ದಾರೆ -ಕೋಡಿಹಳ್ಳಿ ವಿರುದ್ಧ ಸವದಿ ಗರಂ
ಕೋಡಿಹಳ್ಳಿ ಒಂದೊಂದು ಗಂಟೆಗೆ ಒಂದೊಂದು ಹೇಳಿಕೆ ಕೊಡ್ತಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದರು.
ಬೆಂಗಳೂರು: ಕೋಡಿಹಳ್ಳಿ ಒಂದೊಂದು ಗಂಟೆಗೆ ಒಂದೊಂದು ಹೇಳಿಕೆ ಕೊಡ್ತಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದರು.
SC, ST ನೌಕರರ ಸಂಘ ತಮ್ಮ ಬೆಂಬಲ ವಾಪಸ್ ಪಡೆದಿದ್ದಾರೆ. ಲಿಖಿತ ರೂಪದಲ್ಲಿ ಕೊಡುವುದಕ್ಕೆ ನಮ್ಮ ತಕರಾರು ಇಲ್ಲ. 9 ಬೇಡಿಕೆ ಈಡೇರಿಸುವುದಾಗಿ ಹೇಳಿದ್ದನ್ನ ಕೊಡುತ್ತೇವೆ. ಲಿಖಿತ ರೂಪದಲ್ಲಿ ಕೊಡಲು ನಾವು ಸಿದ್ಧರಿದ್ದೇವೆ ಎಂದು ಸವದಿ ಹೇಳಿದರು.
ನಮಗೆ ಯಾವುದೇ ರೀತಿಯ ಪ್ರತಿಷ್ಠೆ ಇಲ್ಲ. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಆಗಬಾರದು. ಲಿಖಿತ ರೂಪದಲ್ಲಿ ಭರವಸೆ ಪತ್ರವನ್ನು ಕೊಟ್ಟುಕಳಿಸುತ್ತೇವೆ. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಬಳಿ ಕೊಟ್ಟುಕಳಿಸುತ್ತೇವೆ ಎಂದು ಸವದಿ ಹೇಳಿದರು.
ಫ್ರೀಡಂಪಾರ್ಕ್‌ಗೆ ತೆರಳಿದ ನಂದೀಶ್ ರೆಡ್ಡಿ ಇತ್ತ, ಲಿಖಿತ ನಡವಳಿಕೆ ಪತ್ರದೊಂದಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಫ್ರೀಡಂ ಪಾರ್ಕ್ಗೆ ತೆರಳಿದರು. BDA ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹಾಗೂ ಶಾಸಕ ರಾಜೂ ಗೌಡ ಅವರಿಗೆ ಸಾಥ್ ಕೊಟ್ಟರು.
ಯಾರದ್ದೋ ಸ್ವಪ್ರತಿಷ್ಠೆಗೆ ರಾಜ್ಯದಲ್ಲಿ ಜನ, ರೋಗಿಗಳಿಗೆ ತೊಂದ್ರೆ ಕೊಡ್ತಿದ್ದಾರೆ -ಸಚಿವ ಆರ್.ಅಶೋಕ್
ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ ಪಡೆಯೋವುದಿಲ್ಲ -ಕೋಡಿಹಳ್ಳಿ ಪಟ್ಟು ಏನು?
Published On - 1:03 pm, Mon, 14 December 20