ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ ಪಡೆಯೋವುದಿಲ್ಲ -ಕೋಡಿಹಳ್ಳಿ ಪಟ್ಟು ಏನು?
ಸಚಿವರು ಬರುವವರೆಗೂ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಫ್ರೀಡಂ ಪಾರ್ಕ್‌ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಚಿವ ಲಕ್ಷ್ಮಣ ಸವದಿ ಇಲ್ಲಿಗೆ ಬಂದು ನಿನ್ನೆ ಕೊಟ್ಟ ಭರವಸೆಗಳ ಈಡೇರಿಕೆ ಬಗ್ಗೆ ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಬೇಕು ಎಂದು ಕೋಡಿಹಳ್ಳಿ ಹೇಳಿದರು.
ಬೆಂಗಳೂರು: ಸಚಿವರು ಬರುವವರೆಗೂ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಫ್ರೀಡಂ ಪಾರ್ಕ್‌ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಚಿವ ಲಕ್ಷ್ಮಣ ಸವದಿ ಇಲ್ಲಿಗೆ ಬಂದು ನಿನ್ನೆ ಕೊಟ್ಟ ಭರವಸೆಗಳ ಈಡೇರಿಕೆ ಬಗ್ಗೆ ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಬೇಕು ಎಂದು ಕೋಡಿಹಳ್ಳಿ ಹೇಳಿದರು.
ನಿನ್ನೆ ನಡೆದ ಒಂಬತ್ತು ಅಂಶದ ಭರವಸೆ ಬಗ್ಗೆ ಲಿಖಿತ ಪತ್ರ ತೆಗೆದುಕೊಂಡು ಸಚಿವರು ಸ್ಥಳಕ್ಕೆ ಬರಬೇಕು. ಅಲ್ಲಿವರೆಗೆ ಮುಷ್ಕರ ಮುಂದುವರಿಯುತ್ತೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ನಿನ್ನೆ ಇಡೀ ದಿನ ಕತ್ತಲೆ ಬೆಳಕಿನ ರೀತಿ ಬೆಳವಣಿಗೆ ನಡೆಯಿತು. ಏನೆಲ್ಲಾ ಬೆಳವಣಿಗೆ ನಡೆದಿದೆ ಎಂದು ನಿಮಗೆಲ್ಲಾ ಗೊತ್ತಾಗಬೇಕು. ಯಾವುದನ್ನೂ ದೀರ್ಘವಾಗಿ ಎಳೆದುಕೊಂಡು ಹೋಗುವುದಿಲ್ಲ ಎಂದು ಹೇಳಿದರು.
ಸರ್ಕಾರಕ್ಕೆ 10 ಬೇಡಿಕೆಗಳನ್ನ ಇಟ್ಟಿದ್ದೆವು, 9 ಬೇಡಿಕೆ ಈಡೇರಿಸಿದೆ. ಸಚಿವರೊಬ್ಬರ ಮೂಲಕ ಅದನ್ನು ವೇದಿಕೆಗೆ ತಲುಪಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಇತ್ತ, KSRTC ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರು ಕೊನೇವರೆಗೂ ಸರ್ಕಾರದ ನೌಕರರಾಗುವ ನಿಲುವು ಬದಲಾಯಿಸಲ್ಲ. ನಮ್ಮ ಅಜೆಂಡಾದಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ನಮ್ಮ 9 ಮುಖ್ಯ ಬೇಡಿಕೆಗಳಿಗೆ ಅವರು ಮಾಹಿತಿ ನೀಡಿದ್ದಾರೆ. ಸರ್ಕಾರದ ಪ್ರತಿನಿಧಿ ಆದೇಶ ಪ್ರತಿ ನೀಡುವವರೆಗೂ ಮುಷ್ಕರ ಮುಂದುವರಿಸುತ್ತೇವೆ.
ಅಡ್ಡಗೋಡೆ ಮೇಲೆ ದೀಪವಿಡುವ ಕೆಲಸ ಮಾಡಬೇಡಿ. ಸಾರಿಗೆ ಸಚಿವರೇ ನೀವು ನಿನ್ನೆ ಹೇಳಿದ್ದನ್ನ ಲಿಖಿತ ರೂಪದಲ್ಲಿ ಕೊಡಿ. ನಮಗೆ ಸಾರ್ವಜನಿಕರ ಹಾಗೂ ಕಾರ್ಮಿಕರ ಹಿತವೂ ಮುಖ್ಯ. ಈ ವಿಚಾರದಲ್ಲಿ ನಮಗೆ ಸ್ಪಷ್ಟತೆಯನ್ನ ನೀಡಬೇಕು ಎಂದು ಚಂದ್ರು ಹೇಳಿದರು. 6ನೇ ವೇತನ ಜಾರಿಯಾಗಿದೆ ಎಂಬ ಆದೇಶ ಪ್ರತಿ ಬೇಕಾಗಿದೆ. ಆದೇಶ ಪ್ರತಿ ಯಾವಾಗ ಕೊಡುತ್ತೀರಾ? ಎಂದು ತಿಳಿಸಬೇಕು ಎಂದು ಚಂದ್ರು ಪ್ರಶ್ನಿಸಿದರು.
Published On - 12:35 pm, Mon, 14 December 20