ತಿರುಪತಿ ಲಡ್ಡು ತಿಂದು, ಓಟು ಹಾಕಿ! ಸೂಲಿಬೆಲೆಯಲ್ಲಿ ಅಭ್ಯರ್ಥಿಗಳು ಲಡ್ಡು ಹಂಚಿ ಓಟ್ ಕೇಳ್ತಿದ್ದಾರೆ..
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯಲ್ಲಿ ತಿರುಪತಿಯಿಂದ ಲಡ್ಡುಗಳನ್ನ ತರಿಸಿ ಮತದಾರರಿಗೆ ಹಂಚಲಾಗುತ್ತಿದೆ. ಅಭ್ಯರ್ಥಿಗಳು ಲಡ್ಡು ನೀಡಿ ಮತ ಭೇಟೆಗೆ ಮುಂದಾಗಿದ್ದಾರೆ.
ಹೊಸಕೋಟೆ: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೆ ನಾಮಪತ್ರ ಸಲ್ಲಿಸಿರೂ ಅಭ್ಯರ್ಥಿಗಳು ಮತಯಾಚನೆಯಲ್ಲಿ ತೊಡಗಿದ್ದಾರೆ. ಈ ನಡುವೆ ಮತದಾನದ ದಿನ ತಮಗೆ ಮತ ಹಾಕುವಂತೆ ಅಭ್ಯರ್ಥಿಗಳು ಮತದಾರರನ್ನ ಓಲೈಸಲು ತಿರುಪತಿ ತಿಮ್ಮಪ್ಪನ ಲಾಡು ಮೊರೆ ಹೋಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯಲ್ಲಿ ತಿರುಪತಿಯಿಂದ ಲಾಡುಗಳನ್ನ ತರಿಸಿರೂ ಅಭ್ಯರ್ಥಿಗಳು ಮನೆ ಮನೆಗೆ ಲಾಡುಗಳನ್ನ ವಿತರಣೆ ಮಾಡಿ ಮತಗಳನ್ನ ಗಟ್ಟಿ ಮಾಡಿಕೊಳ್ತಿದ್ದಾರೆ. ಪ್ರತಿ ಮನೆಗೂ ಖುದ್ದಾಗಿ ಹೋಗಿ ಲಾಡು ನೀಡ್ತಿರೂ ಅಭ್ಯರ್ಥಿ ತಿಮ್ಮಪ್ಪನ ಲಾಡು ತಿಂದು ಮೋಸ ಮಾಡಬಾರದು ನಿಮ್ಮ ಮತ ನಮಗೆ ಹಾಕ ಬೇಕು ಎಂದು ಮತದಾರರನ್ನ ಭಕ್ತಿಯಿಂದ ಓಲೈಸಿಕೊಳ್ತಿದ್ದಾರೆ.
ಇನ್ನೂ ಈಗಾಗಲೆ ತಿರುಪತಿಯಿಂದ ಸಾವಿರಾರು ಲಡ್ಡುಗಳನ್ನ ಕಾರುಗಳ ಮೂಲಕ ತಂದು ಮನೆ ಮನೆಗೆ ತಲುಪಿಸುತ್ತಿದ್ದು, ದೇವರ ಪ್ರಸಾದ ಮೂಲಕ ಮತದಾರರನ್ನ ಸೆಳೆಯುವ ಹೊಸ ಟ್ರೆಂಡ್ ಅನ್ನ ಹೊಸಕೋಟೆ ತಾಲೂಕಿನ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಹುಟ್ಟು ಹಾಕಿದ್ದಾರೆ.
ತಿರುಪತಿಯಲ್ಲಿ ಶ್ರೀವಾರಿ ಲಡ್ಡು ಪ್ರಸಾದದ ಜೊತೆಗೆ 2021ರ ಕ್ಯಾಲೆಂಡರ್, ಡೈರಿಯನ್ನೂ ಕೊಡ್ತಿದ್ದಾರೆ
Published On - 12:07 pm, Mon, 14 December 20