ಶಿಸ್ತಿನ ಪಕ್ಷ ಬಿಜೆಪಿಯ ನಾಯಕರಲ್ಲಿ ಈಗಾಗಲೇ ಗೊಂದಲ ಮತ್ತು ಬಂಡಾಯ ಪ್ರವೃತ್ತಿ ಶುರುವಾಗಿದೆ: ಸತೀಶ್ ಜಾರಕಿಹೊಳಿ
ಬೆಂಗಳೂರಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಖರ್ಗೆ ಸ್ಪರ್ಧೆ ಕುರಿತು ನಿಶ್ಚಿತವಾಗಿ ಯಾವುದನ್ನೂ ಹೇಳಲಿಲ್ಲ. ಅವರು ಪಕ್ಷದ ಅಧ್ಯಕ್ಷರಾಗಿರುವುದರಿಂದ ದೇಶದೆಲ್ಲೆಡೆ ಸುತ್ತಾಡಬೇಕಾಗುತ್ತದೆ. ಹಾಗಾಗಿ ಅವರಿಗೆ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಕಷ್ಟವಾಗುತ್ತಿರಬಹುದು ಎಂದು ಅವರು ಹೇಳಿದರು.
ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತವರು ಜಿಲ್ಲೆಯಿಂದ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಲೋಕಸಭಾ ಚುನಾವಣಾ ಅಭಿಯಾವನ್ನು ಭರ್ಜರಿಯಾಗಿ ಶುರುಮಾಡಿದರು. ಆದರೆ ರಾಜ್ಯಸಭಾ ಸದಸ್ಯರಾಗಿರುವ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಇನ್ನೂ ಖಚಿತವಾಗಿಲ್ಲ. ನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸಹ ಖರ್ಗೆ ಸ್ಪರ್ಧೆ ಕುರಿತು ನಿಶ್ಚಿತವಾಗಿ ಯಾವುದನ್ನೂ ಹೇಳಲಿಲ್ಲ. ಅವರು ಪಕ್ಷದ ಅಧ್ಯಕ್ಷರಾಗಿರುವುದರಿಂದ ದೇಶದೆಲ್ಲೆಡೆ ಸುತ್ತಾಡಬೇಕಾಗುತ್ತದೆ. ಹಾಗಾಗಿ ಅವರಿಗೆ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಕಷ್ಟವಾಗುತ್ತಿರಬಹುದು ಎಂದು ಸತೀಶ್ ಹೇಳಿದರು.
ಬಿಜೆಪಿಯ ಹಾಲಿ ಸಂಸದರಲ್ಲಿ 6 ಜನರಿಗೆ ಟಿಕೆಟ್ ನೀಡದಿರುವುದು ಮತ್ತು ಮೂವರು ನಿವೃತ್ತಿ ಘೋಷಿಸಿರುವುದನ್ನು ಕಾಂಗ್ರೆಸ್ ಹೇಗೆ ನೋಡುತ್ತದೆ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಅದು ಅವರ ಪಕ್ಷದ ವಿಚಾರ, ಆದರೆ ಇಂಥ ನಡೆಗಳು ಕೆಲವು ಸಲ ಬ್ಯಾಕ್ ಫೈರ್ ಆಗುವ ಅಪಾಯವಿರುತ್ತದೆ, ರಾಜ್ಯದ ಜನರೆಲ್ಲ ನೋಡುತ್ತಿರುವ ಹಾಗೆ ಶಿಸ್ತಿನ ಪಕ್ಷ ಎಂದು ಹೇಳೊಕೊಳ್ಳುತ್ತಿದ್ದ ಬಿಜೆಪಿಯಲ್ಲಿ ಗೊಂದಲ ಮತ್ತು ಬಂಡಾಯ ಪ್ರವೃತ್ತಿ ಶುರುವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: