Lok Sabha Election Opinion Poll: ಲೋಕಸಭೆ ಚುನಾವಣೆ ಸಮೀಕ್ಷೆ, ಎನ್​ಡಿಎ vs ಇಂಡಿಯಾ ಬಲಾಬಲ ಹೀಗಿದೆ

ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ ಎಂದು ‘ಟಿವಿ9’ ಹಾಗೂ ಪೋಲ್​​ಸ್ಟ್ರಾಟ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಹಿಂದಿ ಹೃದಯ ಭಾಗದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಪರಿಣಾಮಕಾರಿ ಸಾಧನೆ ಮಾಡಿಲ್ಲ. ಒಟ್ಟಾರೆಯಾಗಿ ಸಮೀಕ್ಷೆಯ ವರದಿ ಹೇಗಿದೆ? ವಿವರ ಇಲ್ಲಿದೆ.

Lok Sabha Election Opinion Poll: ಲೋಕಸಭೆ ಚುನಾವಣೆ ಸಮೀಕ್ಷೆ, ಎನ್​ಡಿಎ vs ಇಂಡಿಯಾ ಬಲಾಬಲ ಹೀಗಿದೆ
ಲೋಕಸಭೆ ಚುನಾವಣೆ ಸಮೀಕ್ಷೆ, ಎನ್​ಡಿಎ vs ಇಂಡಿಯಾ ಬಲಾಬಲ ಹೀಗಿದೆ
Follow us
|

Updated on:Mar 16, 2024 | 7:14 PM

ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಚುನಾವಣಾ ದಿನಾಂಕಗಳು ಕೂಡ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ಸೀಟುಗಳ ಗುರಿ ಹಾಕಿಕೊಂಡಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಲು ಹವಣಿಸುತ್ತಿದೆ. ಆದಾಗ್ಯೂ, ಅಧಿಕಾರ ಯಾರಿಗೆ ನೀಡಬೇಕೆಂಬ ಅಂತಿಮ ತೀರ್ಮಾನ ಜನರದ್ದೇ ಆಗಿದೆ. ಹಾಗಾಗಿ, ಸಾರ್ವಜನಿಕರು ಯಾವ ಪಕ್ಷದ ಮೇಲೆ ಭರವಸೆ ಇಟ್ಟಿದ್ದಾರೆ ಎಂಬ ಕುರಿತು ‘ಟಿವಿ9’ ಹಾಗೂ ಪೋಲ್​​ಸ್ಟ್ರಾಟ್ (Polstrat) ಚುನಾವಣಾ ಪೂರ್ವ ಸಮೀಕ್ಷೆ (Tv9 Opinion Poll) ನಡೆಸಿದೆ. ಅದರ ವಿವರ ಇಲ್ಲಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 383 ಸ್ಥಾನ ಗಳಿಸಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು 106 ಸ್ಥಾನ ಗಳಿಸಲಿವೆ. ಉಳಿದಂತೆ ಇತರ ಪಕ್ಷಗಳು ಹಾಗೂ ಪಕ್ಷೇತರರು 54 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಎನ್​​ಡಿಎ ಮೈತ್ರಿಕೂಟ

  • ಬಿಜೆಪಿ – 333
  • ಜೆಡಿಯು – 15
  • ಟಿಡಿಪಿ – 14
  • ಎಸ್​​ಎಚ್​ಎಸ್ + ಎಪಿ – 11
  • ಎಲ್​ಜೆಪಿ – 5
  • ಆರ್​ಎಲ್​​​ಡಿ – 3
  • ಎಚ್​ಎಎಂ – 1
  • ಎಡಿಎಸ್ – 1
  • ಜೆಡಿಎಸ್ – 1

ಇಂಡಿಯಾ ಮೈತ್ರಿಕೂಟ

  • ಕಾಂಗ್ರೆಸ್ – 49
  • ಡಿಎಂಕೆ – 23
  • ಎಂವಿಎ – 20
  • ಎಸ್​ಪಿ – 6
  • ಐಯುಎಂಎಲ್ – 3
  • ಸಿಪಿಐ – 2
  • ಸಿಪಿಐಎಂ – 1
  • ಎನ್​ಸಿಪಿ – 1
  • ವಿಸಿಕೆ – 1

ಇತರ ಪಕ್ಷಗಳು ಹಾಗೂ ಪಕ್ಷೇತರರು

  • ಟಿಎಂಸಿ – 16
  • ಎಎಪಿ (ಪಂಜಾಬ್) – 11
  • ಬಿಜೆಡಿ – 9
  • ವೈಎಸ್​ಆರ್​ಪಿ – 7
  • ಜೆಕೆಎನ್​ಸಿ – 3
  • ಎಂಎನ್​ಎಫ್ – 1
  • ಎನ್​ಡಿಪಿಪಿ – 1

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಸಮೀಕ್ಷಾ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಬಹುದು ಎಂದು ಹೇಳಲಾಗುದೆ. ಸಮೀಕ್ಷೆ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದ 80 ಸ್ಥಾನಗಳಲ್ಲಿ 73 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಆದರೆ ಇಂಡಿಯಾ ಮೈತ್ರಿ ಹೆಚ್ಚು ಪ್ರಭಾವ ಬೀರುತ್ತಿಲ್ಲ ಮತ್ತು ಅದು ಕೇವಲ 7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು 6 ಸ್ಥಾನಗಳನ್ನು ಪಡೆಯಬಹುದಾದರೆ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. 73ರಲ್ಲಿ 70 ಸ್ಥಾನಗಳು ಬಿಜೆಪಿಗೆ ಬರಬಹುದು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಸಮೀಕ್ಷೆ, ಕರ್ನಾಟಕದಲ್ಲಿ ಎನ್​ಡಿಎಗೆ ಬಲ

ಸಮೀಕ್ಷೆಗಳ ಪ್ರಕಾರ, ಬಿಹಾರದಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ. ರಾಜ್ಯದ 40 ಲೋಕಸಭಾ ಸ್ಥಾನಗಳ ಪೈಕಿ ಎನ್‌ಡಿಎ 38 ಸ್ಥಾನಗಳನ್ನು ಗೆಲ್ಲಬಹುದು. ಆದರೆ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಗೆಲ್ಲಬಹುದು. ಬಿಹಾರದ 40 ಸ್ಥಾನಗಳಲ್ಲಿ ಬಿಜೆಪಿ 17 ಮತ್ತು ಜನತಾ ದಳ ಯುನೈಟೆಡ್ 15 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಲೋಕ ಜನಶಕ್ತಿ ಪಕ್ಷ 5 ಸ್ಥಾನಗಳನ್ನು ಪಡೆದರೆ ಜಿತನ್ ರಾಮ್ ಮಾಂಝಿ ಅವರ ಪಕ್ಷ ಎಚ್​ಎಎಂ ಒಂದು ಸ್ಥಾನವನ್ನು ಪಡೆಯಬಹುದು.

ಆದರೆ ಇಂಡಿಯಾ ಮೈತ್ರಿಕೂಟ ಕೇವಲ 2 ಸ್ಥಾನಗಳನ್ನು ಪಡೆಯಬಹುದು. ಲಾಲು ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳಕ್ಕೆ ದೊಡ್ಡ ಹೊಡೆತ ಬೀಳಲಿದ್ದು, ಇಲ್ಲಿ ಖಾತೆ ತೆರೆಯುವ ಲಕ್ಷಣ ಕಾಣುತ್ತಿಲ್ಲ, 2 ಸ್ಥಾನಗಳು ಕಾಂಗ್ರೆಸ್​ ಪಾಲಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭೆ ಚುನಾವಣೆ? ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ? ಇಲ್ಲಿದೆ ನೋಡಿ

ಪಂಜಾಬ್‌ನಲ್ಲಿ ಎಎಪಿಗೆ ಬಲ

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲರನ್ನೂ ಅಚ್ಚರಿಗೊಳಿಸಿದೆ. ರಾಜ್ಯದ 13 ಸ್ಥಾನಗಳ ಪೈಕಿ ಆಮ್ ಆದ್ಮಿ ಪಕ್ಷ 11 ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 2 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು. ಇಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದು, ಖಾತೆ ತೆರೆಯಲೂ ಆಗುತ್ತಿಲ್ಲ. 2019 ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು.

ಸಮೀಕ್ಷಾ ವರದಿಯ ರಾಜ್ಯವಾರು ವಿವರ ಇಲ್ಲಿದೆ

ಕರ್ನಾಟಕ (28)

  • ಎನ್​ಡಿಎ ಮೈತ್ರಿಕೂಟ – 23 (ಬಿಜೆಪಿ 22, ಜೆಡಿಎಸ್ 1)
  • ಇಂಡಿಯಾ ಮೈತ್ರಿಕೂಟ – 5 (ಕಾಂಗ್ರೆಸ್ 5)

ಹರಿಯಾಣ (10)

  • ಎನ್​ಡಿಎ ಮೈತ್ರಿಕೂಟ – 9 (ಬಿಜೆಪಿ 9)
  • ಇಂಡಿಯಾ ಮೈತ್ರಿಕೂಟ – 1 (ಕಾಂಗ್ರೆಸ್)

ಉತ್ತರಾಖಂಡ (5)

  • ಎನ್​ಡಿಎ ಮೈತ್ರಿಕೂಟ – 5 (ಬಿಜೆಪಿ 5)
  • ಇಂಡಿಯಾ ಮೈತ್ರಿಕೂಟ – 0

ಛತ್ತೀಸ್​ಗಢ (11)

  • ಎನ್​ಡಿಎ ಮೈತ್ರಿಕೂಟ – 11 (ಬಿಜೆಪಿ 11)
  • ಇಂಡಿಯಾ ಮೈತ್ರಿಕೂಟ – 0

ರಾಜಸ್ಥಾನ (25)

  • ಎನ್​ಡಿಎ ಮೈತ್ರಿಕೂಟ – 23 (ಬಿಜೆಪಿ 23)
  • ಇಂಡಿಯಾ ಮೈತ್ರಿಕೂಟ – 2 (ಕಾಂಗ್ರೆಸ್ 2)

ಮಧ್ಯ ಪ್ರದೇಶ (29)

  • ಎನ್​ಡಿಎ ಮೈತ್ರಿಕೂಟ – 29 (ಬಿಜೆಪಿ 29)
  • ಇಂಡಿಯಾ ಮೈತ್ರಿಕೂಟ – 0

ಗುಜರಾತ್ (26)

  • ಎನ್​ಡಿಎ ಮೈತ್ರಿಕೂಟ – 26
  • ಇಂಡಿಯಾ ಮೈತ್ರಿಕೂಟ – 0

ತೆಲಂಗಾಣ (17)

  • ಎನ್​ಡಿಎ ಮೈತ್ರಿಕೂಟ – 6 (ಬಿಜೆಪಿ 6)
  • ಇಂಡಿಯಾ ಮೈತ್ರಿಕೂಟ – 10 (ಕಾಂಗ್ರೆಸ್ 10)
  • ಇತರ – 1 (ಎಐಎಂಐಎಂ 1)

ಕೇರಳ (20)

  • ಎನ್​ಡಿಎ ಮೈತ್ರಿಕೂಟ – 2 (ಬಿಜೆಪಿ 2)
  • ಇಂಡಿಯಾ ಮೈತ್ರಿಕೂಟ – 17 (ಕಾಂಗ್ರೆಸ್ 15 / ಐಯುಎಂಎಲ್ 2, ಎಲ್​ಡಿಎಫ್ 1)

ಒಡಿಶಾ (21)

  • ಎನ್​ಡಿಎ ಮೈತ್ರಿಕೂಟ – 12 (ಬಿಜೆಪಿ 12)
  • ಬಿಜೆಡಿ – 9

ಅಸ್ಸಾಂ (14)

  • ಎನ್​ಡಿಎ ಮೈತ್ರಿಕೂಟ – 11 (ಬಿಜೆಪಿ 11)
  • ಇಂಡಿಯಾ ಮೈತ್ರಿಕೂಟ – 3 (ಕಾಂಗ್ರೆಸ್ 3)

ತಮಿಳುನಾಡು (39)

  • ಎನ್​ಡಿಎ ಮೈತ್ರಿಕೂಟ – 3 (ಬಿಜೆಪಿ 3)
  • ಇಂಡಿಯಾ ಮೈತ್ರಿಕೂಟ – 36 (ಡಿಎಂಕೆ 23, ಕಾಂಗ್ರೆಸ್ 8, ಸಿಪಿಐ 2, ಸಿಪಿಐಎಂ 1, ಐಯುಎಂಎಲ್ 1, ವಿಸಿಕೆ 1)

ಆಂಧ್ರ ಪ್ರದೇಶ (25)

  • ಎನ್​ಡಿಎ ಮೈತ್ರಿಕೂಟ – 18 (ಟಿಡಿಪಿ 14, ಬಿಜೆಪಿ 4)
  • ಇತರ – 7 (ವೈಎಸ್​ಆರ್ 7)

ಪಶ್ಚಿಮ ಬಂಗಾಳ (42)

  • ಎನ್​ಡಿಎ ಮೈತ್ರಿಕೂಟ – 26 (ಬಿಜೆಪಿ 26)
  • ಟಿಎಂಸಿ – 16

ದೆಹಲಿ (7)

  • ಎನ್​​ಡಿಎ – 7 (ಬಿಜೆಪಿ 7)

ಮಹಾರಾಷ್ಟ್ರ

  • ಎನ್​​​ಡಿಎ ಮೈತ್ರಿಕೂಟ – 28 (ಬಿಜೆಪಿ 17, ಎಸ್​​ಎಚ್ (ಎಸ್)+ ಅಜಿತ್ ಪವಾರ್ 11)
  • ಎನ್​ಡಿಎ ಮೈತ್ರಿಕೂಟ – 20

ಟಿವಿ9 ಸಮೀಕ್ಷೆ ಏಕೆ ಭಿನ್ನ?

ಈ ಸಮೀಕ್ಷೆಯನ್ನು ‘ಟಿವಿ9’ ಭಿನ್ನವಾಗಿ ಮಾಡಿದೆ. ಸಮೀಕ್ಷೆಯಲ್ಲಿ 20 ಲಕ್ಷ ಮಂದಿಯ ಅಭಿಪ್ರಾಯ ಪಡೆಯಲಾಗಿದೆ. ಜನರ ಒಳನೋಟದ ಬಗ್ಗೆ ಪೋಲ್​​ಸ್ಟ್ರಾಟ್ ಮತ್ತು ಟಿವಿ9ನಿಂದ ಅತ್ಯಂತ ವಿಶ್ವಾಸಾರ್ಹವಾದ ಭರವಸೆಯ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ದೇಶದ ಎಲ್ಲಾ 543 ಸ್ಥಾನಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಒಂದು ಲೋಕಸಭಾ ಕ್ಷೇತ್ರದೊಳಗಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: 7 ಹಂತಗಳಲ್ಲಿ ಲೋಕಸಭೆ ಚುನಾವಣೆ;ಏಪ್ರಿಲ್ 19ರಂದು ಮೊದಲ ಹಂತದ ಮತದಾನ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Sat, 16 March 24

ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್