Lok Sabha Election Dates: 7 ಹಂತಗಳಲ್ಲಿ ಚುನಾವಣೆ; ಏಪ್ರಿಲ್ 19ರಂದು ಮೊದಲ ಹಂತದ ಮತದಾನ, ಜೂನ್ 4ಕ್ಕೆ ಫಲಿತಾಂಶ

ಲೋಕಸಭಾ ಚುನಾವಣೆ ಏಳು ಹಂತದಲ್ಲಿ ನಡೆಯಲಿದ್ದು ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ ಎಂದು ಎಂದು ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

Lok Sabha Election Dates: 7 ಹಂತಗಳಲ್ಲಿ ಚುನಾವಣೆ; ಏಪ್ರಿಲ್ 19ರಂದು ಮೊದಲ ಹಂತದ ಮತದಾನ, ಜೂನ್ 4ಕ್ಕೆ ಫಲಿತಾಂಶ
ಚುನಾವಣಾ ಆಯೋಗದ ಸುದ್ದಿಗೋಷ್ಠಿ
Follow us
|

Updated on:Mar 16, 2024 | 4:06 PM

ದೆಹಲಿ ಮಾರ್ಚ್ 16: ಭಾರತೀಯ ಚುನಾವಣಾ ಆಯೋಗ (Election Commission of India) ಇಂದು (ಶನಿವಾರ) 2024ರ ಲೋಕಸಭೆ ಚುನಾವಣೆಯ ದಿನಾಂಕವನ್ನು (Lok Sabha Election Dates) ಪ್ರಕಟಿಸಿದೆ.  7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು  ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತದಲ್ಲಿ ಮತದಾನ ನಡೆಯಲಿದೆ.ಏಪ್ರಿಲ್ 26ರಂದು ಎರಡನೇ ಹಂತದ ಮತದಾನ, ಏಪ್ರಿಲ್ 26ರಂದು ಎರಡನೇ ಹಂತದ ಮತದಾನ, ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.

ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ಮೇ 13 ರಂದು ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಏಪ್ರಿಲ್ 19 ರಂದು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಚುನಾವಣೆ ನಡೆಯಲಿದ್ದು,  ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ಆಯೋಗದ ಸುದ್ದಿಗೋಷ್ಠಿ

ಚುನಾವಣಾ ಆಯುಕ್ತ ರಾಜೀವ್ ಕುಮಾರ್  ಅವರು ಮೊದಲು ಚುನಾವಣಾ ಸಿದ್ಧತೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಾತುಗಳನ್ನು ಆರಂಭಿಸಿದ ಕುಮಾರ್,  ಚುನಾವಣೆಗಳು ಒಂದು ರೀತಿಯ ಹಬ್ಬವಾಗಿರುವ ಭಾರತದತ್ತ ಎಲ್ಲರ ಕಣ್ಣು ನೆಟ್ಟಿದೆ. ನಿಜವಾದ ಹಬ್ಬದ ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ಚುನಾವಣೆ ನಡೆಸುವುದಾಗಿ ನಾವು ಭರವಸೆ ನೀಡುತ್ತೇವೆ. ಪ್ರತಿ ಚುನಾವಣೆಯು ಹೊಸ ಪರೀಕ್ಷೆಯಾಗಿದೆ, ಇಡೀ ಕಾರ್ಯವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ ಎಂದಿದ್ದಾರೆ ಅವರು.

ನಮ್ಮ ತಂಡ ಈಗ ಪೂರ್ಣಗೊಂಡಿದೆ, ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ.ವಿಶ್ವ ವೇದಿಕೆಯಲ್ಲಿ ಭಾರತದ ಖ್ಯಾತಿ ಹೆಚ್ಚಿಸುವ ರೀತಿಯಲ್ಲಿ ರಾಷ್ಟ್ರೀಯ ಚುನಾವಣೆಯನ್ನು ನೀಡುವುದು ನಮ್ಮ ಭರವಸೆ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ

ನಮ್ಮಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ, 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳು ಇವೆ. 1.5 ಕೋಟಿ ಸಿಬ್ಬಂದಿ, 55 ಲಕ್ಷ ಇವಿಎಂಗಳಿಂದ ಚುನಾವಣೆ  ನಿರ್ವಹಿಸಲ್ಪಡುತ್ತವೆ ಎಂದು ಕುಮಾರ್ ಹೇಳಿದ್ದಾರೆ.

ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಮ್ಮ ಉದ್ದೇಶ. ದೇಶಾದ್ಯಂತ 97 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ 49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 1.8 ಕೋಟಿ ಮತದಾರರಿಂದ ಮೊದಲ ಬಾರಿಗೆ ಮತ ಚಲಾವಣೆ ಮಾಡಲಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಲಿದ್ದಾರೆ.  85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ.ದೇಶದಾದ್ಯಂತ 10.5 ಲಕ್ಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.ಮತದಾನಕ್ಕೆ ಒಟ್ಟು 55 ಲಕ್ಷ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾಗಲಿದೆ. ಚುನಾವಣಾ ಕರ್ತವ್ಯಕ್ಕಾಗಿ ಒಂದೂವರೆ ಕೋಟಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

12 ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯ ಸಂಖ್ಯೆ ಹೆಚ್ಚು ಇದೆ. ಮತದಾನ ಕೇಂದ್ರಗಳಲ್ಲಿ ನೀರು, ಶೌಚಾಲಯ, ವ್ಹೀಲ್​ಚೇರ್ ಹೆಲ್ಪ್​ಡೆಸ್ಕ್​, ವಿದ್ಯುತ್​ ಸೇರಿ ಮೂಲಕ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಬಾಕಿ ಇದೆ: ಸಿಇಸಿ ಕುಮಾರ್

17 ನೇ ಲೋಕಸಭೆಯ ಅವಧಿಯು 16 ನೇ ಜೂನ್ 2024 ರಂದು ಮುಕ್ತಾಯಗೊಳ್ಳಲಿದೆ. ಆಂಧ್ರ ಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಗಳ ಅವಧಿಯು ಜೂನ್ 2024 ರಲ್ಲಿ ಮುಕ್ತಾಯಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ನಡೆಯಲಿವೆ ಎಂದು  ಕುಮಾರ್ ಹೇಳಿದ್ದಾರೆ.

ಯಾವುದೇ ಬಲ ಅಥವಾ ಹಣದ ಶಕ್ತಿಯನ್ನು ಬಳಸಲಾಗುವುದಿಲ್ಲ

ಯಾವುದೇ ಬಲ ಅಥವಾ ಹಣದ ಶಕ್ತಿಯನ್ನು ಬಳಸಲಾಗುವುದಿಲ್ಲ, ಯಾವುದೇ ತಪ್ಪು ಮಾಹಿತಿ ಹರಡುವುದಿಲ್ಲ. MCC ಯ ಯಾವುದೇ ಉಲ್ಲಂಘನೆಗಳು ನಡೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಶ್ರಮಿಸುತ್ತದೆ.  ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವಲ್ಲಿ ಬೆದರಿಸುವ ಸವಾಲುಗಳು ನಾಲ್ಕು ಪಟ್ಟು, 4Ms: Muscle, Money, misinformation ಮತ್ತು MCC ಉಲ್ಲಂಘನೆ ಎಂದು ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.

2.18 ಲಕ್ಷ ಶತಾಯುಷಿಗಳು

ಒಟ್ಟು 2.18 ಲಕ್ಷ ಶತಾಯುಷಿಗಳು ಮತ ಚಲಾಯಿಸಲಿದ್ದಾರೆ. 20-29 ವರ್ಷದ 19.47 ಕೋಟಿ ಮತದಾರರು ಹಕ್ಕು ಚಲಾಯಿಸುತ್ತಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಆ್ಯಪ್​ ಮೂಲಕ ತಮ್ಮ ಅಭ್ಯರ್ಥಿಗಳ ಮಾಹಿತಿ ಲಭ್ಯವಿದೆ. ಅಭ್ಯರ್ಥಿಗಳ ಅಪರಾಧ ಪ್ರಕರಣದ ವಿವರ ಆ್ಯಪ್​​ನಲ್ಲಿ ಲಭ್ಯವಿದೆ.ಮತದಾರರು ಚುನಾವಣಾ ಅಕ್ರಮ ಬಯಲು ಮಾಡಬಹುದು. ಅಕ್ರಮದ ಫೋಟೋ, ವಿಡಿಯೋ ಅಪ್ಲೋಡ್ ಮಾಡಬಹುದು. ಚುನಾವಣಾ ಅಕ್ರಮವೆಗುವ ಅಭ್ಯರ್ಥಿಗಳ ವಿರುದ್ಧ ಕೂಡಲೇ ಕ್ರಮಗೊಳ್ಳುತ್ತೇವೆ.

ಡ್ರೋನ್​ ಮೂಲಕ ಕಣ್ಗಾವಲು

ಚುನಾವಣೆಯಲ್ಲಿ ಹಿಂಸೆಗೆ ಅವಕಾಶ ನೀಡಲ್ಲ. ಎಲ್ಲಾ ಕಡೆ ಚೆಕ್​ ಪೋಸ್ಟ್ ಇರಲಿವೆ, ಡ್ರೋನ್​ ಮೂಲಕ ಕಣ್ಗಾವಲು ಮಾಡಲಾಗುತ್ತಿದೆ. ಕಂಟ್ರೋಲ್ ರೂಂಗಳು ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲಿವೆ.ಚೆಕ್​ ಪೋಸ್ಟ್ ಗಳಲ್ಲಿ CRPF ತುಕಡಿ ನಿಯೋಜನೆ ಮಾಡಲಾಗುವುದು. ರೌಡಿಶೀಟರ್​ಗಳು, ಅಪರಾಧ ಹಿನ್ನೆಲೆ ವ್ಯಕ್ತಿಗಳ ಮೇಲೂ ತೀವ್ರ ನಿಗಾ ವಹಿಸಲಾಗುತ್ತದೆ. ಅಂತಾರಾಷ್ಟ್ರೀಯ ಗಡಿಯಲ್ಲೂ ಡ್ರೋನ್ ಮೂಲಕ ಕಣ್ಗಾವಲು ಇರಲಿದೆ.

ಇದನ್ನೂ ಓದಿ: ದೇಶದೆಲ್ಲೆಡೆ ಮೈ ಮೋದಿ ಕಾ ಪರಿವಾರ್ ಹೂಂ ಘೋಷಣೆ ಯಾಕೆ ಪ್ರತಿಧ್ವನಿಸುತ್ತಿದೆ ಗೊತ್ತಾ? ವಿಡಿಯೋ ವೀಕ್ಷಿಸಿ

11 ರಾಜ್ಯಗಳ ಚುನಾವಣೆಯಲ್ಲಿ 3,400 ಕೋಟಿ ರೂ ವಶ

11 ರಾಜ್ಯಗಳ ಚುನಾವಣೆಯಲ್ಲಿ 3,400 ಕೋಟಿ ರೂ ವಶ ಪಡಿಸಿಕೊಂಡಿದ್ದೇವೆ. ಚುನಾವಣೆ ವೇಳೆ‌ ಸಿಕ್ಕ 3400 ಕೋಟಿ ಹಣ ಜಪ್ತಿ ಮಾಡಿದ್ದೇವೆ. ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್ ದಾಖಲಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಫೇಕ್ ಸುದ್ದಿಗಳ ಮೇಲೆ ನಿಗಾ

ರೈಲ್ವೆ ಸ್ಟೇಷನ್, ಏರ್​ಪೋರ್ಟ್​ಗಳಲ್ಲಿ ತಪಾಸಣೆ ನಡೆಯಲಿದೆ. ಹೆಲಿಕಾಪ್ಟರ್, ಖಾಸಗಿ ವಿಮಾನಗಳಲ್ಲೂ ಕೂಡ ತಪಾಸಣೆ ನಡೆಯಲಿದೆ. ಎಲ್ಲಾ ವಾಹನಗಳನ್ನು ಕೂಡ ತಪಾಸಣೆ ನಡೆಸಲಾಗುವುದು. ಫೇಕ್ ಸುದ್ದಿಗಳ ಮೇಲೂ ಆಯೋಗ ನಿಗಾ ಇಡಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ನಿಗ್ರಹ ಮಾಡಲಾಗುವುದು. ಅಭ್ಯರ್ಥಿಗಳ ಬಗ್ಗೆ ಮಾತನಾಡಲು ಅವಕಾಶವಿದೆ. ಆದರೆ ಸುಳ್ಳು ಸುದ್ದಿಗಳ ಮೂಲಕ ತೆಗಳಲು ಅವಕಾಶವಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Sat, 16 March 24

ತಾಜಾ ಸುದ್ದಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್