ಪರಿಷತ್​ನಲ್ಲಿ ಹಿಂದೂ ಧಾರ್ಮಿಕ ದತ್ತಿಗಳ ತಿದ್ದುಪಡಿ ವಿಧೇಯಕ ಮಂಡನೆ, ಸಿ ದರ್ಜೆ ದೇಗುಲ ಅರ್ಚಕರಿಗೆ ಬಂಪರ್ ಗಿಫ್ಟ್

ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆ ವಿಧಾನಸಭೆ ಬಳಿಕ ವಿಧಾನ ಪರಿಷತ್​ನಲ್ಲೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಮಂಡನೆ ಮಾಡಲಾಗಿದೆ. ಸಿ ದರ್ಜೆಯ ದೇವಸ್ಥಾನಗಳ ಅರ್ಚಕರಿಗೆ ರಾಜ್ಯ ಸರ್ಕಾರ ಭರ್ಜರಿ ಅನುದಾನವನ್ನು ಮೀಸಲಿಟ್ಟಿದೆ. ವಿಧೇಯಕದ ಕೆಲವು ಅಂಶಗಳಿಗೆ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.

ಪರಿಷತ್​ನಲ್ಲಿ ಹಿಂದೂ ಧಾರ್ಮಿಕ ದತ್ತಿಗಳ ತಿದ್ದುಪಡಿ ವಿಧೇಯಕ ಮಂಡನೆ, ಸಿ ದರ್ಜೆ ದೇಗುಲ ಅರ್ಚಕರಿಗೆ ಬಂಪರ್ ಗಿಫ್ಟ್
ಹಿಂದೂ ಧಾರ್ಮಿಕ ದತ್ತಿಗಳ ತಿದ್ದುಪಡಿ ವಿಧೇಯಕ ಮಂಡನೆ, ಸಿ ದರ್ಜೆ ದೇಗುಲ ಅರ್ಚಕರಿಗೆ ಬಂಪರ್ ಗಿಫ್ಟ್
Follow us
ಪ್ರಸನ್ನ ಗಾಂವ್ಕರ್​
| Updated By: Rakesh Nayak Manchi

Updated on:Feb 23, 2024 | 7:27 PM

ಬೆಂಗಳೂರು, ಫೆ.23: ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆ ವಿಧಾನಸಭೆ ಬಳಿಕ ವಿಧಾನ ಪರಿಷತ್​ನಲ್ಲೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 (Hindu Religious Institutions and Charitable Endowments Bill 2024) ಮಂಡನೆ ಮಾಡಲಾಗಿದೆ. ಸಿ ದರ್ಜೆಯ ದೇವಸ್ಥಾನಗಳ ಅರ್ಚಕರಿಗೆ ರಾಜ್ಯ ಸರ್ಕಾರ ಭರ್ಜರಿ ಅನುದಾನವನ್ನು ಮೀಸಲಿಟ್ಟಿದೆ.

ತಿದ್ದುಪಡಿ ವಿಧೇಯಕ ಮಂಡನೆ ಮಾಡಿದ ನಂತರ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, 2003ರಿಂದ ವಿಧೇಯಕ ಜಾರಿಯಲ್ಲಿದೆ. 2003ರ ಮೇ 1 ರಿಂದ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಈಗಿರುವ ನಿಯಮದಂತೆ ಸರ್ಕಾರಕ್ಕೆ 8 ಕೋಟಿ ರೂ. ಸಲ್ಲಿಕೆ ಆಗುತ್ತಿದೆ ಎಂದರು.

ಇದನ್ನೂ ಓದಿ: ವಿಧಾನಸಭೆ: ಭೂ ಕಂದಾಯ(ತಿದ್ದುಪಡಿ) ವಿಧೇಯಕ ಅಂಗೀಕಾರ

ವಿ.ಎಸ್.ಆಚಾರ್ಯ ಸಚಿವರಾಗಿದ್ದಾಗ 2011 ರಲ್ಲಿ ಈ ವಿಧೇಯಕಕ್ಕೆ ತಿದ್ದುಪಡಿ ತಂದಿದ್ದರು. ಈಗಿನ‌ ಸಾಮಾನ್ಯ ಸಂಗ್ರಹಣ ನಿಧಿಯಿಂದ ಧಾರ್ಮಿಕ ಕೆಲಸ ಮಾಡಲಾಗಲ್ಲ. ಹೊಸ ನಿಯಮದಿಂದ 60 ಕೋಟಿ ರೂಪಾಯಿ ಹಣ ಸಂಗ್ರಹ ಆಗುತ್ತಿದೆ. ಸಿ ದರ್ಜೆಯ ದೇಗುಲಗಳನ್ನು ನಿರ್ವಹಿಸಲು ಇದರಿಂದ ಸಾಧ್ಯವಾಗುತ್ತದೆ ಎಂದರು.

ಸಿ ದರ್ಜೆ ದೇವಸ್ಥಾನಗಳ ಅರ್ಚಕರಿಗೆ ಭರ್ಜರಿ ಗಿಫ್ಟ್

ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ ಸಿ ದರ್ಜೆಯ ದೇವಸ್ಥಾನಗಳಿದ್ದು, 40 ಸಾವಿರಕ್ಕಿಂತ ಹೆಚ್ಚು ಅರ್ಚಕರಿದ್ದಾರೆ. 34165 ದೇವಸ್ಥಾನಗಳ ಅರ್ಚಕರ ಮನೆ ಕಟ್ಟಲು ಅನುದಾನ ನೀಡುತ್ತೇವೆ. ಅರ್ಚಕರ ಮಕ್ಕಳ ಶಾಲಾ ಕಾಲೇಜು ಅಧ್ಯಯನಕ್ಕೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದ್ದು, ಇದಕ್ಕೆ 5 ಕೋಟಿ ಹಣ ಮೀಸಲಿಡುತ್ತೇವೆ. ಅರ್ಚಕರು ಮೃತಪಟ್ಟರೆ 2 ಲಕ್ಷ ಹಣ ನೀಡುತ್ತೇವೆ. ಅರ್ಚಕರಿಗೆ ವಿಮೆ ಕೂಡ ಮಾಡಲು ತೀರ್ಮಾನಿಸಿದ್ದೇವೆ. ಅದಕ್ಕೆ 7 ಕೋಟಿ ರೂಪಾಯಿ ಬೇಕು. ಅರ್ಚಕರು, ನೌಕರರು, ದೇವಸ್ಥಾನಗಳ ಅಭಿವೃದ್ಧಿಗೆ ಹಣ ಮೀಸಲಿಡುತ್ತೇವೆ. ಈ ಹಣವನ್ನು ಸಿ ಗ್ರೇಡ್ ದೇವಸ್ಥಾನಗಳಿಗೆ ಮಾತ್ರ ಮೀಸಲಿರಿಸಲಾಗಿದೆ ಎಂದರು.

ಕೋಟ ಶ್ರೀನಿವಾಸ್ ಪೂಜಾರಿ ಆಕ್ಷೇಪ

ಹಿಂದೂ ಧಾರ್ಮಿಕ ದತ್ತಿಗಳ ತಿದ್ದುಪಡಿ ವಿಧೇಯಕ ಮಂಡನೆ ವೇಳೆ ವಿಪಕ್ಷ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ನಿವ್ವಳ ಆದಾಯದಲ್ಲಿ ಶೇ.೧೦ ರಷ್ಟು ನಿಧಿ ಸಂಗ್ರಹ ಮಾಡುವುದು ಸರಿಯಲ್ಲ. 100 ಕೋಟಿ ಸಂಗ್ರಹ ಆದರೆ 10 ಕೋಟಿ ಸರ್ಕಾರಕ್ಕೆ ಕೊಡಬೇಕು. ನಿವ್ವಳ ಖರ್ಚು ವೆಚ್ಚ ತೆಗೆದು ಅದರಲ್ಲಿ ಶೇ.10 ರಷ್ಟು ತೆಗೆದುಕೊಂಡರೆ ಸರಿ. ಆದರೆ ಇಡೀ ಆದಾಯದಲ್ಲಿ ಶೇ.10 ರಷ್ಟು ಪಡೆಯುವುದು ಸರಿಯಲ್ಲ ಎಂದರು.

ಅರ್ಚಕರ, ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ 200 ಕೋಟಿ ನೀಡಲಿ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದಾಗ, ಈ ಹಿಂದಿನ ಸರ್ಕಾರಗಳು ಹಣ ಕೊಡಲಿಲ್ವಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಾಮಾನ್ಯ ನಿಧಿ ಸಂಗ್ರಹಣ ಮಾಡಿದ ಹಣ ಸರ್ಕಾರಕ್ಕೆ ಬರುವುದಿಲ್ಲ, ಅದು ರಾಜ್ಯ ಧಾರ್ಮಿಕ ಪರಿಷತ್ ಗೆ ಬರುತ್ತದೆ ಎಂದು ಸಚಿವರು ಹೇಳಿದರು. ಈ ವೇಳೆ, ಬಡ ಬ್ರಾಹ್ಮಣರಿಗೆ ಕೊಡಿ ಪೂಜಾರ್ರೆ ಎಂದು ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಹೇಳಿದರು. ಬ್ರಾಹ್ಮಣರೆಲ್ಲ ಒಳ್ಳೆಯವರೇ, ಆದರೆ ಯುಬಿ ವೆಂಕಟೇಶ್ ಅವರಂತ ಒಳ್ಳೆ ಬ್ರಾಹ್ಮಣರನ್ನು ನೋಡಿಲ್ಲ ನಾನು ಎಂದು ಕೋಟ ಶ್ರೀನಿವಾಸ್ ಪೂಜಾರಿ ಟಾಂಗ್ ಕೊಟ್ಟರು.

ದೇವಾಲಯಗಳಿಗೆ 350 ಕೋಟಿ ನೀಡಿ

ದೇವಸ್ಥಾನಗಳಿಂದ ಶೇ.೧೦ ರಷ್ಟು ಹಣ ಪಡೆಯುವುದು ಬಿಟ್ಟು ಬಿಡಿ ಎಂದು ಬಿಜೆಪಿ ಸದಸ್ಯ ಎನ್ ರವಿಕುಮಾರ್ ಒತ್ತಾಯಿಸಿದರು. ರಾಜ್ಯ ಸರ್ಕಾರಕ್ಕೆ 60 ಕೋಟಿ ಯಾವ ದೊಡ್ಡ ಮೊತ್ತ ಅಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ 100-200 ಕೋಟಿ ಕೊಟ್ಟ ಹಾಗೇ 350 ಕೋಟಿ ರೂ.ವನ್ನು ‌ಹಿಂದೂ ದೇವಸ್ಥಾನಗಳಿಗೆ ನೀಡಲಿ. ಆಗ ಸಿ ಗ್ರೇಡ್ ದೇವಸ್ಥಾನಗಳಿಗೆ ಬದಲಾವಣೆ ತರಬಹುದು ಎಂದರು.

ಪರಿಷತ್​ನಲ್ಲಿ ಶರವಣ ಮಾತಿಗೆ ನಗುವೋ ನಗು

ಪರಿಷತ್​ನಲ್ಲಿ ಹಿಂದೂ ಧಾರ್ಮಿಕ ಬಿಲ್ ಚರ್ಚೆ ವೇಳೆ ಮಾತನಾಡಿದ ಟಿಎ ಶರವಣ, ರಾಮಲಿಂಗ ರೆಡ್ಡಿ ಹೆಸರಲ್ಲಿ ರಾಮನೂ ಇದ್ದಾನೆ, ಲಿಂಗವೂ ಇದೆ. ರಾಜ್ಯ ಸರ್ಕಾರ ದೇವಸ್ಥಾನಗಳಿಗೆ ಬಹಳ ದೊಡ್ಡ ಅಭಿವೃದ್ಧಿಗೆ ಹಣ ನೀಡುತ್ತದೆ ಎಂಬ ನಂಬಿಕೆ ಇತ್ತು ಎಂದು ಹೇಳಿದಾಗ ಇಡೀ ಪರಿಷತ್ ಸದಸ್ಯರೆಲ್ಲೂ ನಕ್ಕರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:21 pm, Fri, 23 February 24

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ