ಬೆಂಗಳೂರು: ಸಂಚಾರ ವಿಭಾಗದಲ್ಲಿ ದೀರ್ಘಾವಧಿ ಕರ್ತವ್ಯ ನಿರ್ವಹಿಸುತ್ತಿರುವವರ ಕುರಿತು ಮಾಹಿತಿ ಕೋರಿ ಪತ್ರ ಅಡ್ಮಿನ್ ವಿಭಾಗದ ಉಪ ಪೊಲೀಸ್ ಆಯುಕ್ತ ನಿಶಾ ಜೇಮ್ಸ್ ಬೆಂಗಳೂರು ನಗರದ ಪೂರ್ವ,ಪಶ್ಚಿಮ ಮತ್ತು ಉತ್ತರ ವಿಭಾಗ ಸಂಚಾರಿ ಡಿಸಿಪಿಗಳಿಗೆ ಪತ್ರ ಬರೆದಿದ್ದಾರೆ. ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಓರ್ವರು 12 ವರ್ಷದಿಂದ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ. ಸಾಮಾನ್ಯವಾಗಿ 5 ವರ್ಷಕ್ಕಿಂತ ಅಧಿಕವಾಗಿ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಂತಿಲ್ಲ ಎಂಬ ನಿಯಮವಿದೆ. ಆದರೆ ಈ ನಿಯಮ ಯಾವ ಠಾಣೆಗಳಲ್ಲ ಉಲ್ಲಂಘನಟೆಯಾಗಿದೆ ಎಂ ಮಾಹಿತಿ ಕೋರಿ ಈ ಪತ್ರ ಬರೆಯಲಾಗಿದೆ.
ಒಂದೇ ಠಾಣೆಯಲ್ಲಿ 4 ವರ್ಷ ಸೇವೆ ಸಲ್ಲಿಸಿದ ಬಳಿಕ ವರ್ಗಾವಣೆ ಮಾಡಲಾಗುತ್ತಿತ್ತು. ಕಳೆದ ಒಂದು ವರ್ಷದಿಂದ ಯಾವುದೇ ಒಒಡಿ ಮಾಡಿಲ್ಲ, ಮಾಡುವ ಸಾಧ್ಯತೆಗಳೂ ಇಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಪತ್ರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಂತ ಹಂತವಾಗಿ ಈ ಬಗ್ಗೆ ಇತರೆ ಠಾಣೆಗಳಿಂದ ಮಾಹಿತಿ ಕಲೆ ಹಾಕಲಾಗುವುದು. ಆನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:
Big News: ಸಾವಿರಾರು ರೌಡಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು; ನೂರಾರು ಜನ ವಶಕ್ಕೆ
ಲಾಕ್ಡೌನ್ ನಂತರ ಬೆಂಗಳೂರು ಸೇರಿದಂತೆ 12 ನಗರಗಳ ವಾತಾವರಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಭಾರೀ ಹೆಚ್ಚಳ: ವರದಿ
(Letter to DCPs requesting information on staff performing long term duties in the traffic department)