ಕೊಡಗು: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ 16.96 ಲಕ್ಷ ಕಳವು
ಜಿಲ್ಲಾ ಪೊಲೀಸ್ ಶಾಕೆಯಲ್ಲಿ ನಗದು ನಿರ್ವಾಹಕರಾಗಿರುವ ಟಿ.ಎ.ರಂಜಿತ್ ಎಂಬುವರು ಜಿಲ್ಲಾ ಪೊಲೀಸ್ ಕಚೇರಿ ಸಹಾಯಕ ಆಡಳಿತಾಧಿಕಾರಿ ಅಜಿತ್ ನಂಜಪ್ಪಾಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸಿಬ್ಬಂದಿ ವಿನೋದ್ ಕುಮಾರ್ ಎಂಬುವರ ವಿರುದ್ಧ ಅನುಮಾನವಿರೋದಾಗಿ ತಿಳಿಸಿದ್ದಾರೆ.
ಮಡಿಕೇರಿ: ಸಾಮಾನ್ಯವಾಗಿ ಜನ ಸಾಮಾನ್ಯರ ಮನೆಗಳಲ್ಲಿ ಕಳ್ಳತನವಾಗುತ್ತದೆ. ಆದರೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ಕಳವು ಆಗಿರುವ ವಿಲಕ್ಷಣ ಘಟನೆ ನಡೆದಿದೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಎಸ್ಪಿ ಕಚೇರಿಯ ಟಪಾಲು ಖಜಾನೆಯಿಂದ ಭರ್ತಿ 16.96 ಲಕ್ಷ ರೂಪಾಯಿ ಹಣ ದೋಚಿದ್ದಾರೆ. ಪೊಲೀಸ್ ಧ್ವಜ ಮಾರಾಟದಿಂದ ಬಂದ 3.85, 650 ರೂ, ವಿರಾಜಪೇಟೆ ಉಪ ವಿಭಾಗದ 3,82,800 ರೂ, ಹಾಗೂ ಕೊವಿಡ್ ಉಲ್ಲಂಘಿಸಿದವರಿಂದ ಸಂಗ್ರಹವಾಗಿದ್ದ 9.28 ಲಕ್ಷ ರೂ. ಹಣವನ್ನು ದೋಚಿದ್ದಾರೆ.
ಜಿಲ್ಲಾ ಪೊಲೀಸ್ ಶಾಕೆಯಲ್ಲಿ ನಗದು ನಿರ್ವಾಹಕರಾಗಿರುವ ಟಿ.ಎ.ರಂಜಿತ್ ಎಂಬುವರು ಜಿಲ್ಲಾ ಪೊಲೀಸ್ ಕಚೇರಿ ಸಹಾಯಕ ಆಡಳಿತಾಧಿಕಾರಿ ಅಜಿತ್ ನಂಜಪ್ಪಾಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸಿಬ್ಬಂದಿ ವಿನೋದ್ ಕುಮಾರ್ ಎಂಬುವರ ವಿರುದ್ಧ ಅನುಮಾನವಿರೋದಾಗಿ ತಿಳಿಸಿದ್ದಾರೆ.
ವಿನೋದ್ ಅವರ ಜೀವನ ಶೈಲಿ ಕಳೆದ ಕೆಲವು ದಿನಗಳಿಂದ ಐಶಾರಾಮಿಯಾಗಿದ್ದು, ಇವರೇ ಕದ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಈ ಹಣವನ್ನ ವಾರದೊಳಗೆ ಮರು ಸಂದಾಯ ಮಾಡದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಕ್ಷಮಾ ಮಿಶ್ರಾ ಎಚ್ಚರಿಕೆ ನೀಡಿದ್ದಾರೆ. ರಂಜಿತ್ ಜುಲೈ 2 ರಂದು ದೂರು ನೀಡಿದ್ದು, ಮೇ ತಿಂಗಳಲ್ಲೇ ಹಣ ಕಳವಾಗಿರುವ ಶಂಕೆ ವ್ಯಕ್ತವಾಗಿದೆ.
ಸರಣಿ ಕಳ್ಳತನ ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿ ಬೈರಾಮಡಗಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದೆ. ಗ್ರಾಮದ ಹದಿನೈದು ಮನೆ ಮತ್ತು ಅಂಗಡಿಗಳಲ್ಲಿ ಕಳ್ಳತನವಾಗಿದೆ. ಕಳೆದ ರಾತ್ರಿ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಇನ್ನೂರು ಗ್ರಾಮ್ ಚಿನ್ನಾಭರಣ ಮತ್ತು ಹಣವನ್ನು ಕಳ್ಳರು ಕದ್ದಿದ್ದಾರೆ. ಗ್ರಾಮಕ್ಕೆ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ
SBI savings account: ಈ ಉಳಿತಾಯ ಖಾತೆದಾರರಿಗೆ ಎಸ್ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್
(Money theft in the police superintendent office at Kodagu)