Stock Clearance ಸೋಮವಾರದಿಂದ ಎಣ್ಣೆ ಅಂಗಡಿಗಳು ಓಪನ್, ಸಿದ್ಧತೆ ಹೇಗಿದೆ ನೋಡಿ!

ಬೆಂಗಳೂರು: ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆಯೇ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾಳೆಯಿಂದ ಎಣ್ಣೆ ಸಿಗುತ್ತೆ ಅಂತ ಹೇಳಿದ್ದೇ ತಡ, ಈಗಿನಿಂದಲೇ ಕುಡುಕರು ಬಾರ್​ಗಳ ಮುಂದೆ ಸಾಲು ಸಾಲಾಗಿ ಶಿಸ್ತಿನಿಂದ ನಿಂತುಬಿಟ್ಟಿದ್ದಾರೆ. ಮಾಲೀಕರು ಸಹ MSIL ಮಳಿಗೆ, ವೈನ್ ಶಾಪ್‌ಗಳ ಬಳಿ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಒಬ್ಬರಿಗೆ 2.3ಲೀಟರ್ ಮದ್ಯ ಖರೀದಿಗೆ ಅವಕಾಶ ಕೊಟ್ಟಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಂಗಡಿಗೆ ಬರೋದು ಕಡ್ಡಾಯವಾಗಿದೆ. ಕೆಲವೆಡೆ ಮದ್ಯದಂಗಡಿಗಳ ಬಳಿ ಕಟ್ಟಿಗೆ […]

Stock Clearance ಸೋಮವಾರದಿಂದ ಎಣ್ಣೆ ಅಂಗಡಿಗಳು ಓಪನ್, ಸಿದ್ಧತೆ ಹೇಗಿದೆ ನೋಡಿ!
Follow us
ಸಾಧು ಶ್ರೀನಾಥ್​
|

Updated on: May 03, 2020 | 5:26 PM

ಬೆಂಗಳೂರು: ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆಯೇ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾಳೆಯಿಂದ ಎಣ್ಣೆ ಸಿಗುತ್ತೆ ಅಂತ ಹೇಳಿದ್ದೇ ತಡ, ಈಗಿನಿಂದಲೇ ಕುಡುಕರು ಬಾರ್​ಗಳ ಮುಂದೆ ಸಾಲು ಸಾಲಾಗಿ ಶಿಸ್ತಿನಿಂದ ನಿಂತುಬಿಟ್ಟಿದ್ದಾರೆ.

ಮಾಲೀಕರು ಸಹ MSIL ಮಳಿಗೆ, ವೈನ್ ಶಾಪ್‌ಗಳ ಬಳಿ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಒಬ್ಬರಿಗೆ 2.3ಲೀಟರ್ ಮದ್ಯ ಖರೀದಿಗೆ ಅವಕಾಶ ಕೊಟ್ಟಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಂಗಡಿಗೆ ಬರೋದು ಕಡ್ಡಾಯವಾಗಿದೆ. ಕೆಲವೆಡೆ ಮದ್ಯದಂಗಡಿಗಳ ಬಳಿ ಕಟ್ಟಿಗೆ ಕಟ್ಟುತ್ತಿದ್ದರೆ, ಮತ್ತೆ ಕೆಲವೆಡೆ ಮಾರ್ಕಿಂಗ್ ಕಾರ್ಯ ಶುರುಮಾಡಿದ್ದಾರೆ. ಇನ್ನೂ ಕೆಲವೆಡೆ ಕುಡುಕರನ್ನು ಕಂಟ್ರೋಲ್ ಮಾಡಲು ಸೆಕ್ಯೂರಿಟಿ ಗಾರ್ಡ್ ನೇಮಿಸಲು ಚಿಂತನೆ ನಡೆಸಿದ್ರೆ, ಮತ್ತೆ ಕೆಲೆವೆಡೆ ಬ್ಯಾರಿಕೇಡ್ ಅಳವಡಿಸಲು ಮುಂದಾಗಿದ್ದಾರೆ.

ಅಂದಹಾಗೆ ಈ ಭರ್ಜರಿ ಎಣ್ಣೆ ಮಾರಾಟ ಗ್ರೀನ್ ಜೋನ್ ಮತ್ತು ಆರೆಂಜ್ ಜೋನ್​ನಲ್ಲಿ ಮಾತ್ರ. ಹಾಗಾಗಿ ರೆಡ್ ಜೋನ್​ನಲ್ಲಿರುವ ಎಣ್ಣೆ ಪ್ರಿಯರು ಶ್ಯಾನೆ ಬೇಜಾರಿನಲ್ಲಿದ್ದಾರೆ. ತಮ್ಮ ಏರಿಯಾದಲ್ಲಿ ಮದ್ಯ ಮಾರಾಟ ಇಲ್ಲ ಅಂತಾ ಅಲ್ಲ. ಆದ್ರೆ.. ತಮ್ಮ ಏರಿಯಾ ರೆಡ್ ಜೋನ್​ನಿಂದ ಮುಕ್ತಿ ಪಡೆದು ಎಣ್ಣೆ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಪಡೆಯುವ ವೇಳೆಗೆ ಈಗಿರುವ ಗ್ರೀನ್ ಜೋನ್ ಎಣ್ಣೆಯಾಳುಗಳು ಎಲ್ಲಾ ಸ್ಟಾಕ್ ಕ್ಲಿಯರ್ ಮಾಡಿ, ತಮಗೆಲ್ಲಿ ತೊಟ್ಟು ಸಹ ಉಳಿಸಲ್ಲವೋ ಅಂತಾ ಶ್ಯಾನೆ ಪರೆಶಾನ್​ನಲ್ಲಿದ್ದಾರೆ.

First come first serve: ಬಲ್ಲ ಮೂಲಗಳ ಪ್ರಕಾರ ಲಾಕ್ ಡೌನ್-3 ಅವಧಿಯಲ್ಲಿ ಈ ಎಣ್ಣೆ ಮಾರಾಟ ಸ್ಟಾಕ್ ಇರುವರೆಗೆ ಮಾತ್ರ ಎನ್ನಲಾಗಿದೆ.

ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?