Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Breaking Kannada News highlights: KSRTC ಬಸ್ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

ಆಯೇಷಾ ಬಾನು
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 26, 2023 | 10:56 PM

Breaking News Today highlights: ಸಿಎಂ ಸಿದ್ದರಾಮಯ್ಯ ನಾಳೆಯಿಂದ 3 ದಿನ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಆಗಸ್ಟ್​​ 28ರಂದು ಮೈಸೂರಿನಲ್ಲಿ ಕೆಡಿಪಿ ಸಭೆ ನಡೆಸಲಿದ್ದು ಆ.30ರಂದು ಗೃಹಲಕ್ಷ್ಮಿ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕದ ವಿದ್ಯಮಾನಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.

Karnataka Breaking Kannada News highlights: KSRTC ಬಸ್ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
ಪ್ರಾತಿನಿಧಿಕ ಚಿತ್ರ

ಚಂದ್ರಯಾನ 3(Chandrayaan 3) ಯಶಸ್ವಿಯಾದ ಹಿನ್ನೆಲೆ ಪ್ರಧಾನಿ ನರೇಂದ್ರ(Narendra Modi) ಮೋದಿಯವರು ಇಂದು ಬೆಂಗಳೂರಿಗೆ ಆಗಮಿಸಿ ಇಸ್ರೋಂ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಅನೇಕ ಮಹತ್ತರ ಬೆಳವಣಿಗೆಗಳು ಕೂಡ ನಡೆದವು. ಮತ್ತೊಂದೆಡೆ ಮೋದಿ ಭೇಟಿ ವೇಳೆ ಬ್ಯಾರಿಕೇಡ್ ಹಿಂದೆ ಬಿಜೆಪಿ ನಾಯಕರು ನಿಂತ ಬಗ್ಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಮಾಜಿ ಎಂಎಲ್ಸಿ ರಮೇಶ್ ಬಾಬು ಟ್ವೀ್ ಮೂಲಕ ವ್ಯಂಗ್ಯವಾಡಿದ್ದಾರೆ. ಇಂಥ ದುರಂತವನ್ನು ನೀವು ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ನೋಡಲು ಸಾಧ್ಯ. ಮೋದಿ ಭೇಟಿ ವೇಳೆ ರಾಜ್ಯ ಬಿಜೆಪಿ ನಾಯಕರನ್ನು ನಾಯಿಗಿಂತ ಕಡೆಯಾಗಿ ನೋಡಲಾಗಿದೆ ಎಂದಿದ್ದಾರೆ. ಇನ್ನು ನಾಳೆಯಿಂದ 3 ದಿನ ಸಿಎಂ ಸಿದ್ದರಾಮಯ್ಯ(Siddaramaiah) ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಆಗಸ್ಟ್​​ 28ರಂದು ಮೈಸೂರಿನಲ್ಲಿ ಕೆಡಿಪಿ ಸಭೆ ನಡೆಸಲಿದ್ದು ಆ.30ರಂದು ಗೃಹಲಕ್ಷ್ಮೀ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ವೀಕ್ಷಿಸಿ.

LIVE NEWS & UPDATES

The liveblog has ended.
  • 26 Aug 2023 10:08 PM (IST)

    Karnataka Breaking News Live: ಕೆಎಸ್​ಆರ್​ಟಿಸಿ ಬಸ್ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಹುಬ್ಬಳ್ಳಿ: ಕೆಎಸ್​ಆರ್​ಟಿಸಿ ಬಸ್ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಹೊಸುರ ಬಸ್ ನಿಲ್ದಾಣದ ಬಳಿ ನಡೆದಿದೆ. ರಾಯಭಾಗಕ್ಕೆ ತೆರಳುತ್ತಿದ್ದ ಮೃತ ವ್ಯಕ್ತಿ. ಆತನ ಗುರುತು ಇನ್ನು ಪತ್ತೆಯಾಗಿಲ್ಲ. ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 26 Aug 2023 09:15 PM (IST)

    Karnataka Breaking News Live: ಧಗಧಗನೆ ಹೊತ್ತಿ ಉರಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

    ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ಸೋಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಧಗಧಗನೆ ಹೊತ್ತಿ ಉರಿದಿದೆ. ಕಳೆದ 1 ವರ್ಷದಿಂದ ಗ್ರಾಮ ಪಂಚಾಯತಿಯವರು ಶಾಲೆ ಆವರಣದಲ್ಲೇ ಕಸ ಸಂಗ್ರಹಿಸಿದ್ದರು. ಇದೀಗ ಕಸಕ್ಕೆ ಬೆಂಕಿ ಬಿದ್ದು ನಂತರ ಹಿರಿಯ ಪ್ರಾಥಮಿಕ ಶಾಲೆಗೂ ವ್ಯಾಪಿಸಿ. ಸಂಪೂರ್ಣ ಸುಟ್ಟು ಭಸ್ಮವಾಗಿದೆ.

  • 26 Aug 2023 08:28 PM (IST)

    Karnataka Breaking News Live: ಕೊಡಗಿನಲ್ಲಿ ಕಾಡಾನೆ ಹಾವಳಿ; ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಈಶ್ವರ್ ಖಂಡ್ರೆ

    ಮಡಿಕೇರಿ: ಕಾಡಾನೆಗಳ ಹಾವಳಿ ಹಿನ್ನೆಲೆಯಲ್ಲಿ ಜಿಲ್ಲೆಯ ನಾಗರಹೊಳೆ, ಚೀನಿಹಡ್ಲು, ಕಾಯಿಮಾನಿಗೆ ಅಧಿಕಾರಿಗಳೊಂದಿಗೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಕಾಡಾನೆ ದಾಳಿ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಕೃಷಿಕರು ಕಾಡಾನೆ ದಾಳಿ ಬಗ್ಗೆ ಅಳಲು ತೋಡಿಕೊಂಡರೇ, ಆದಿವಾಸಿಗಳು ರೈಲ್ವೆ ಕಂಬಿ ಹಾಕುವಂತೆ ಮನವಿ ಮಾಡಿದರು.

  • 26 Aug 2023 07:42 PM (IST)

    Karnataka Breaking News Live: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಅಶ್ಲೀಲ ಫೋಟೋ ಪೋಸ್ಟ್

    ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಲಾಗಿತ್ತು. ಅಷ್ಟೇ ಅಲ್ಲ, ಹ್ಯಾಕ್ ಮಾಡಿದ ಬಳಿಕ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ್ದರು. ತಕ್ಷಣ ಎಚ್ಚೆತ ಎಚ್ಡಿಕೆ ಸೋಶಿಯಲ್ ಮೀಡಿಯಾ ಟೀಮ್, ಪೋಸ್ಟ್ ಆಗಿದ್ದ ಅಶ್ಲೀಲ ಚಿತ್ರ ಡಿಲೀಟ್ ಮಾಡಿದೆ.

  • 26 Aug 2023 07:20 PM (IST)

    Karnataka Breaking News Live: ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಟ್ವೀಟ್; ತಪ್ಪು ಹುಡುಕುವುದರಲ್ಲಿಯೇ ಅವರ ಆಯುಷ್ಯ ಹೋಯ್ತು; ಕೇಂದ್ರ ಸಚಿವ

    ಹಾಸನ: ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಮಾತನಾಡಿದ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ್ ಖೂಬಾ ಅವರು ‘ ಅಂತಹದ್ದನ್ನು ಹುಡುಕುವುದರಲ್ಲಿ ಕಾಂಗ್ರೆಸ್‌ನವರ ಆಯುಷ್ಯ ಕಳೆದು ಹೋಯ್ತು, ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷದ ಒಬ್ಬ ನಾಯಕ. ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಕೂಡ ನಾಯಕನನ್ನು ಹೆಮ್ಮೆಯಿಂದ ಸ್ವಾಗತ ಮಾಡುವುದು ನಮ್ಮ ಮನಸ್ಥಿತಿ ಎಂದರು.

  • 26 Aug 2023 06:40 PM (IST)

    Karnataka Breaking News Live: ಭಾರತೀಯ ಜನತಾ ಪಕ್ಷ ನಾವಿಕನಿಲ್ಲದ ಹಡಗಿನಂತಾಗಿದೆ; ಎಂ.ಪಿ ರೇಣುಕಾಚಾರ್ಯ

    ದಾವಣಗೆರೆ: ಭಾರತೀಯ ಜನತಾ ಪಕ್ಷ ನಾವಿಕನಿಲ್ಲದ ಹಡಗಿನಂತಾಗಿದೆ ಎಂದು ಎಂ.ಪಿ ರೇಣುಕಾಚಾರ್ಯ ಹೇಳಿದರು. ‘ಇಷ್ಟು ದಿನವಾದರೂ ವಿಪಕ್ಷ ನಾಯಕರು, ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲವೆಂದು ಸ್ವಪಕ್ಷೀಯರ ವಿರುದ್ಧವೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

  • 26 Aug 2023 06:17 PM (IST)

    Karnataka Breaking News Live: ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳ ದಾಳಿ

    ಗದಗ: ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ದಾಸ್ತಾನು ಗೋಡೌನ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹೊರ ವಲಯದ ಗೋಡೌನ್​ನಲ್ಲಿ ಅಪಾರ ಪ್ರಮಾಣದ ಅಕ್ಕಿಯನ್ನು ಶೇಖರಿಸಿಡಲಾಗಿತ್ತು. ಈ ಕುರಿತು ಸಾರ್ವಜನಿಕರ ಮಾಹಿತಿ ಮೇರೆಗೆ ಇಂದು ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದರು.

  • 26 Aug 2023 05:45 PM (IST)

    Karnataka Breaking News Live: ಚಂದಿರನ ಮೇಲೆ ಪ್ರಜ್ಞಾನ್​ ರೋವರ್ ಸಂಚಾರದ ವಿಡಿಯೋ ರಿಲೀಸ್​ ಮಾಡಿದ ಇಸ್ರೋ

    ಬೆಂಗಳೂರು: ಬಾಹ್ಯಾಕಾಶ ಸಂಸ್ಥೆ ಇಸ್ರೋದಿಂದ ಮತ್ತೊಂದು ವಿಡಿಯೋ ರಿಲೀಸ್‌ ಆಗಿದ್ದು, ‘ಶಿವಶಕ್ತಿ ಪಾಯಿಂಟ್​’ನಲ್ಲಿ ಪ್ರಜ್ಞಾನ್​ ರೋವರ್ ಸಂಚಾರದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿಕ್ರಮ್​ನಿಂದ​ ಇಳಿದ ರೋವರ್ ಮುಂದೆ ಚಲಿಸಿ ತಿರುಗಿದೆ. ಇನ್ನು ಆಗಸ್ಟ್​ 25ರಂದು ಸೆರೆಯಾದ ದೃಶ್ಯವನ್ನು ಇಸ್ರೋ ತನ್ನ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

  • 26 Aug 2023 05:09 PM (IST)

    Karnataka Breaking News Live: ಯಾದಗಿರಿ ಜಿಲ್ಲೆಯಾದ್ಯಂತ ವರುಣನ ಅಬ್ಬರ

    ಯಾದಗಿರಿ: ಬಿಸಿಲಿನ ಬೇಗೆಗೆ ಬಸವಳಿದಿದ್ದ ಯಾದಗಿರಿ ಜನರಿಗೆ ವರುಣನ ಕೃಪೆಯಾಗಿದೆ. ಹೌದು, ಸತತ ಒಂದು ಗಂಟೆಯಿಂದ ಜಿಲ್ಲೆಯಾದ್ಯಂತ ಅಬ್ಬರದ ಮಳೆಯಾಗುತ್ತಿದೆ. ಮತ್ತೊಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇಂದು ಸುರಿದ ಮಳೆಯಿಂದ ಒಣಗುತ್ತಿದ್ದ ಬೆಳೆಗೆ ಜೀವ ಕಳೆ ಬಂದಿದೆ.

  • 26 Aug 2023 04:52 PM (IST)

    Karnataka Breaking News Live: ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳ ನೇಮಕ

    ಬೆಂಗಳೂರು: ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆ ಏಳು ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದ್ದು, ಈಶಾನ್ಯ ಪದವೀಧರ ಕ್ಷೇತ್ರ- ಬಿ. ಶ್ರೀರಾಮುಲು, ನೈಋತ್ಯ ಪದವೀಧರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರ- ಸಿ.ಟಿ. ರವಿ, ಬೆಂಗಳೂರು ಪದವೀಧರ ಕ್ಷೇತ್ರ- ಆರ್. ಅಶೋಕ್, ಆಗ್ನೇಯ ಶಿಕ್ಷಕರ ಕ್ಷೇತ್ರ- ಡಿ.ವಿ. ಸದಾನಂದ ಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರ- ಕೆ.ಎಸ್. ಈಶ್ವರಪ್ಪ, ಬೆಂಗಳೂರು ಶಿಕ್ಷಕರ ಕ್ಷೇತ್ರ- ಡಾ. ಸಿ.ಎ‌ನ್. ಅಶ್ವಥ್ ನಾರಾಯಣ್​ ಅವರನ್ನು ನೇಮಿಸಲಾಗಿದೆ.

  • 26 Aug 2023 03:47 PM (IST)

    Karnataka Breaking News Live: ಯಾರು ಯಾರಿಗೆ ಕರೆ ಮಾಡಿದರೂ ನಾವು ತಲೆ ಕೆಡಿಸಿಕೊಳ್ಳಲ್ಲ; ಸಚಿವ ಡಾ.ಮಹದೇವಪ್ಪ

    ಮೈಸೂರು: ನಮ್ಮ ಸರ್ಕಾರ ಸುಭದ್ರವಾಗಿದೆ, ಯಾರೂ ಅಲ್ಲಾಡಿಸಲು ಆಗಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಎಲ್ಲರೂ ಬದ್ಧತೆಯಿಂದ ಇದ್ದಾರೆ, ಹಾಗಾಗಿ ಬಿಜೆಪಿಗೆ ಕಂಗಾಲಾಗಿದೆ. ಯಾರು ಯಾರಿಗೆ ಕರೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

  • 26 Aug 2023 03:10 PM (IST)

    Karnataka Breaking News Live: ಜಗದೀಶ್​ ಶೆಟ್ಟರ್​ಗೆ ಅಮಿತ್ ಶಾ ಕರೆ; ಕಾಂಗ್ರೆಸ್ DNA, ಜಗದೀಶ್ ಶೆಟ್ಟರ್ ಡಿಎನ್​ಎ ಮ್ಯಾಚ್ ಆಗಲ್ಲ, ಸಿಟಿ ರವಿ

    ಚಿಕ್ಕಮಗಳೂರು: ಮಾಜಿ ಸಿಎಂ ಜಗದೀಶ್​ ಶೆಟ್ಟರ್​ಗೆ ಅಮಿತ್ ಶಾ ಕರೆ ವಿಚಾರ ‘ಕಾಂಗ್ರೆಸ್ DNA, ಜಗದೀಶ್ ಶೆಟ್ಟರ್ ಡಿಎನ್​ಎ ಮ್ಯಾಚ್ ಆಗಲ್ಲ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು. ಅವರ ತಂದೆ, ಚಿಕ್ಕಪ್ಪ ಜನಸಂಘ ಕಾಲದಿಂದಲೂ ಪಕ್ಷದ ಜೊತೆಗಿದ್ರು, ಶೆಟ್ಟರ್ ಏಕೆ ಕಾಂಗ್ರೆಸ್ ಸೇರುವ ನಿರ್ಣಯ ಮಾಡಿದ್ರೋ ಗೊತ್ತಿಲ್ಲ. ಮ್ಯಾಚ್ ಆಗದ DNA ಜೊತೆ ಬಹಳ ಕಾಲ ಉಳಿದುಕೊಳ್ಳಲು ಆಗಲ್ಲ ಎಂದರು.

  • 26 Aug 2023 02:51 PM (IST)

    Karnataka Breaking News Live: ಚಂದ್ರಯಾನ-3 ಯಶಸ್ವಿ; ಉಭಯ ಪಕ್ಷಗಳ ನಡುವೆ ಕ್ರೆಡಿಟ್​ ವಾರ್

    ಹಾಸನ: ಚಂದ್ರಯಾನ-3 ಯಶಸ್ವಿ ವಿಚಾರಕ್ಕೆ ಬಿಜೆಪಿ, ಕಾಂಗ್ರೆಸ್​​ ನಡುವೆ ಕ್ರೆಡಿಟ್ ವಾರ್ ಸುರುವಾಗಿದೆ.​ ವಿಜ್ಞಾನಿಗಳಿಗೆ ಸಲ್ಲಿಬೇಕಿರುವ ಕ್ರೆಡಿಟ್ ಬಗ್ಗೆ ಇವಱಕೆ ಪೈಪೋಟಿ ಮಾಡಬೇಕು, ಇಂತಹ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೆಚ್​ಡಿ ಕುಮಾರಸ್ವಾಮಿಯವರು ಹೇಳುತ್ತಿದ್ದಾರೆ.

  • 26 Aug 2023 02:03 PM (IST)

    Karnataka Breaking News Live: ಕಾಂಗ್ರೆಸ್ ಆಪರೇಷನ್ ಬೆನ್ನಲ್ಲೇ ಜಗದೀಶ್ ಶೆಟ್ಟರ್​ಗೆ ಅಮಿತ್ ಶಾ ದೂರವಾಣಿ ಕರೆ

    ಕಾಂಗ್ರೆಸ್ ಆಪರೇಷನ್ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಕೇಂದ್ರ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಮುಂದಾಗಿದ್ದು ಇದರ ಬೆನ್ನಲ್ಲೇ BJP ತೊರೆದವರ ಮನವೊಲಿಕೆ ಅಮಿತ್ ಶಾ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶೆಟ್ಟರ್​​ಗೆ ಕರೆ ಅಮಿತ್ ಶಾ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಟಿಕೆಟ್ ನಿರಾಕರಣೆ ಮಾಡಿದ್ದಕ್ಕೆ ಶೆಟ್ಟರ್​, BJP ತೊರೆದು ಕಾಂಗ್ರೆಸ್ ಸೇರಿದ್ದರು.

  • 26 Aug 2023 01:43 PM (IST)

    Karnataka Breaking News Live: ಇನ್ನೊಂದು ವಾರ ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ -ಹೆಚ್.ಡಿ.ಕುಮಾರಸ್ವಾಮಿ

    ಇನ್ನೊಂದು ವಾರ ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ. ಎಲ್ಲರೂ ಈಗ ಚಂದ್ರಯಾನದ ಗುಂಗಿನಲ್ಲಿ ಇದ್ದಾರೆ ಎಂದು ಹಾಸನದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಚಂದ್ರಯಾನ-3 ಸಾಧನೆ ನಮ್ಮ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ವಿಜ್ಞಾನಿಗಳ ಅವಿರತ ಶ್ರಮದಿಂದ ವಿಶ್ವದಾದ್ಯಂತ ಪ್ರಸಂಶೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಅಭಿನಂದನೆ ಸಲ್ಲಿಸಿ ಹೋಗಿದ್ದಾರೆ ಎಂದರು.

  • 26 Aug 2023 01:38 PM (IST)

    Karnataka Breaking News Live: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ -ಕಾಂಗ್ರೆಸ್​ಗೆ ಬಿಜೆಪಿ ಟ್ಯಾಂಗ್

    ಕಾಂಗ್ರೆಸ್​ ನಾಯಕರ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್​​​​​​ ಮಾಡಿ ತಿರುಗೇಟು ಕೊಟ್ಟಿದೆ. ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಮೋದಿ ಬೆಂಗಳೂರಿಗೆ ಬಂದಿದ್ದರು. ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿದರು. ಇದರಲ್ಲೂ ಹುಳುಕು ಹುಡುಕುವ ನಿಮಗೆ ಕಾಯಿಲೆ ಇರಬಹುದು. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್​ಗೆ ಬಿಜೆಪಿ ತಿರುಗೇಟು ಕೊಟ್ಟಿದೆ.

  • 26 Aug 2023 01:25 PM (IST)

    Karnataka Breaking News Live: ನಮಗೆ ಯಾರ ಅಗತ್ಯವಿಲ್ಲ, 5 ವರ್ಷ ಸುಭದ್ರ ಸರ್ಕಾರ ಕೊಡ್ತೇವೆ -ಸಚಿವ ಪ್ರಿಯಾಂಕ್ ಖರ್ಗೆ

    ನಮಗೆ ಯಾರ ಅಗತ್ಯವಿಲ್ಲ, 5 ವರ್ಷ ಸುಭದ್ರ ಸರ್ಕಾರ ಕೊಡ್ತೇವೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಬಿಜೆಪಿಯ ಕಾರ್ಯಕರ್ತರೇ ಇರಲಿ, ಶಾಸಕರಿರಲಿ, ಸಂಸದರೇ ಇರಲಿ, ಕಾಂಗ್ರೆಸ್‌ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಅವರನ್ನು ಸ್ವಾಗತಿಸ್ತೇವೆ. ಆದರೆ ನಾವು ಆಪರೇಷನ್ ಹಸ್ತ ಮಾಡ್ತಿಲ್ಲ. ಅವರಾಗೆ ಬರುತ್ತಿದ್ದಾರೆ. ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದೇ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

  • 26 Aug 2023 01:23 PM (IST)

    Karnataka Breaking News Live: ಶೀಘ್ರದಲ್ಲೇ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲಿರುವ ಸಿಎಂ ಸಿದ್ದರಾಮಯ್ಯ

    ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಕಳೆದ ಎರಡು ತಿಂಗಳಿಂದ ಕಾವೇರಿ ನಿವಾಸದ ನವೀಕರಣ ಕೆಲಸ ನಡೆಯುತಿತ್ತು. ಇದೀಗ ಕಾವೇರಿ ನಿವಾಸದ ನವೀಕರಣ ಕೆಲಸ‌ ಮುಗಿದ ಹಿನ್ನೆಲೆ ಬಹುತೇಕ ಸೆ.1 ಕಾವೇರಿ ನಿವಾಸಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ.

  • 26 Aug 2023 12:48 PM (IST)

    Karnataka Breaking News Live: ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದನ್ನ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ

    ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದನ್ನ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಬಿಡದಿಯಿಂದ ಕೆ.ಆರ್.ಎಸ್ ಡ್ಯಾಂ ವರೆಗೂ ರ್ಯಾಲಿ ಮಾಡುತ್ತಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬೆಂ-ಮೈ ಹಳೇ ಹೆದ್ದಾರಿ ತಡೆದು ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

  • 26 Aug 2023 12:41 PM (IST)

    Karnataka Breaking News Live: ರಾಜ್ಯದಲ್ಲಿ ಯಾವುದೇ ಬಿಪಿಎಲ್​ ಕಾರ್ಡ್​ ರದ್ದು ಮಾಡುವುದಿಲ್ಲ -ಸಚಿವ ಮುನಿಯಪ್ಪ ಸ್ಪಷ್ಟನೆ

    ರಾಜ್ಯದಲ್ಲಿ ಯಾವುದೇ ಬಿಪಿಎಲ್​ ಕಾರ್ಡ್​ ರದ್ದು ಮಾಡುವುದಿಲ್ಲ ಎಂದು ಹಾಸನದಲ್ಲಿ ಆಹಾರ&ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಲಕ್ಷ ಜನರು ಅರ್ಜಿ ಹಾಕಿದ್ದರು. ಅರ್ಜಿ ಬಗ್ಗೆ ಪರಿಶೀಲನೆ ಮಾಡಿ ಅನುಮೋದನೆ ಮಾಡಲು ಸೂಚಿಸಲಾಗಿದೆ. ಇನ್ನು 3 ತಿಂಗಳಲ್ಲಿ ಅರ್ಹರಿಗೆ BPL, APL ಕಾರ್ಡ್ ನೀಡಲಾಗುತ್ತೆ. ಬ್ಯಾಂಕ್ ಖಾತೆ ಇಲ್ಲದಿದ್ದಕ್ಕೆ ಕೆಲವರ ಕಾರ್ಡ್ ರದ್ದಾಗಿತ್ತು. ಈ ಬಗ್ಗೆಯೂ ಕೂಡ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಯಾರು ಅರ್ಹರಿರುತ್ತಾರೋ ಅವರಿಗೆ ಯಾವ ತೊಂದರೆ ಆಗುವುದಿಲ್ಲ. ಎಲ್ಲವನ್ನೂ ಪರಿಶೀಲನೆ ಮಾಡಿ ಅಕ್ಕಿ ವಿತರಣೆ ಬಗ್ಗೆ ಕ್ರಮ ವಹಿಸುತ್ತೇವೆ ಎಂದರು.

  • 26 Aug 2023 12:35 PM (IST)

    Karnataka Breaking News Live: ರಾಜ್ಯ ಬಿಜೆಪಿ ನಾಯಕರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಮೋದಿ ಭೇಟಿಯಾಗಲು ರಾಜ್ಯ ಬಿಜೆಪಿ ನಾಯಕರಿಗೆ ಸಿಗದ ಅವಕಾಶ. ರಾಜ್ಯ ಬಿಜೆಪಿ ನಾಯಕರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ. ಪ್ರಧಾನಿ ಮುಂದೆ ಬ್ಯಾರಿಕೆಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಸ್ವಾಭಿಮಾನ, ಆತ್ಮಗೌರವ ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ. ತಿರಸ್ಕಾರಕ್ಕೆ ಒಳಪಟ್ಟಿರುವಾಗ ವಿಪಕ್ಷ ನಾಯಕನ ಆಯ್ಕೆ ಸಾಧ್ಯವಾಗುವುದೇ? ಈಗ ಸ್ವತಃ ಬಿಜೆಪಿಗರೂ ಸರ್ವಾಧಿಕಾರದ ಸಂತ್ರಸ್ತರಾಗಿದ್ದಾರೆ ಎಂದು ಟ್ವೀಟ್​ ಮೂಲಕ ಬಿಜೆಪಿ ನಾಯಕರ ಬಗ್ಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

  • 26 Aug 2023 11:53 AM (IST)

    Karnataka Breaking News Live: ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾದ ಡಾ.ಪರಮೇಶ್ವರ್​, ಡಿ.ಕೆ.ಸುರೇಶ್​

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಾ.ಪರಮೇಶ್ವರ್​, ಡಿ.ಕೆ.ಸುರೇಶ್​ ಅವರು ಭೇಟಿಯಾಗಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಖರ್ಗೆ ಜೊತೆ ಮಾತುಕತೆ ನಡೆಸಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಜೊತೆ ಮಾಡಿದ್ದಾರೆ.

  • 26 Aug 2023 11:46 AM (IST)

    Karnataka Breaking News Live: ಯಾರಿಗೆ ಎಷ್ಟು ಗೌರವ ಕೋಡಬೇಕು ಅಂತಾ ನಮಗೆ ಗೊತ್ತಿದೆ -ಡಿಸಿಎಂ ಡಿಕೆ ಶಿವಕುಮಾರ್

    ಮೋದಿ ಭೇಟಿ ವೇಳೆ ಪ್ರೋಟೋಕಾಲ್ ಪಾಲನೆ ಮಾಡಿಲ್ಲವೆಂಬ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಅಶೋಕ್ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಶಾಸಕ ಆರ್​.ಅಶೋಕ್​ಗೆ ಸ್ವಲ್ಪ ಪ್ರಾಬ್ಲಂ ಇದೆ. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ನಮಗೆ ಇದೆ. ಪ್ರಧಾನಮಂತ್ರಿ ಕಚೇರಿಯಿಂದ ನಮಗೆ ಕರೆ ಬಂದಿತ್ತು. ಕೇಂದ್ರ ಸರ್ಕಾರವೇ ಬರೋದು ಬೇಡ ಅಂತಾ ನಮಗೆ ಹೇಳಿತ್ತು. ಸರ್ಕಾರದ ವತಿಯಿಂದ ಪ್ರಧಾನಿ ಮೋದಿ ಸ್ವಾಗತ ಮಾಡಿಸಿದ್ದೇವೆ. ಯಾರಿಗೆ ಎಷ್ಟು ಗೌರವ ಕೋಡಬೇಕು ಅಂತಾ ನಮಗೆ ಗೊತ್ತಿದೆ. ಬೇರೆ ರಾಜ್ಯಗಳ ರೀತಿ ಅಲ್ಲ ನಮ್ಮ ಸಂಸ್ಕೃತಿ. ರಾಜಕೀಯ ಭಿನ್ನಾಭಿಪ್ರಾಯ ಇದ್ರೂ ಪ್ರಧಾನಿಗೆ ಗೌರವ ಕೊಡ್ತೇವೆ ಎಂದರು.

  • 26 Aug 2023 11:43 AM (IST)

    Karnataka Breaking News Live: ಮೈಸೂರಿನಲ್ಲಿ ಕಾಂಗ್ರೆಸ್​ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ

    ಬಿಜೆಪಿ ನಾಯಕರೆಲ್ಲಾ ಬೀದಿಪಾಲಾಗಿದ್ದಾರೆ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದ ವಿಚಾರಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್​ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ. ಪ್ರಧಾನಿ ಬಳಿ ಎಲ್ಲರನ್ನೂ ಬಿಡಲು ಆಗಲ್ಲ, ಸೆಕ್ಯೂರಿಟಿ ಸಮಸ್ಯೆ ಇರುತ್ತೆ. ಜನ ಕಾಂಗ್ರೆಸ್​​ಗೆ 5 ವರ್ಷ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಬೆಳಗ್ಗೆ ಎದ್ದು ಮರ, ಗಿಡದ ಮೇಲೆ ಕುಳಿತು ಕಾ..ಕಾ ಅನ್ನೋದಕ್ಕೆ ಅಲ್ಲ. ಮೊದಲು ಕಾಂಗ್ರೆಸ್​​ನವರಿಗೆ ಕೆಲಸ ಮಾಡಲು ಹೇಳಿ ಎಂದು ಮೈಸೂರಿನಲ್ಲಿ ಕಾಂಗ್ರೆಸ್​ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿರು.

  • 26 Aug 2023 11:11 AM (IST)

    Karnataka Breaking News Live: ವಿದ್ಯಾರ್ಥಿ ಮೇಲೆ ಸ್ವಧರ್ಮೀಯ ಯುವಕರಿಂದಲೇ ನೈತಿಕ ಪೊಲೀಸ್​ಗಿರಿ

    ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲ್ಯಾಟ್​​​ನಲ್ಲಿ ವಿದ್ಯಾರ್ಥಿ ಮೇಲೆ ಸ್ವಧರ್ಮೀಯ ಯುವಕರಿಂದಲೇ ನೈತಿಕ ಪೊಲೀಸ್​ಗಿರಿ ನಡೆದಿದೆ. ಹುಡುಗಿ ವಿಚಾರಕ್ಕೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ಇಬ್ರಾಹಿಂ ಫಾಹಿಂನನ್ನು ಕಿಡ್ನ್ಯಾಪ್​​ ಮಾಡಿ ಹಲ್ಲೆ ನಡೆಸಲಾಗಿದೆ. ಗಾಂಜಾ ನಶೆಯಲ್ಲಿ ವಿದ್ಯಾರ್ಥಿ ಇಬ್ರಾಹಿಂ ಫಾಹಿಂ ಮೇಲೆ ಹಲ್ಲೆ ನಡೆದಿದೆ. ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ರಾಹಿಂಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಘಟನೆ ಸಂಬಂಧ ಓರ್ವ ಆರೋಪಿಯನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.

  • 26 Aug 2023 11:05 AM (IST)

    Karnataka Breaking News Live: ಪಿಓಪಿ ಗಣೇಶ ಮಾರಾಟ, ಅಧಿಕಾರಿಗಳ ದಾಳಿ

    ಗಣೇಶ ಹಬ್ಬಕ್ಕೆ ಪಿಓಪಿ ಮೂರ್ತಿ ಬ್ಯಾನ್ ಮಾಡಲಾಗಿದೆ. ಆದರೆ ಧಾರವಾಡದಲ್ಲಿ ನಿಷೇಧದ ಮಧ್ಯೆಯೂ ಮಾರಾಟ ಮಾಡಲಾಗುತ್ತಿದೆ. ಪಿಓಪಿ ಮೂರ್ತಿಗೆ ಮಣ್ಣಿನ ಲೇಪನ ಮಾಡಿ ಮಣ್ಣಿನ ಮೂರ್ತಿ ಹೆಸರಿನಲ್ಲಿ ಪಿಓಪಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

  • 26 Aug 2023 10:52 AM (IST)

    Karnataka Breaking News Live: ಫ್ರೀಯಾಗಿ ಮೆಂತೆ ಸೊಪ್ಪು ಹಂಚಿದ ರೈತ

    ಹುಬ್ಬಳ್ಳಿಯ APMC ಮಾರುಕಟ್ಟೆಯಲ್ಲಿ ರೈತನೋರ್ವ ಫ್ರೀಯಾಗಿ ಮೆಂತೆ ಸೊಪ್ಪು ಹಂಚಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಇಳಿದದಕ್ಕೆ ಘಟಪ್ರಭಾದಿಂದ ಟ್ರ್ಯಾಕ್ಟರ್ ನಲ್ಲಿ ಮೆಂತೆ ಸೊಪ್ಪು ತಂದ್ದು 1 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆದ್ರೆ 1ರೂ,ಗೂ ಮಾರಾಟವಾದಾಗ ಉಚಿತವಾಗಿ ಕೊಟ್ಟಿದ್ದಾರೆ. ಟ್ರ್ಯಾಕ್ಟರ್ ಮೇಲೆ ನಿಂತು ಮೆಂತೆಸೊಪ್ಪು ಫ್ರೀ‌ ನೀಡಿದ್ದಾರೆ.

  • 26 Aug 2023 10:46 AM (IST)

    Karnataka Breaking News Live: ವ್ಯವಸ್ಥೆ ವಿರುದ್ಧ ಬೇಸತ್ತು ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

    ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಚಿಕ್ಕಬೂದುರು ಗ್ರಾಮದಲ್ಲಿ ಚನ್ನಬಸವ (25) ಎಂಬ ಯುವಕ ಇದೇ ಗ್ರಾಮದ ಖಾಸಗಿ ಶಾಲಾ ಕಂಪೌಂಡ್ ಪಕ್ಕದ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. 2022ರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿದ್ದ ಚನ್ನಬಸವ ಅಂತಿಮ ಲಿಸ್ಟ್ ನಲ್ಲೂ ಆಯ್ಕೆಯಾಗಿದ್ದ. ಆದರೆ ಕೊನೆ ಹಂತದಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಹುದ್ದೆ ಕೈ ತಪ್ಪಿದೆ. ಈ ಹಿನ್ನೆಲೆ ಮನ ನೊಂದಿದ್ದ ಚನ್ನಬಸವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ತಾನೇ ಕಾರಣ, ತನ್ನ ಪೋಷಕರು ಅಮಾಯಕರು. ಅವರು ದೂರು ಕೊಡಲು ಬಂದರೆ ಸ್ವೀಕರಿಸಬೇಡಿ ಅಂತ ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾನೆ.

  • 26 Aug 2023 10:42 AM (IST)

    Karnataka Breaking News Live: ಯಾದಗಿರಿಯಲ್ಲಿ ಮಕ್ಕಳಿಗೆ ವಿಕ್ರಮ ಹಾಗೂ ಪ್ರಗ್ಯಾನ್ ಹೆಸರಿಟ್ಟ ಪೋಷಕರು

    ಯಾದಗಿರಿಯ ವಡಗೇರ ಪಟ್ಟಣದಲ್ಲಿ ಬಾಲಪ್ಪ ಹಾಗೂ ನಾಗಮ್ಮ ದಂಪತಿ ಮಗುವಿಗೆ ವಿಕ್ರಮ ಎಂದೂ, ಇನ್ನು ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದೂ ನಾಮಕರಣ ಮಾಡಿದ್ದಾರೆ. ಇಬ್ಬರು ಮಕ್ಕಳಿಗೆ ಹೆಸರಿಟ್ಟು ದೇಶಕ್ಕೆ, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

  • 26 Aug 2023 10:37 AM (IST)

    Karnataka Breaking News Live: ನಾಳೆಯಿಂದ 3 ದಿನ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ

    ನಾಳೆಯಿಂದ 3 ದಿನ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಆಗಸ್ಟ್​​ 28ರಂದು ಮೈಸೂರಿನ ಜಿ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಲಿರುವ ಸಿಎಂ ಆ.30ರಂದು ಗೃಹಲಕ್ಷ್ಮೀ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೂರು ದಿನಗಳ ಕಾಲ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

Published On - Aug 26,2023 10:32 AM

Follow us
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
Daily Devotional: ಮಡಿಕೆಯಲ್ಲಿ ನೀರಿನ ಮಹತ್ವ ಹಾಗೂ ಅದರ ಹಿಂದಿನ ರಹಸ್ಯ
Daily Devotional: ಮಡಿಕೆಯಲ್ಲಿ ನೀರಿನ ಮಹತ್ವ ಹಾಗೂ ಅದರ ಹಿಂದಿನ ರಹಸ್ಯ
Daily Horoscope: ಈ ರಾಶಿಗಳಿಗೆ ಇಂದು ಅನುಕೂಲಕರವಾದ ದಿನವಾಗಿರಲಿದೆ
Daily Horoscope: ಈ ರಾಶಿಗಳಿಗೆ ಇಂದು ಅನುಕೂಲಕರವಾದ ದಿನವಾಗಿರಲಿದೆ
ಸಾಲ ಮಾಡಿದ್ದೇನೆ, ಎಲ್ಲ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್
ಸಾಲ ಮಾಡಿದ್ದೇನೆ, ಎಲ್ಲ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್
ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ