ಆರ್ಯಭಟ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ; ಪ್ರಧಾನಿ ಮೋದಿ ಭಾಷಣದಲ್ಲಿ ಇನ್ನೂ ಏನೇನು? ಇಲ್ಲಿದೆ ಹೈಲೈಟ್ಸ್
ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಇಸ್ರೋಗೆ ಭೇಟಿ ನೀಡಿದರು. ಈ ವೇಳೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಇವರ ಭಾಷಣದ ಆಸಕ್ತಿದಾಯಕ ಅಂಶಗಳು ಇಲ್ಲಿವೆ.

ಬೆಂಗಳೂರು: ಚಂದ್ರಯಾನ-3 (Chandrayaana-3) ಯಶಸ್ವಿ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗುವ ಮೂಲಕ ಇತಿಹಾಸ ಸೃಷ್ಠಿಸಿದೆ. ಈ ಮಹತ್ತರ ಕಾರ್ಯಕ್ಕೆ ಶ್ರಮಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧಾನ ಸಂಸ್ಥೆ (ISRO) ವಿಜ್ಞಾನಿಗಳನ್ನು ಜಗತ್ತೇ ಕೊಂಡಾಡುತ್ತಿದೆ. ಈ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು (ಆ.26) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು ದಕ್ಷಿಣ ಆಫ್ರಿಕಾ, ಗ್ರೀಕ್ ಪ್ರವಾಸ ಮುಗಿಸಿಕೊಂಡು ನೇರವಾಗಿ ಬೆಂಗಳೂರಿಗೆ ಆಗಮಿಸದ್ದರು.
ಇಲ್ಲಿಯ ಪಿಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. ಅಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಚಂದ್ರಯಾನ-3 ಯೋಜನೆ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದರು. ನಂತರ ಪ್ರಧಾನಿ ಮೋದಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಇವರ ಭಾಷಣದ ಕೆಲವು ಹೈಲೆಟ್ ಅಂಶಗಳು ಇಲ್ಲಿವೆ.
ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಪ್ರಧಾನಿ ಮೋದಿ ನಾಮಕರಣ
- ಮೊದಲು ನಿಮ್ಮ (ವಿಜ್ಞಾನಿಗಳ) ದರ್ಶನ ಮಾಡಲೆಂದು ಇಲ್ಲಿಗೆ ಬಂದೆ.
- ಚಂದ್ರಯಾನ-3 ಯಶಸ್ವಿ ಮೂಲಕ ಭಾರತದ ವೈಜ್ಞಾನಿಕ ಸಾಮರ್ಥ್ಯದ ಶಂಖನಾದ ಮೊಳಗಿದೆ.
- ತಂತ್ರಜ್ಞಾನ ಬೆಳವಣಿಗೆಯಾದರೆ ದೇಶ ಅಭಿವೃದ್ಧಿಗೆ ಸಹಕಾರಿಯಾಗುತ್ತೆ.
- ಸೆಪ್ಟೆಂಬರ್ 1ರಂದು ಚಂದ್ರಯಾನ-3 ಬಗ್ಗೆ ಕ್ವಿಜ್ ಸ್ಪರ್ಧೆ ಆಯೋಜನೆ ಮಾಡಲಾಗುತ್ತದೆ
- ಚಂದ್ರಯಾನ-2 ಲ್ಯಾಂಡ್ ಆದ ಸ್ಥಳಕ್ಕೆ ತಿರಂಗ ಪಾಯಿಂಟ್ ಎಂದು ಕರೆಯೋಣ.
- ಚಂದ್ರಯಾನ-3ಯ ವಿಕ್ರಂ ಲ್ಯಾಂಡರ್ ವಿಶ್ವಾಸ ಮತ್ತು ಪ್ರಗ್ಯಾನ್ನ ಪರಾಕ್ರಮ ದೇಶದ ಸಂಕೇತ.
- ಚಂದ್ರಯಾನ-3 ಯಶಸ್ಸು ಭಾರತ ಮಾತ್ರವಲ್ಲ ಮಾನವ ಕುಲದ ಯಶಸ್ಸಾಗಿದೆ.
- ವಿಕ್ರಂ ಲ್ಯಾಂಡರ್ ಲ್ಯಾಂಡ್ ಆದ ಸ್ಥಳಕ್ಕೆ ಶಿವಶಕ್ತಿ ಎಂದು ಕರೆಯೋಣ.
- ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲು ಘೋಷಿಸಿದರು.
- ಶುದ್ಧ ಮನಸ್ಸಿನಿಂದ ಕರ್ತವ್ಯ ಮತ್ತು ಕರ್ಮ ಮಾಡಿದರೇ ಶುಭ ಕಲ್ಯಾಣವಾಗುತ್ತದೆ ಎಂಬುವುದಕ್ಕೆ ಚಂದ್ರಯಾನ-3 ಸಾಕ್ಷಿಯಾಗಿದೆ.
- ನಿರ್ಮಾಣದಿಂದ ಪ್ರಳಯತನಕ ನಾರಿ ಶಕ್ತಿ ಮೇಲೆ ಸಂಪೂರ್ಣ ಸೃಷ್ಠಿ ನಿಂತಿದೆ ಎಂದು ಸಂಸ್ಕೃತ ಶ್ಲೋಕ ಹೇಳುವ ಮೂಲಕ ವಿವರಿಸಿದರು.
- ನಾನು ಯಾವ ಚಂದ್ರನನ್ನು ನೋಡುತ್ತಿದ್ದೇನೋ ಆ ಚಂದ್ರನ ಮೇಲೆ ನನ್ನ ದೇಶ ಕಾಲಿಟ್ಟಿದೆ ಎಂದು ಭವಿಷ್ಯದ ಮಕ್ಕಳು ಹೇಳುತ್ತಾರೆ.
- ಭಾರತ ಸಾವಿರಾರು ವರ್ಷಗಳ ಹಿಂದಯೇ ಅನ್ಯಗ್ರಹಗಳ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿತು.
- ಆರ್ಯಭಟ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ವರಹಮೀರ್ ಋಷಿಮುನಿಗಳು ಅಧ್ಯಯನ ಮಾಡಿದರು.
- ಆರ್ಯಭಟರು ತಮ್ಮ ಮಹಾನ್ ಗ್ರಂಥವಾದ ಆರ್ಯಭಟೀಯದಲ್ಲಿ ಭೂಮಿ ಗೋಳಾಕಾರವಾಗಿದೆ ಎಂದು ಹೇಳಿದರು.
- ಸೂರ್ಯ ಸಿದ್ಧಾಂತದಲ್ಲಿ ಭೂಮಿ ಗೋಳಾಕರವಾಗಿ ಆಕಾಶದಲ್ಲಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
- ಗ್ರಹಣಗಳ ಬಗ್ಗೆ ನಮ್ಮ ಪೂರ್ವಜನರು ಹೇಳಿದ್ದಾರೆ. ಗ್ರಹ, ಉಪಗ್ರಹಗಳ ಬಗ್ಗೆ ಹೇಳಿದ್ದರು.
- ನಮ್ಮ ಪೂರ್ವಜನರು ಸಾವಿರಾರು ವರ್ಷಗಳ ಭವಿಷ್ಯದ ಕ್ಯಾಲೆಂಡರ್ ರಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 am, Sat, 26 August 23