
ಬೆಂಗಳೂರು, ಮಾರ್ಚ್ 17: ಲೋಕಸಭೆ (Lok Sabha Elections) ಕುರುಕ್ಷೇತ್ರ ದಿನ ದಿನಕ್ಕೂ ರಂಗೇರುತ್ತಿದೆ. ಅಖಾಡದಲ್ಲಿ ನೀನಾ ನಾನಾ ಅಂತ ಸೆಣೆಸಾಡುವುದಕ್ಕೆ ರಾಜಕೀಯ ಹುರಿಯಾಳುಗಳು ಸನ್ನದ್ಧವಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗ ನಿನ್ನೆ ದಿನಾಂಕ ಘೋಷಣೆ ಮಾಡಿದೆ. ಚುನಾವಣಾ ತಯಾರಿ, ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿ ಮೂಲಕ ಇಂಚಿಂಚೂ ಮಾಹಿತಿ ನೀಡಿದ್ದಾರೆ. ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ರಾಜ್ಯದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಸದ್ಯ ಎಲ್ಲಾ ಪೊಲೀಸ್ ಠಾಣೆಗಳಿಗೂ ನಿವಾಸಿಗಳ ಬಳಿ ಇರುವ ಗನ್ ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ.
ಲೈಸೆನ್ಸ್ ಇರುವ ಗನ್ಗಳು, ಶಸ್ತ್ರಗಳನ್ನು ಹೊಂದಿರುವ ಎಲ್ಲಾ ನಾಗರಿಕರು ತಮ್ಮ ಶಸ್ತ್ರಗಳನ್ನ ಆಯಾ ಠಾಣೆಗಳಿಗೆ ಜಮಾ ಮಾಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಕರ್ನಾಟಕದ 28 ಕ್ಷೇತ್ರಗಳ ಅಂಕಿಸಂಖ್ಯೆ ಬಿಚ್ಚಿಟ್ಟ ರಾಜ್ಯ ಚುನಾವಣಾಧಿಕಾರಿ
ನಿನ್ನೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ಮಾಡಿ ಮಾತನಾಡಿದ್ದು, ನಮ್ಮ ರಾಜ್ಯದ ಸುತ್ತ ಆರು ರಾಜ್ಯಗಳ ಗಡಿ ಇದೆ. ಹಾಗಾಗಿ ಚೆಕ್ ಪೋಸ್ಟ್ಗಳನ್ನ ರಚಿಸಲಾಗಿದೆ. 29 ಜಿಲ್ಲೆಗಳ ಜೊತೆ ಬಾರ್ಡರ್ ಬರಲಿದೆ. ಎಲ್ಲಾ ಕಡೆ ಚೆಕ್ ಪಾಯಿಂಟ್ ಹಾಕಿದ್ದೇವೆ. ಕಳೆದ ಆರು ತಿಂಗಳಿಂದ ವಿಜಿಲೆನ್ಸ್ ಸ್ಟಾರ್ಟ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ, ಬೆಂಗಳೂರಿನಲ್ಲಿ ಅಲರ್ಟ್: ಮಾದರಿ ನೀತಿಸಂಹಿತೆ ಜಾರಿಗೆ ತುಷಾರ್ ಗಿರಿನಾಥ್ ಆದೇಶ
532 ಕೋಟಿ ರೂ. ಹಣವನ್ನ ಸೀಜ್ ಮಾಡಲಾಗಿದೆ. ಆಗಸ್ಟ್ನಿಂದ ಮಾರ್ಚ್ವರೆಗೆ ಸೀಜ್ ಮಾಡಲಾಗಿದೆ. 42 ಕೋಟಿ ರೂ. ಲಿಕ್ಕರ್, 26 ಕೋಟಿ ರೂ. ಮೌಲ್ಯದ ಡ್ರಗ್ಸ್, 71 ಕೋಟಿ ರೂ. ಮೌಲ್ಯದ ಗೋಲ್ಡ್ ಸೀಜ್ ಮಾಡಿದ್ದೇವೆ. ಇಲ್ಲಿಯವರೆಗೆ 531 ಕೋಟಿ ರೂ. ಸೀಜ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಕೆಲ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಮಾರ್ಚ್ 28ರಿಂದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಲಿದೆ. ನಾಮಿನೇಷನ್‌ಗೆ ಏಪ್ರಿಲ್ 4 ಕೊನೇ ದಿನವಾಗಿದ್ದು, ಏಪ್ರಿಲ್ 5ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8ರೊಳಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಕರ್ನಾಟಕದಲ್ಲಿ ಏಪ್ರಿಲ್ 26ಕ್ಕೆ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Sun, 17 March 24