ಬೆಂಗಳೂರು, ಏಪ್ರಿಲ್ 20: ಲೋಕಸಭೆ ಚುನಾವಣೆ (Lok Sabha Elections) ಕಣ ದಿನೇ ದಿನೆ ಕಾವೇರ್ತಿದೆ. ಎದುರಾಳಿಗಳ ಮಧ್ಯೆ ಮಾತಿನ ವಾಕ್ಸಮರವೇ ನಡೀತಿವೆ. ಇದರ ಮಧ್ಯೆ ಕೇಂದ್ರ ಸರ್ಕಾರದ 10 ವರ್ಷದ ಸಾಧನೆ ಬಗ್ಗೆ ಕಾಂಗ್ರೆಸ್ ದಿನ ಪತ್ರಿಕೆಗಳಲ್ಲಿ ಕೊಟ್ಟ ಚೊಂಬಿನ ಜಾಹೀರಾತು ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಕಾಂಗ್ರೆಸ್ ಜಾಹೀರಾತಿಗೆ ಬಿಜೆಪಿ ಕೂಡ ತಿರುಗೇಟು ನೀಡಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಫೋಟೋ ಹಂಚಿಕೊಂಡಿರುವ ಬಿಜೆಪಿ, ಒಂದು ಬದಿಯಲ್ಲಿ 2013ರಲ್ಲಿ ಚೊಂಬು ಹಿದಿದುಕೊಂಡು ಸಿದ್ದರಾಮಯ್ಯ ಬಯಲಿಗೆ ನಡೆದುಕೊಂಡು ಹೋಗುತ್ತಿದ್ದರೆ, ಮತ್ತೊಂದೆಡೆ 2023ರಲ್ಲಿ ಸ್ವಚ್ಛ್ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಶೌಚಾಲಯ ಬಳಕೆ ಮಾಡುತ್ತಿರುವುದಾಗಿ ಹಂಚಿಕೊಳ್ಳುವ ಮೂಲಕ ವ್ಯತ್ಯಾಸ ಇಷ್ಟೇ ಎಂದು ಟಾಂಗ್ ನೀಡಿದೆ.
ಶೌಚಾಲಯಗಳನ್ನು ಕಟ್ಟಿಸಿ ‘ ಕೈ ‘ ಯಲ್ಲಿದ್ದ ಚೊಂಬನ್ನು ಬಿಡುವಂತೆ ಮಾಡಿ ಸ್ವಚ್ಚ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದ್ದು ಮೋದಿ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಇದನ್ನೂ ಓದಿ: PM Modi in Bengaluru: ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದ ಕಾಂಗ್ರೆಸ್; ಬೆಂಗಳೂರಿನಲ್ಲಿ ಮೋದಿ ವ್ಯಂಗ್ಯ
ಪ್ರಧಾನಿ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಸಿಕ್ಕಿದ್ದು ಬರೀ ಚೊಂಬು. ಎಲ್ಲರ ಖಾತೆಗೆ 15 ಲಕ್ಷ ರೂ. ಹಣ ಹಾಕುವ ಚೊಂಬು. ರೈತರ ಆದಾಯ ಡಬಲ್ ಮಾಡುವ ಚೊಂಬು. ತೆರಿಗೆ ಹಂಚಿಕೆಯಲ್ಲಿ ಚೊಂಬು, ಬರ/ನೆರೆ ಪರಿಹಾರದಲ್ಲೂ ಚೊಂಬು, 27 ಜನ ಬಿಜೆಪಿ, ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು ಅನ್ನೋ ಮೂಲಕ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಜಾಹೀರಾತು ಅಸ್ತ್ರ ಪ್ರಯೋಗಿಸಿತ್ತು.
ವ್ಯತ್ಯಾಸ ಇಷ್ಟೇ!
The Difference Is Very Clear!#ModiKiGuarantee pic.twitter.com/TOv3Kjk9Ji
— BJP Karnataka (@BJP4Karnataka) April 20, 2024
ಇನ್ನು ಕಾಂಗ್ರೆಸ್‌ನ ಚೊಂಬು ವಿಚಾರವಾಗಿ ಟ್ವೀಟ್ನಲ್ಲೇ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕಾಂಗ್ರೆಸ್ಸಿಗರೇ, ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ‘ತುಂಬಿದ ಕೊಡ’ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು. ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು ಅಂತಾ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ನಮ್ಮ ಮಕ್ಕಳ ಮೇಲೆ ಹಲ್ಲೆ, ಮಾರುಕಟ್ಟೆಗಳಲ್ಲಿ ಬಾಂಬ್ ಸ್ಫೋಟ: ಕಾಂಗ್ರೆಸ್ ವಿರುದ್ಧ ಬೆಂಗಳೂರಿನಲ್ಲಿ ಮೋದಿ ವಾಗ್ದಾಳಿ
ಕಾಂಗ್ರೆಸ್‌ನ ಚೊಂಬಾಸ್ತ್ರಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಹೀಗಾಗಿ ಚೊಂಬು ಹಿಡಿದು ಭಿಕ್ಷೆ ಬೇಡ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಕಾರ್ಯಕರ್ತರಿಗೆ ಕುಮಾರಸ್ವಾಮಿ ಚೊಂಬು ಕೊಟ್ಟಿದ್ದಾರೆ ಅಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:48 pm, Sat, 20 April 24