ಎಕ್ಸಿಟ್ ಪೋಲ್​ಗಿಂತ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ: ಪ್ರಲ್ಹಾದ್​ ಜೋಶಿ

ಲೋಕಸಭಾ ಚುನಾವಣೆಯ ಮತದಾನೋತ್ತರ ಎಕ್ಸಿಟ್ ಪೋಲ್ ಸಮೀಕ್ಷೆಗಳ ಬಗ್ಗೆ ಬೆಳಗಾವಿಯಲ್ಲಿ ಕೇಂದ್ರ ಸಚಿವ, ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್​ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಎಕ್ಸಿಟ್ ಪೋಲ್ ಸರಾಸರಿ ತೆಗೆದ್ರೂ 350-370 ಸ್ಥಾನ ಬರಲಿದೆ. ಎಕ್ಸಿಟ್ ಪೋಲ್​ಗಿಂತ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ. ಆ ಮೂಲಕ ದೇಶದಲ್ಲಿ ಬಿಜೆಪಿ ಪ್ರಚಂಡ ವಿಜಯ ಸಾಧಿಸಲಿದೆ ಎಂದಿದ್ದಾರೆ.

ಎಕ್ಸಿಟ್ ಪೋಲ್​ಗಿಂತ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ: ಪ್ರಲ್ಹಾದ್​ ಜೋಶಿ
ಎಕ್ಸಿಟ್ ಪೋಲ್​ಗಿಂತ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ: ಪ್ರಲ್ಹಾದ್​ ಜೋಶಿ
Updated By: ಗಂಗಾಧರ​ ಬ. ಸಾಬೋಜಿ

Updated on: Jun 01, 2024 | 10:43 PM

ಬೆಳಗಾವಿ, ಜೂನ್​ 01: ಎಕ್ಸಿಟ್ ಪೋಲ್​ಗಿಂತ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ. ದೇಶದಲ್ಲಿ ಬಿಜೆಪಿ ಪ್ರಚಂಡ ವಿಜಯ ಸಾಧಿಸಲಿದೆ ಎಂದು ಕೇಂದ್ರ ಸಚಿವ, ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್​ ಜೋಶಿ (Pralhad Joshi) ಹೇಳಿದ್ದಾರೆ. ಲೋಕಸಭಾ ಚುನಾವಣೆ (Lok Sabha Elections) ಸಮೀಕ್ಷೆಯಲ್ಲಿ ಬಿಜೆಪಿ ಬಹುಮತ ವಿಚಾರವಾಗಿ ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಸರಾಸರಿ ತೆಗೆದ್ರೂ 350-370 ಸ್ಥಾನ ಬರಲಿದೆ. ಅಭಿವೃದ್ಧಿ ಹೊಂದಿದ ಭಾರತ ಮಾಡಲು ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಪಕ್ಷದಿಂದ ಕುಟುಂಬಸ್ಥರಿಗೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸಾಮಾನ್ಯವಾಗಿ ಫ್ಯಾಮಿಲಿ ರನ್ ಪಾರ್ಟಿ. ತಂದೆಯ ಕಾರಣಕ್ಕೆ ಬಿಜೆಪಿಯಲ್ಲಿ ಯಾರಿಗೂ ಹುದ್ದೆ ಸಿಗಲಿಲ್ಲ. ಬಿಜೆಪಿಯಲ್ಲಿ ಕೆಲಸ ಮಾಡಿದರೆ ಸ್ವತಃ ಬಲದ ಮೇಲೆ ಬರಬಹುದು. ಆದರೆ ಕಾಂಗ್ರೆಸ್, ಸಮಾಜವಾದಿ, ಆರ್​ಜೆಡಿಯಲ್ಲಿ ಹಾಗೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಎಕ್ಸಿಟ್ ಪೋಲ್ ಮೇಲೆ ನಂಬಿಕೆಯಿಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ 2 ಅಂಕಿ ದಾಟುತ್ತೆ: ಡಿಕೆ ಶಿವಕುಮಾರ್​

ಪರಿವಾರವಾದ ಪಾರ್ಟಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ಬಿಜೆಪಿ ಕೊಡುಗೆ ಬಗ್ಗೆ ದೇಶದ ಜನ ನೋಡಿದ್ದಾರೆ‌. 60 ವರ್ಷದ ಕಾಂಗ್ರೆಸ್ ಸಾಧನೆಯನ್ನು ಸಹ ಜನರು ನೋಡಿದ್ದಾರೆ. ಆಶ್ವಾಸನೆ ಕೊಟ್ಟು ಬಂದ ಸರ್ಕಾರ 187 ಕೋಟಿ ರೂ. ಭ್ರಷ್ಟಾಚಾರ ಮಾಡಿದೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ: ಜೂ.7ರಂದು ಕೋರ್ಟ್‌ಗೆ ಹಾಜರಾಗಲು ರಾಹುಲ್​ ಗಾಂಧಿಗೆ ಸೂಚನೆ

ಚೆಕ್​ನಲ್ಲಿ ಹಣ ತೆಗೆದುಕೊಂಡ್ರು ಇನ್ನೂ ಸಚಿವರ ವಿರುದ್ಧ ಕ್ರಮ ಆಗಿಲ್ಲ. ಇಡೀ ಸರ್ಕಾರವೇ ಹಗರಣದಲ್ಲಿ ಭಾಗಿ ಆಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಕೇಸ್​ ತನಿಖೆಗೆ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಮತದಾನೋತ್ತರ ಸಮೀಕ್ಷೆಯನ್ನು ಸಂತಸದಿಂದ ಸ್ವೀಕರಿಸುತ್ತೇನೆ: ಆರ್.ಅಶೋಕ್

ಎಕ್ಸಿಟ್ ಪೋಲ್​ ಸಮೀಕ್ಷೆಗಳ ಬಗ್ಗೆ ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದು, ಮತದಾನೋತ್ತರ ಸಮೀಕ್ಷೆಯನ್ನು ಸಂತಸದಿಂದ ಸ್ವೀಕರಿಸುತ್ತೇನೆ. ಎನ್​ಡಿಎ ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಕಳೆದ 20 ವರ್ಷದಿಂದ ಬಿಜೆಪಿಗೆ ಡಬಲ್ ಡಿಜಿಟ್ ಇದೆ. ದೇಶದ ವಿಚಾರ ಬಂದಾಗ ರಾಜ್ಯದ ಜನರು ಬಿಜೆಪಿ ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.