ಎಕ್ಸಿಟ್ ಪೋಲ್ ಮೇಲೆ ನಂಬಿಕೆಯಿಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ 2 ಅಂಕಿ ದಾಟುತ್ತೆ: ಡಿಕೆ ಶಿವಕುಮಾರ್
ಲೋಕಸಭೆಗೆ ನಡೆದ ಚುನಾವಣೆಯ ಏಳು ಹಂತಗಳ ಮತದಾನ ಕೊನೆಗೊಂಡಿದ್ದು, ಸದ್ಯ ವಿವಿಧ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಈ ಕುರಿತಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾವುದೇ ಎಕ್ಸಿಟ್ ಪೋಲ್ ಮೇಲೆ ನಂಬಿಕೆಯಿಲ್ಲ. ಈ ಚುನಾವಣಾ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಸವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 2 ಅಂಕಿ ದಾಟುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜೂನ್ 01: ಲೋಕಸಭೆಗೆ ನಡೆದ ಚುನಾವಣೆಯ ಏಳು ಹಂತಗಳ ಮತದಾನ ಇಂದು ಕೊನೆಗೊಂಡಿದೆ. 8 ರಾಜ್ಯ, ಕೇಂದ್ರಾಡಳಿತ ಪ್ರದೇಶ ಸೇರಿ 57 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಇದೇ ತಿಂಗಳ ನಾಲ್ಕನೇ ತಾರೀಖು ಲೋಕಸಭಾ ಚುನಾವಣಾ (Lok Sabha Elections) ಫಲಿತಾಂಶ ಪ್ರಕಟವಾಗಲಿದೆ. ಆದರೆ, ಅದಕ್ಕೂ ಮೊದಲೇ ಸದ್ಯ ವಿವಿಧ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar), ಯಾವುದೇ ಎಕ್ಸಿಟ್ ಪೋಲ್ ಮೇಲೆ ನಂಬಿಕೆಯಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹೇಳಿದಂತೆ ಇವತ್ತು ಹೇಳುತ್ತೇನೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 2 ಅಂಕಿ ದಾಟುತ್ತದೆ. ಈ ಚುನಾವಣಾ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಸವಿಲ್ಲ. ಕೆಲವರ ಅಭಿಪ್ರಾಯ ಮಾತ್ರ ಸಂಗ್ರಹಿಸಿರುತ್ತಾರೆ ಅಷ್ಟೇ. ಬಹಳ ಆಳಕ್ಕೆ ಹೋಗಲ್ಲ ಅವರು. ಪಾರ್ಲಿಮೆಂಟ್ನಲ್ಲೂ ಅಷ್ಟೇ ಸುಮ್ಮನೆ ಏನೋ ಸ್ಯಾಂಪಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.