ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 4ಕಿಮೀ ಉದ್ದದ ಬೃಹತ್ ಟ್ರಾಫಿಕ್ ಜಾಮ್!
ನಗರದ ಇನ್ಫ್ರಾಸ್ಟ್ರಕ್ಚರ್ ನ ಕುಖ್ಯಾತಿ ಅಂಥದ್ದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ನಂತರ ಅಧಿಕಾರದಿಂದ ಕೆಳಗಿಳಿಯುತ್ತದೆ. ಅಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ನಂತರ ಕೆಳಗಿಳಿಯುತ್ತದೆ. ಆದರೆ ನಗರದ ಇನ್ಫ್ರಾಸ್ಟ್ರಕ್ಚರ್ ಮಾತ್ರ ಹಾಗೆಯೇ ಉಳಿದುಬಿಡುತ್ತದೆ. ಇನ್ಫ್ರಾಸ್ಟ್ರಕ್ಚರ್ ಅನ್ನೋದು ನಮ್ಮ ನಾಯಕರಿಗೆ ಅಸ್ಪೃಶ್ಯರ ಹಾಗೆ, ಯಾರೂ ಅದನ್ನು ಮುಟ್ಟಲಾರರು, ಮುಟ್ಟಿದರೆ ಮೈಲಿಗೆಯ ಕಳಂಕ!
ಬೆಂಗಳೂರು: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಟ್ರಾಫಿಕ್ ಜಾಮ್ ಅಗೋದು ಇಲ್ಲವೇ ವಾಹನಗಳು ಅಮೆವೇಗದಲ್ಲಿ ಚಲಿಸುವುದು ಹೊಸದೇನಲ್ಲ. ಅದರೆ ಇವತ್ತು ಸಾಯಂಕಾಲ ಕಂಡುಬಂದಿದ್ದು ಸುಮಾರು 4 ಕಿಮೀಗಳಷ್ಟು ಉದ್ದ ವಾಹನ ಸಂಚಾರ ಸ್ಥಗಿತಗೊಂಡ (traffic jam) ದೃಶ್ಯ. ಹೆದ್ದಾರಿಯ ಸಿಪ್ ಕಾಟ್ ಬಳಿ ಫ್ಲೈಓವರ್ ಕಾಮಗಾರಿ (flyover works) ಜಾರಿಯಲ್ಲಿದೆ. ಇವತ್ತು ನಗರದ ಹಲವಾರು ಭಾಗಗಳಲ್ಲಿ ಮಳೆ ಸುರಿದಿದೆ. ಬೆಂಗಳೂರಿನ ಯಾವುದೇ ಭಾಗದಲ್ಲಿ ಮಳೆ ಸುರಿಯಲಿ, ಟ್ರಾಫಿಕ್ ಜಾಮ್ ಸಂಭವಿಸಲೇಬೇಕು. ನಗರದ ಇನ್ಫ್ರಾಸ್ಟ್ರಕ್ಚರ್ ನ ಕುಖ್ಯಾತಿ ಅಂಥದ್ದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ನಂತರ ಅಧಿಕಾರದಿಂದ ಕೆಳಗಿಳಿಯುತ್ತದೆ. ಅಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ನಂತರ ಕೆಳಗಿಳಿಯುತ್ತದೆ. ಆದರೆ ನಗರದ ಇನ್ಫ್ರಾಸ್ಟ್ರಕ್ಚರ್ ಮಾತ್ರ ಹಾಗೆಯೇ ಉಳಿದುಬಿಡುತ್ತದೆ. ಇನ್ಫ್ರಾಸ್ಟ್ರಕ್ಚರ್ ಅನ್ನೋದು ನಮ್ಮ ನಾಯಕರಿಗೆ ಅಸ್ಪೃಶ್ಯರ ಹಾಗೆ, ಯಾರೂ ಅದನ್ನು ಮುಟ್ಟಲಾರರು, ಮುಟ್ಟಿದರೆ ಮೈಲಿಗೆಯ ಕಳಂಕ! 4 ಕಿಮೀಗಳಷ್ಟು ದೂರದ ಟ್ರಾಫಿಕ್ ಜಾಮ್ ಅಂದರೆ, ಅಲ್ಲಿನ ವಾಹನ ಸವಾರರ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಕೆಲವರಿಗೆ ಬೇಗ ಮನೆ ತಲುಪಬೇಕಿರುತ್ತದೆ, ಉಳಿದವರಿಗೆ ಮತ್ಯಾವುದೋ ತುರ್ತು ಕೆಲಸ. ಆದರೆ ಸ್ಥಿತಿ ಹೀಗೆ….
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೂರು ದಿನಗಳ ರಜೆ, ತಮ್ಮೂರುಗಳಿಗೆ ಹೊರಟ ಜನರು; ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಫುಲ್ ಟ್ರಾಫಿಕ್ ಜಾಮ್