ಹೆಚ್ ಡಿ ರೇವಣ್ಣ ಮನೆಗೆ ಬಂದಿದ್ದ ಭವಾನಿ ವಕೀಲೆಯರು ಮಾಧ್ಯಮದವರು ಕೇಳಿದಕ್ಕೆಲ್ಲ ಗೊತ್ತಿಲ್ಲವೆಂದರು!

ಹೆಚ್ ಡಿ ರೇವಣ್ಣ ಮನೆಗೆ ಬಂದಿದ್ದ ಭವಾನಿ ವಕೀಲೆಯರು ಮಾಧ್ಯಮದವರು ಕೇಳಿದಕ್ಕೆಲ್ಲ ಗೊತ್ತಿಲ್ಲವೆಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 01, 2024 | 5:51 PM

ರೇವಣ್ಣರ ಮನೆಯಿಂದ ಹೊರಬಂದ ವಕೀಲೆಯರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಗೊತ್ತಿಲ್ಲ, ಮಾಹಿತಿ ಇಲ್ಲ ಉತ್ತರಗಳನ್ನು ಮಾತ್ರ ನೀಡಿದರು. ಇನ್ ಫ್ಯಾಕ್ಟ್, ಅವರು ಮಾಧ್ಯಮದವರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಭವಾನಿ ರೇವಣ್ಣ ಎಲ್ಲಿದ್ದಾರೆ, ಯಾವಾಗ ಬರುತ್ತಾರೆ ಅಂತ ಕೇಳಿದಾಗ ವಕೀಲೆಯರಿಬ್ಬರು ಮುಗುಳ್ನಗುತ್ತಾ ನಮಗೆ ಮಾಹಿತಿ ಇಲ್ಲ ಅಂತ ಹೇಳಿದರು.

ಹಾಸನ: ಶಾಸಕ ಹೆಚ್ ಡಿ ರೇವಣ್ಣರ (HD Revanna) ಮನೆಗೆ ಇವತ್ತು ಮಧ್ಯಾಹ್ನ ಇಬ್ಬರು ಮಹಿಳಾ ಲಾಯರ್ ಗಳು (women lawyers) ಬಂದಿದ್ದರು. ಯಾಕೆ ಬಂದಿದ್ದರು, ಎಎಸ್ಐಟಿ ಅಧಿಕಾರಿಗಳಿಗೆ (SIT sleuths) ಕೊಟ್ಟ ಉತ್ತರವೇನು, ಭವಾನಿ ರೇವಣ್ಣ (Bhavani Revanna) ಎಲ್ಲಿದ್ದಾರೆ ಮೊದಲಾದ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತು ಎಂದು ಮನೆಯ ಹೊರಗಡೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಸಿಕ್ಕಿದ್ದು ನಿರಾಸೆ. ರೇವಣ್ಣರ ಮನೆಯಿಂದ ಹೊರಬಂದ ವಕೀಲೆಯರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಗೊತ್ತಿಲ್ಲ, ಮಾಹಿತಿ ಇಲ್ಲ ಉತ್ತರಗಳನ್ನು ಮಾತ್ರ ನೀಡಿದರು. ಇನ್ ಫ್ಯಾಕ್ಟ್, ಅವರು ಮಾಧ್ಯಮದವರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಭವಾನಿ ರೇವಣ್ಣ ಎಲ್ಲಿದ್ದಾರೆ, ಯಾವಾಗ ಬರುತ್ತಾರೆ ಅಂತ ಕೇಳಿದಾಗ ವಕೀಲೆಯರಿಬ್ಬರು ಮುಗುಳ್ನಗುತ್ತಾ ನಮಗೆ ಮಾಹಿತಿ ಇಲ್ಲ ಅಂತ ಹೇಳಿದರು. ಹೋಗ್ಲಿ, ಎಸ್ಐಟಿ ಅಧಿಕಾರಿಗಳಿಗೆ ಏನು ಹೇಳಿದ್ರಿ ಅದನ್ನಾದ್ರೂ ಹೇಳಿ ಅಂದಾಗ ನಿಮಗೆ ಹೇಳುತ್ತಿರುವುದನ್ನೇ ಅವರಿಗೂ ಹೇಳಿದ್ದೇವೆ ಅನ್ನುತ್ತಾರೆ. ಹಾಗಾದರೆ ಇಲ್ಲಿಗೆ ಬಂದಿದ್ಯಾಕೆ ಅಂತ ಕೇಳಿದರೆ, ಖಾಸಗಿ ಕೆಲಸದ ನಿಮಿತ್ತ ಬಂದಿದ್ದು, ಮನೆಯಲ್ಲಿ ಯಾರೂ ಇಲ್ಲ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್ ಡಿ ರೇವಣ್ಣ ಹೊಳೆನರಸೀಪುರ ಮನೆ ಬಾಗಿಲಿಗೆ ಪೊಲೀಸರು, ಹೆಚ್ಚಿದ ಭವಾನಿ ರೇವಣ್ಣ ಆತಂಕ