AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ಐಟಿ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಭವಾನಿ ರೇವಣ್ಣ ತಮ್ಮ ತೊಂದರೆ ಹೆಚ್ಚಿಸಿಕೊಳ್ಳುತ್ತಿದ್ದಾರೆ!

ಎಸ್ಐಟಿ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಭವಾನಿ ರೇವಣ್ಣ ತಮ್ಮ ತೊಂದರೆ ಹೆಚ್ಚಿಸಿಕೊಳ್ಳುತ್ತಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 01, 2024 | 4:14 PM

Share

ಎಸ್ಐಟಿ ತಮ್ಮನ್ನು ಬಂಧಿಸಲಿದೆ ಎಂಬ ಭೀತಿ ಭವಾನಿಯವರನ್ನು ಕಾಡುತ್ತಿದ್ದು ಅದೇ ಕಾರಣಕ್ಕೆ ಅವರ ಮುಂದೆ ಪ್ರತ್ಯಕ್ಷರಾಗಲೊಲ್ಲರು ಎನ್ನಲಾಗುತ್ತಿದೆ. ಅದರೆ ಈ ಕಣ್ಣಾಮುಚ್ಚಾಲೆ ಆಟದಿಂದ ಪ್ರಯೋಜನವೇನೂ ಇಲ್ಲ, ಯಾಕೆಂದರೆ ಅಧಿಕಾರಿಗಳಂತೂ ವಿಚಾರಣೆ ನಡೆಸದೆ ಬಿಡಲಾರರು, ಅವರ ತಾಳ್ಮೆಯ ಪರೀಕ್ಷೇ ತೆಗೆದುಕೊಳ್ಳುತ್ತಿರುವ ಭವಾನಿ ತಮ್ಮ ಕಷ್ಟಗಳನ್ನು ಇಮ್ಮಡಿಸಿಕೊಳ್ಳುತ್ತಿದ್ದಾರೆ.

ಹಾಸನ: ಪೊಲೀಸರು ಮತ್ತು ಕಾನೂನು ಜೊತೆ ಕಣ್ಣಾಮುಚ್ಚಾಲೆ ಅಡೋದು ಹೆಚ್ ಡಿ ರೇವಣ್ಣ (HD Revanna) ಕುಟುಂಬ ಹವ್ಯಾಸವಿರಬಹುದು. ಅಗಾಧ ಲೈಂಗಿಕ ಅಪರಾಧಗಳನ್ನೆಸಗಿದ (sexual offences) ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ರಾತ್ರೋರಾತ್ರಿ ಜರ್ಮನಿಗೆ ಪಲಾಯನಗೈಯುತ್ತಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಎಸ್ಐಟಿ ಅಧಿಕಾರಿಗಳು ಹೊಳೆನರಸಿಪುರದಲ್ಲಿರುವ ರೇವಣ್ಣರ ಚೆನ್ನಾಂಬಿಕಾ ನಿವಾಸಕ್ಕೆ ಅಗಮಿಸಿದಾಗ ಭವಾನಿ ರೇವಣ್ಣ ಮೇಡಂ (Bhavani Revanna) ನಾಪತ್ತೆ! ಅವರು ನಿಯಮಿತವಾಗಿ ಬಳಸುವ ಕಾರು ಮನೆಯ ಪಾರ್ಕಿಂಗ್ ಲಾಟ್ ನಲ್ಲಿದೆ. ಅವರ ಕಾರಿನೊಂದಿಗೆ ಪ್ರಜ್ವಲ್ ರೇವಣ್ಣ ಬಳಸುವ ಕಾರು ಸಹ ಇದೆ. ಬೆಳಗ್ಗೆ ಸುಮಾರು 11 ಗಂಟೆಗೆ ಮನೆ ಅವರಣ ಪ್ರವೇಶಿಸಿದ ಎಸ್ಐಟಿ ಅಧಿಕಾರಿಗಳು ಕಾದು ಕಾದು ಊಟಕ್ಕೂ ಹೋಗಿಬಂದರು, ಅದರೆ ಭವಾನಿಯವರು ವಾಪಸ್ಸಾಗಲಿಲ್ಲ. ಎಸ್ಐಟಿ ತಮ್ಮನ್ನು ಬಂಧಿಸಲಿದೆ ಎಂಬ ಭೀತಿ ಭವಾನಿಯವರನ್ನು ಕಾಡುತ್ತಿದ್ದು ಅದೇ ಕಾರಣಕ್ಕೆ ಅವರ ಮುಂದೆ ಪ್ರತ್ಯಕ್ಷರಾಗಲೊಲ್ಲರು ಎನ್ನಲಾಗುತ್ತಿದೆ. ಅದರೆ ಈ ಕಣ್ಣಾಮುಚ್ಚಾಲೆ ಆಟದಿಂದ ಪ್ರಯೋಜನವೇನೂ ಇಲ್ಲ, ಯಾಕೆಂದರೆ ಅಧಿಕಾರಿಗಳಂತೂ ವಿಚಾರಣೆ ನಡೆಸದೆ ಬಿಡಲಾರರು, ಅವರ ತಾಳ್ಮೆಯ ಪರೀಕ್ಷೇ ತೆಗೆದುಕೊಳ್ಳುತ್ತಿರುವ ಭವಾನಿ ತಮ್ಮ ಕಷ್ಟಗಳನ್ನು ಇಮ್ಮಡಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ, ಭವಾನಿ ರೇವಣ್ಣ ಸಂಬಂಧಿ ಜೈಲು ಪಾಲು