ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ, ಭವಾನಿ ರೇವಣ್ಣ ಸಂಬಂಧಿ ಜೈಲು ಪಾಲು

ಒಂದು ಕಡೆ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದರೆ, ಇನ್ನೊಂದೆಡೆ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ಈಗಾಗಲೇ ಸಂಚಲನ ಮೂಡಿಸಿದೆ. ಇದೀಗ ಈ ಪ್ರಕರಣದಲ್ಲಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಸಂಬಂಧಿಯಾದ ಸತೀಶ್ ಬಾಬು ಎಂಬುವವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ, ಭವಾನಿ ರೇವಣ್ಣ ಸಂಬಂಧಿ ಜೈಲು ಪಾಲು
ಭವಾನಿ ರೇವಣ್ಣ ಸಂಬಂಧಿ ಸತೀಶ್​ ಬಾಬು ಜೈಲು ಪಾಲು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:May 03, 2024 | 3:51 PM

ಮೈಸೂರು, ಮೇ.03: ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ಈಗಾಗಲೇ ದೊಡ್ಡಮಟ್ಟದಲ್ಲಿ ಸಂಚಲನ ಮೂಡಿಸಿದೆ. ಅದರಂತೆ ಇದೀಗ ರೇವಣ್ಣ ಪತ್ನಿ ಭವಾನಿ ರೇವಣ್ಣ ಸಂಬಂಧಿಯಾದ ಸತೀಶ್ ಬಾಬುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೌದು, ಈ ಘಟನೆಗೆ ಸಂಬಂಧಪಟ್ಟಂತೆ ವಿಡಿಯೋದಲ್ಲಿನ ಸಂತ್ರಸ್ತ ಮಹಿಳೆಯಾದ ನನ್ನ ತಾಯಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ರೇವಣ್ಣ, ಸತೀಶ್​ ಬಾಬು ವಿರುದ್ದ ಸಂತ್ರಸ್ತೆ ಮಗ ದೂರು ನೀಡಿದ್ದರು. ಈ ಕುರಿತು ಮೈಸೂರು ಜಿಲ್ಲೆ K.R.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಬಂಧಿಸಲಾಗಿದೆ.

ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್

ಪ್ರಜ್ವಲ್ ರೇವಣ್ಣ ವಿರುದ್ದ ದೌರ್ಜನ್ಯವಾಗಿದೆ ಎಂದು ಆರೋಪಿಸಿದ್ದ ಸಂತ್ರಸ್ತೆ, ಅಪರಾಧ ತನಿಖಾ ಇಲಾಖೆಗೆ (CID) ದೂರು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲಾಗಿದೆ.ಇನ್ನು ಘಟನೆ ಕುರಿತು ಸಂತ್ರಸ್ತೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ ಜನಪ್ರತಿನಿಧಿಯಾಗಿರುವ ಮಹಿಳೆ, ಶಾಸಕರು ಹಾಗೂ ಸಂಸದರ ಬಳಿ ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚಿಸಲು ಹೋಗಿದ್ದಾಗ ಆರೋಪಿ ಪ್ರಜ್ವಲ್ ರೇವಣ್ಣ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದರೂ ಅರೆಸ್ಟ್ ಮಾಡಿಕೊಂಡು ಬರುತ್ತೇವೆ: ಸಿದ್ದರಾಮಯ್ಯ, ಸಿಎಂ

ಹಾಸನ ಮೂಲದ ಮಹಿಳೆ ಪ್ರಜ್ವಲ್​ ರೇವಣ್ಣ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಎಸ್​ಐಟಿಗೆ ಹೇಳಿಕೆ ನೀಡಿದ್ದರು. ಎಸ್​ಐಟಿ ಹೇಳಿಕೆ ಆಧರಿಸಿ ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್​​ ದಾಖಲಿಸಿಕೊಂಡಿದ್ದು,ಇದರ ಬೆನ್ನಲೇ ಇದೀಗ ಸಂತ್ರಸ್ತೆ ಪತಿ ಸಿಐಡಿಗೆ ದೂರು ನೀಡಿರುವುದು ಪ್ರಜ್ವಲ್​ ರೇವಣ್ಣಗೆ ಸಂಕಷ್ಟ ಜಾಸ್ತಿಯಾಗಿದೆ. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಂದೆ-ಮಗನಿಗೆ ಎಸ್​ಐಟಿ ನೋಟಿಸ್​ ನೀಡಿದೆ. ಆದರೆ ಎಸ್​ಐಟಿ ವಿಚಾರಣೆಗೆ ಹಾಜರಾಗದೆ ಕಾಲಾವಕಾಶ ಕೋರಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎರಡನೇ ದೂರು ದಾಖಲಾಗಿರುವುದು ಪ್ರಜ್ವಲ್​ ರೇವಣ್ಣಗೆ ಮತ್ತಷ್ಟು ತೆಲೆನೋವಾಗಿದೆ. ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಗುರುವಾರವೇ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Fri, 3 May 24

ತಾಜಾ ಸುದ್ದಿ