AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಲ್ಲಿ ಧ್ಯಾನ ಅಂತ್ಯಗೊಳಿಸಿದ ಪ್ರಧಾನಿ ಮೋದಿ

ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಲ್ಲಿ ಧ್ಯಾನ ಅಂತ್ಯಗೊಳಿಸಿದ ಪ್ರಧಾನಿ ಮೋದಿ

ಸುಷ್ಮಾ ಚಕ್ರೆ
|

Updated on: Jun 01, 2024 | 4:51 PM

Share

PM Modi Meditation: ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಸಂಜೆಯಿಂದ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನ ನಿರತರಾಗಿದ್ದರು. 45 ಗಂಟೆಗಳ ಅವರ ಧ್ಯಾನ ಇಂದು ಸಂಜೆ ಮುಗಿದಿದ್ದು, ಈ 2 ದಿನಗಳ ಕಾಲ ಅವರು ಕೇವಲ ದ್ರವ ಪದಾರ್ಥವನ್ನು ಸೇವಿಸುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಜೂನ್ 1) ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ (Vivekananda Rock Memorial) ತಮ್ಮ 45 ಗಂಟೆಗಳ ಧ್ಯಾನವನ್ನು ಕೊನೆಗೊಳಿಸಿದ್ದಾರೆ. ಮೇ 30ರ ಸಂಜೆಯಿಂದ ಜೂನ್ 1ರ ಸಂಜೆಯವರೆಗೆ ಸುಮಾರು 45 ಗಂಟೆಗಳ ಕಾಲ ಆಧ್ಯಾತ್ಮಿಕ ಪ್ರವಾಸದಲ್ಲಿದ್ದ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿ (Kanyakumari) ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಅದೇ ಸ್ಥಳದಲ್ಲಿ ಹಗಲು-ರಾತ್ರಿ ಧ್ಯಾನ ಮಾಡಿದ್ದರು.

ಮೇ 30ರಂದು ಕನ್ಯಾಕುಮಾರಿ ಸಮೀಪದ ತಿರುವನಂತಪುರದಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಪ್ರಧಾನಿ ಮೋದಿ ನಂತರ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ದೋಣಿಯ ಮೂಲಕ ರಾಕ್ ಸ್ಮಾರಕವನ್ನು ತಲುಪಿ ಧ್ಯಾನವನ್ನು ಪ್ರಾರಂಭಿಸಿದರು. 1892ರ ಅಂತ್ಯದ ವೇಳೆಗೆ ಸಮುದ್ರದ ನಡುವಿನ ಬಂಡೆಗಳ ಮೇಲೆ ಧ್ಯಾನ ಮಾಡಿದ ಸ್ವಾಮಿ ವಿವೇಕಾನಂದರಿಗೆ ಗೌರವಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ಸ್ಮಾರಕದಲ್ಲಿ ಪ್ರಧಾನಿಯವರು ಇದೇ ಮೊದಲ ಬಾರಿಗೆ ತಂಗಿದ್ದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ