ಬೆಂಗಳೂರಲ್ಲಿ ವಾರದ ನಂತರ ಪ್ರತ್ಯಕ್ಷನಾದ ಮಳೆರಾಯ, ನಗರದಲ್ಲೆಡೆ ಆಹ್ಲಾದಕರ ವಾತಾವರಣ
ಸಾಮಾನ್ಯವಾಗಿ ಜೂನ್ 7 ರ ನಂತರ ಮುಂಗಾರು ಕರ್ನಾಟಕವನ್ನು ಪ್ರವೇಶಿಸುತ್ತದೆ ಅದರೆ ಈ ಬಾರಿ ಒಂದು ವಾರದಷ್ಟು ಮೊದಲೇ ಅದರ ಪ್ರವೇಶವಾಗಲಿದೆ. ಬೆಂಗಳೂರಲ್ಲಿ ಇಂದು ಬೆಳಗ್ಗೆಯಿಂದ ತಾಪಮಾನ ಜಾಸ್ತಿಯಿರದಿದ್ದರೂ ಅಸಹನೀಯ ಧಗೆ ಇತ್ತು. ಮಧ್ಯಾಹ್ನದ ನಂತರ ಎಲ್ಲಡೆ ತಂಪು ಆವರಿಸಿದೆ.
ಬೆಂಗಳೂರು: ನಗರದಲ್ಲಿ ಒಂದು ವಾರದ ಹಿಂದೆ ಸುರಿದು ನಾಪತ್ತೆಯಾಗಿದ್ದ ಮಳೆರಾಯ ಇವತ್ತು ಕೃಪೆತೋರಿದ್ದಾನೆ. ಬೆಂಗಳೂರಿನ (Bengaluru) ನಾನಾ ಭಾಗಗಳಲ್ಲಿ ಇಂದು ಮಧ್ಯಾಹ್ನದಿಂದ ಮಳೆಯಾಗುತ್ತಿದೆ. ಮಲ್ಲೇಶ್ವರಂ, ಅರ್ ಟಿ ನಗರ, ಯಶವಂತಪುರ, ನಾಗವಾರ, ಹೆಬ್ಬಾಳ, ಹೆಣ್ಣೂರು ಮತ್ತು ಇನ್ನು ಬೇರೆ ಬೇರೆ ಏರಿಯಾಗಳಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ (IMD) ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆಯಾಗಲಿದೆ. ಮುಂಗಾರು ಈಗಾಗಲೇ ಕೇರಳವನ್ನು ಪ್ರವೇಶಿಸಿದ್ದು ಅರಬ್ಬೀ ಸಮುದ್ರದ (Arabian Sea) ಅಗ್ನೇಯ ಭಾಗದಲ್ಲಿ ಸುಳಿಗಾಳಿ ಎದ್ದಿರುವ ಕಾರಣ ಕರ್ನಾಟಕದಲ್ಲಿ ಮಳೆಯಾಗಲಿದೆ. ಕೇರಳ ಪ್ರವೇಶಿಸಿರುವ ಮಾನ್ಸೂನ್ ಒಂದೆರಡು ದಿನಗಳಲ್ಲಿ ಕರ್ನಾಟಕಕ್ಕೂ ಲಗ್ಗೆಯಿಡಲಿದೆ ಎಂದು ಇಲಾಖೆಯ ಅಧಿಕಾರಿ ಸಿಎಸ್ ಪಾಟೀಲ್ ಹೇಳಿದ್ದಾರೆ. ಸಾಮಾನ್ಯವಾಗಿ ಜೂನ್ 7 ರ ನಂತರ ಮುಂಗಾರು ಕರ್ನಾಟಕವನ್ನು ಪ್ರವೇಶಿಸುತ್ತದೆ ಅದರೆ ಈ ಬಾರಿ ಒಂದು ವಾರದಷ್ಟು ಮೊದಲೇ ಅದರ ಪ್ರವೇಶವಾಗಲಿದೆ. ಬೆಂಗಳೂರಲ್ಲಿ ಇಂದು ಬೆಳಗ್ಗೆಯಿಂದ ತಾಪಮಾನ ಜಾಸ್ತಿಯಿರದಿದ್ದರೂ ಅಸಹನೀಯ ಧಗೆ ಇತ್ತು. ಮಧ್ಯಾಹ್ನದ ನಂತರ ಎಲ್ಲಡೆ ತಂಪು ಆವರಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Rains: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ, ಜೂನ್ 2ರಿಂದ ಮಳೆ ಜೋರು