Bengaluru Rains: ಯಶವಂತಪುರ ಸೇರಿ ಹಲವೆಡೆ ತುಂತುರು‌ ಮಳೆ: ಇನ್ನೂ 5 ದಿನ ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ

Monsoon Rainfall in Bengaluru: ನಗರದ ಹಲವೆಡೆ ತುಂತುರು‌ ಮಳೆ ಶುರುವಾಗಿದೆ. ಕಾರ್ಪೊರೇಷನ್, ಟೌನ್‌ಹಾಲ್, ಕೆ.ಆರ್‌.ಮಾರ್ಕೆಟ್‌ ಸೇರಿ ಹಲವೆಡೆ ತುಂತುರು‌ ಮಳೆ ಶುರುವಾಗಿದ್ದು, ಬಿಸಿಲಿನಿಂದ ತತ್ತರಿಸಿದ್ದ ಸಿಲಿಕಾನ್​ ಸಿಟಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವೀಕೆಂಡ್​ ಮೂಡ್​ನಲ್ಲಿದ್ದ ಜನರಿಗೆ ಮಳೆ ಅಡ್ಡಿ ಆಗಿದೆ. ವೀಕೆಂಡ್​ ಮೂಡ್​ನಲ್ಲಿದ್ದ ಜನರಿಗೆ ಮಳೆ ಅಡ್ಡಿ ಆಗಿದ್ದು, ಹಿಡಿಶಾಪ ಹಾಕಿದ್ದಾರೆ. ನಗರದೆಲ್ಲೆಡೆ ಮೋಡಕವಿದ ವಾತಾವರಣವಿದೆ.

Bengaluru Rains: ಯಶವಂತಪುರ ಸೇರಿ ಹಲವೆಡೆ ತುಂತುರು‌ ಮಳೆ: ಇನ್ನೂ 5 ದಿನ ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ
ವೀಕೆಂಡ್​ ಮೂಡ್​ನಲ್ಲಿದ್ದವರಿಗೆ ಶಾಕ್​: ಬೆಂಗಳೂರಿನ ಹಲವೆಡೆ ತುಂತುರು‌ ಮಳೆ ಆರಂಭ
Follow us
Poornima Agali Nagaraj
| Updated By: ಗಂಗಾಧರ​ ಬ. ಸಾಬೋಜಿ

Updated on:Jun 01, 2024 | 3:56 PM

ಬೆಂಗಳೂರು, ಜೂನ್​​ 01: ಕಳೆದ ಒಂದು ವಾರ ಬಳಿಕ ಸಿಲಿಕಾನ್ ಸಿಟಿಗೆ ಮತ್ತೆ ಮಳೆರಾಯನ (Rains) ಎಂಟ್ರಿ ಆಗಿದೆ. ನಗರದ ಹಲವೆಡೆ ತುಂತುರು‌ ಮಳೆ ಆಗಿದೆ. ಕಾರ್ಪೊರೇಷನ್, ಟೌನ್‌ಹಾಲ್, ಕೆ.ಆರ್‌.ಮಾರ್ಕೆಟ್‌, ಮಲ್ಲೇಶ್ವರಂ, ಯಶವಂತಪುರ ಸೇರಿ ಹಲವೆಡೆ ತುಂತುರು‌ ಮಳೆ ಶುರುವಾಗಿದ್ದು, ಬಿಸಿಲಿನಿಂದ ತತ್ತರಿಸಿದ್ದ ಸಿಲಿಕಾನ್​ ಸಿಟಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವೀಕೆಂಡ್​ ಮೂಡ್​ನಲ್ಲಿದ್ದ ಜನರಿಗೆ ಮಳೆ ಅಡ್ಡಿ ಆಗಿದ್ದು, ಹಿಡಿಶಾಪ ಹಾಕಿದ್ದಾರೆ. ಸದ್ಯ ನಗರದೆಲ್ಲೆಡೆ ಮೋಡಕವಿದ ವಾತಾವರಣವಿದ್ದು, ಇಂದಿನಿಂದ ಐದು ದಿನ ನಗರದಲ್ಲಿ ಮಳೆ ಆಗಲಿದೆ ಎಂದು ಹವಾಮಾನ‌ ಇಲಾಖೆ ತಜ್ಞ ಸಿಎಸ್ ಪಾಟೀಲ್ ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಆನೇಕಲ್, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಳೆ ಆಗಿದೆ. ಧಾರಾಕಾರ ಮಳೆಯಿಂದ ಚಂದಾಪುರದ ಬಳಿ ಸರ್ವಿಸ್ ರಸ್ತೆ ಜಲಾವೃತವಾಗಿದ್ದು, ಮಳೆ ನೀರು ಹೊರಹೋಗಲು ಜಾಗವಿಲ್ಲದೆ ರಸ್ತೆ ಕೆರೆಯಂತಾಗಿದೆ. ಇನ್ನು ಮಳೆ ಆಗಮನ ಹಿನ್ನೆಲೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಮಳೆಯ ಆಗಮನದಿಂದ ಕೃಷಿ ಚಟುವಟಿಕೆ ಚುರುಕು ಪಡೆದಿವೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 28 ದಿನಗಳಲ್ಲಿ 74,915 ಸಂಚಾರಿ ನಿಯಮ ಉಲ್ಲಂಘನೆ

ಒಂದು ವಾರದಿಂದ ಮಳೆ ಇಲ್ಲದ ಕಾರಣ 36 ಉಷ್ಣಾಂಶ ದಾಖಲಾಗಿತ್ತು. ಮೇ ತಿಂಗಳಲ್ಲಿ ಮಳೆ ಕಾರಣ ಸರಾಸರಿ ಗರಿಷ್ಠ ಉಷ್ಣಾಂಶ 32° ದಾಖಲಾಗುತ್ತಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಲ್ಲಿ‌ 3-4° ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಆರ್ದ್ರತೆಯಲ್ಲಿ ಹೆಚ್ಚಳದಿಂದ ಸಿಲಿಕಾನ್ ಮಂದಿಗೆ ಶಕೆ ಅನುಭವವಾಗಿದೆ.

ಶಕೆ ಅನುಭವದಿಂದ ಬೆಸತ್ತಿದ್ದ ಜನರಿಗೆ ಇದೀಗ ವರುಣ ತಂಪೆರೆದಿದ್ದು, ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ದು, ಮಳೆ ಹಿನ್ನಲೆ ಅಂಡರ್ ಪಾಸ್, ಫ್ಲೈ ಓವರ್ ಕೆಳಗಡೆ ಜನರು ಆಸರೆ ಪಡೆದಿದ್ದಾರೆ.

ರಾಜ್ಯದಲ್ಲಿ‌ ಇಂದಿನಿಂದ ಐದು ದಿನಗಳ‌ ಕಾಲ ಭಾರಿ‌ ಮಳೆ ಸಾಧ್ಯತೆ: ಸಿಎಸ್ ಪಾಟೀಲ್​

ಹವಾಮಾನ‌ ಇಲಾಖೆ ತಜ್ಞ ಸಿಎಸ್ ಪಾಟೀಲ್​ ಮಾತನಾಡಿದ್ದು, ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ‌ ರಾಜ್ಯದಲ್ಲಿ‌ ಇಂದಿನಿಂದ ಐದು ದಿನಗಳ‌ ಕಾಲ ಭಾರಿ‌ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ಮುಂಗಾರು ಕೇರಳ ಪ್ರವೇಶಿಸಿದೆ. ನಂತರ ನಮ್ಮ ರಾಜ್ಯಕ್ಕೆ ಪ್ರವೇಶಿಸಲಿದೆ. ನಾಳೆಯಿಂದ ರಾಜಾಧಾನಿಗೆ ಮುಂಗಾರು ಪ್ರವೇಶವಾಗುವ ಸಾಧ್ಯಾತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: KSRTC Sudent Bus Pass: ವಿದ್ಯಾರ್ಥಿ ಬಸ್​ ಪಾಸ್​ ವಿತರಣೆ ಆರಂಭ; ದರ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ

ಈ ಭಾರಿ ಅವಧಿಗೂ ಮೊದಲೇ ಪ್ರವೇಶ ಮಾಡುತ್ತಿರುವ ಮಂಗಾರು.‌ ಕಳೆದ ವರ್ಷ ಜೂನ್ 15 ರಿಂದ ಮುಂಗಾರು ಪ್ರವೇಶವಾಗಿತ್ತು. ಆದರೆ ಈ ವರ್ಷ 15 ದಿನಗಳಿಗೂ ಮೊದಲೇ ಪ್ರವೇಶವಾಗುತ್ತಿದ್ದು, ಈ ಭಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.

ಹೀಗಾಗಿ ಇಂದು ದಕ್ಷಿಣ ಓಳನಾಡು, ಉತ್ತರ ಒಳನಾಡು, ಕರಾವಳಿ ಭಾಗಕ್ಕೆ ಅಲರ್ಟ್ ನೀಡಿರುವ ಹವಾಮಾನ ಇಲಾಖೆ‌ ಇನ್ಮು‌ ಬೆಂಗಳೂರಿಗೆ ಇಂದಿನಿಂದ ಐದು ದಿನ ಮಳೆ ಇರಲಿದ್ದು, ಇಂದು ಗುಡುಗು – ಮಿಂಚು ಜೊತೆಗೆ ಬೀರುಗಾಳಿ ಸಹಿತ ಮಳೆಯಾಗುವ ಸಾಧ್ಯಾತೆ ಇದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:19 pm, Sat, 1 June 24

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ