Fitness and Ice Bath: ಐಸ್ ಸ್ನಾನದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಕುರಿತಾದ ಪ್ರೀಮಿಯಂ ಲೇಖನ ಓದಿ

fitness exercise ice bath : ತೀವ್ರತರವಾದ ವ್ಯಾಯಾಮದ ನಂತರ ತ್ವರಿತವಾಗಿ ಚೇತರಿಕೆ ಕಾಣಲು ಮತ್ತು ತಮ್ಮ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಕ್ರೀಡಾಪಟುಗಳು ಐಸ್ ಸ್ನಾನವನ್ನು ದೀರ್ಘಕಾಲದಿಂದ ಬಳಸುತ್ತಾ ಬಂದಿದ್ದಾರೆ. ಇದು ಪ್ರಾಚೀನ ಗ್ರೀಸ್‌ ಕಾಲಕ್ಕೂ ಹಿಂದಿನದು. ಆದರೆ, ಇದು ಈಗ ಹಿಂದೆಂದಿಗಿಂತಲೂ ಈಗ ಹೆಚ್ಚು ಜನಪ್ರಿಯವಾಗಿದೆ.

Fitness and Ice Bath: ಐಸ್ ಸ್ನಾನದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಕುರಿತಾದ ಪ್ರೀಮಿಯಂ ಲೇಖನ ಓದಿ
ಐಸ್ ಸ್ನಾನದ ಪ್ರಯೋಜನ, ಅಡ್ಡಪರಿಣಾಮಗಳ ಕುರಿತಾದ ಪ್ರೀಮಿಯಂ ಲೇಖನ
Follow us
ಸಾಧು ಶ್ರೀನಾಥ್​
|

Updated on:Jun 01, 2024 | 5:53 PM

ಆ ಕಡೆ ಕೋಲ್ಕತ್ತಾದಿಂದ ಮುಂಬೈ ಈ ಕಡೆ ನವದೆಹಲಿಯಿಂದ ಬೆಂಗಳೂರಿನವರೆಗೆ ಇತ್ತೀಚೆಗೆ ಇಡೀ ಭಾರತ ಕಡು ಸುಡು ಬಿಸಿಲನ್ನು ಕಂಡಿದೆ. ಸೂರ್ಯನ ಕೋಪತಾಪಕ್ಕೆ ನಲುಗಿದೆ. ಬಿಸಿಲಿನ ಪ್ರತಾಪ ಕಂಡು ಪ್ರತಿಯೊಬ್ಬರೂ ಐಸ್ ಸ್ನಾನದ ಕನಸು ಕಾಣುವಂತೆ ಮಾಡಿದೆ! ಮುಂಗಾರು ದಕ್ಷಿಣ ಭಾರತಕ್ಕೆ ತುಸು ಬೇಗನೇ ಕಾಲಿಡುವುದರಿಂದ ದಕ್ಷಿಣ ಸದ್ಯಕ್ಕೆ ಕೂಲ್ ಕೂಲ್ ಆಗಿದೆ. ಅದೇ  50 ಡಿಗ್ರಿ ಗಡಿಯತ್ತ ಸಾಗಿರುವ ಉತ್ತರ ಭಾರತ ಬಿಸಿಲಿನಲ್ಲಿ ಇನ್ನೂ ಬೆವರಿಳಿಸುತ್ತಿದೆ.

ಆದರೆ ಈ ಬಿಸಿಲ ಬೇಗೆಯನ್ನು ಬದಿಗಿಟ್ಟು ದೈಹಿಕ ಫಿಟ್ನೆಸ್ ಮತ್ತು ಚೇತರಿಕೆ ಬಗ್ಗೆ ಮಾತನಾಡುವುದಾದರೆ ದೊಡ್ಡ ದೊಡ್ಡ ಕ್ರೀಡಾಪಟುಗಳು, ಸಿನಿ ತಾರೆಯರು ತಮ್ಮ ದೈಹಿಕ ತರಬೇತಿಯಲ್ಲಿ ಐಸ್ ಸ್ನಾನವನ್ನು ಅಂದರೆ ಮಂಜುಗಡ್ಡೆ ಸ್ನಾನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಿದೆ. ಈ ಅನಿಯಂತ್ರಿತ ಬಿಸಿಲ ಬೇಗೆಯಿಂದ ಪರಿಹಾರ ಪಡೆಯಲು ಮತ್ತು ತ್ವಚೆಯ ಚೇತರಿಕೆಗೆ ಈ ಐಸ್​ ಬಾತ್ (Ice Bath)​ ಹೇಳಿಮಾಡಿಸಿದಂತಿದೆ. ಅಷ್ಟಕ್ಕೂ ಏನಪ್ಪಾ Ice Bath ಅಂದರೆ ಕೊರೆಯುವ 14 ಡಿಗ್ರಿ ಸೆಲ್ಸಿಯಸ್‌ (14 degrees celsius) ತಾಪಮಾನಕ್ಕಿಂತ ಕಡಿಮೆ ಇರುವ ಮಂಜುಗಡ್ಡೆ ತಣ್ಣೀರಿನಿಂದ ತುಂಬಿದ ಟಬ್‌ನಲ್ಲಿ ಕೆಲ ಕಾಲ ಮುಳುಗಲು ನೀವು ಸಿದ್ಧರಿದ್ದರೆ, ಅನೇಕ ಕಾರಣಗಳಿಗಾಗಿ ನೀವು ಖಂಡಿತಾ ಸಂತೋಷದ ವ್ಯಕ್ತಿಯಾಗುತ್ತೀರಿ. ಅಷ್ಟರಮಟ್ಟಿಗೆ Ice Bath ನಿಮ್ಮ ಮೇಲೆ ಪರಿಣಾಮ, ಪ್ರಭಾವ ಬೀರುತ್ತದೆ.

ತೀವ್ರತರವಾದ ವ್ಯಾಯಾಮದ ನಂತರ ತ್ವರಿತವಾಗಿ ಚೇತರಿಕೆ ಕಾಣಲು ಮತ್ತು ತಮ್ಮ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಕ್ರೀಡಾಪಟುಗಳು ಐಸ್ ಸ್ನಾನವನ್ನು ದೀರ್ಘಕಾಲದಿಂದ ಬಳಸುತ್ತಾ ಬಂದಿದ್ದಾರೆ. ಇದು ಪ್ರಾಚೀನ ಗ್ರೀಸ್‌ ಕಾಲಕ್ಕೂ ಹಿಂದಿನದು ಆದರೆ, ಇದು ಈಗ ಹಿಂದೆಂದಿಗಿಂತಲೂ ಈಗ ಹೆಚ್ಚು ಜನಪ್ರಿಯವಾಗಿದೆ.

ಸಾಮಾನ್ಯವಾಗಿ ವೃತ್ತಿಪರ ಓಟಗಾರನು ಸುದೀರ್ಘ ಓಟದ ನಂತರ ತಮ್ಮ ಸ್ನಾಯುಗಳನ್ನು ಶಾಂತಗೊಳಿಸಲು ಮತ್ತು ದೈಹಿಕ ನೋವನ್ನು ತ್ವರಿತವಾಗಿ ಶಮನಗೊಳಿಸಲು ಐಸ್​ ಬಾತ್ ಗೆ ಮೊರೆಹೋಗುತ್ತಾರೆ. ಓಟದ ವೇಳೆಯೇ ತಲೆಯ ಮೇಲೆ ಮಂಜಿನ ನೀರನ್ನು ಸುರಿದುಕೊಳ್ಲುವುದನ್ನು ನೋಡಿರುತ್ತೀರಿ. ಅದು ಚೇತರಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎನ್ನುತ್ತಾರೆ ಸೆಲೆಬ್ರಿಟಿ ಫಿಟ್‌ನೆಸ್‌ ಕೋಚ್. ಐಸ್ ವಾಟರ್​​ ಇಮ್ಮರ್ಷನ್ ಥೆರಪಿ ಎಂದೂ ಕರೆಯಲ್ಪಡುವ ಐಸ್ ಸ್ನಾನವು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಪ್ರಾಥಮಿಕವಾಗಿ ಉರಿಯೂತವನ್ನು ಕಡಿಮೆ ಮಾಡುವುದು, ಸ್ನಾಯುಗಳ ನೋವನ್ನು ಕಡಿಮೆ ಮಾಡುವುದು ಮತ್ತು ತೀವ್ರವಾದ ದೈಹಿಕ ಚಟುವಟಿಕೆಯ ನಂತರ ಚೇತರಿಕೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು.

ವರ್ಷದ ಹಲವಾರು ತಿಂಗಳುಗಳವರೆಗೆ ನಾವು ಭಾರತದ ಹೆಚ್ಚಿನ ಭಾಗಗಳಲ್ಲಿ ಇಂತಹ ಬಿಸಿ ಅನುಭವದ ಪರಿಸ್ಥಿತಿಗಳನ್ನೇ ಎದುರಿಸುತ್ತೇವೆ. ಅದರಲ್ಲೂ ಕ್ರೀಡಾಪಟುಗಳು, ಸಿನಿ ತಾರೆಯರು ಮತ್ತಿತರ ಖ್ಯಾತನಾಮರು ಇಂತಹ ತಣ್ಣೀರು ಪದ್ದತಿಯನ್ನು ಅನುಭವಿಸುತ್ತಾರೆ. ಏಕೆಂದರೆ ಇದರಿಂದ ಒಟ್ಟಾರೆ ವ್ಯಾಯಾಮದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದನ್ನು, 2010 ರಲ್ಲಿ ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ ಕೇಂದ್ರವು ಅಧ್ಯಯನ ವರದಿಯೊಂದು ಪ್ರಕಟವಾಗಿತ್ತು. ಬಿಸಿ ವಾತಾವರಣದಲ್ಲಿ ವ್ಯಾಯಾಮ ಮಾಡುವುದರಿಂದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ತಣ್ಣೀರಿನ ಇಮ್ಮರ್ಶನ್‌ ಪದ್ದತಿಯಿಂದಾಗುವ ಪರಿಣಾಮವನ್ನೂ ಅಧ್ಯಯನ ಪರಿಶೋಧಿಸಿದೆ.

ಅದೇ ಜರ್ನಲ್​ನಲ್ಲಿ ಇತ್ತೀಚೆಗೆ ಪ್ರಕಟವಾದ ಮತ್ತೊಂದು ಅಧ್ಯಯನವು ಐಸ್ ಸ್ನಾನವು (ice cold water immersion ) ದೇಹದಲ್ಲಿ ಗಮನಾರ್ಹವಾದ ಶಾರೀರಿಕ ಮತ್ತು ಜೀವರಾಸಾಯನಿಕ ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂದು ಗಮನಿಸಿದೆ. 5 ನಿಮಿಷಗಳ ಮಂಜುಗಡ್ಡೆ ಸ್ನಾನದಲ್ಲಿ ಹೃದಯ ಬಡಿತ, ರಕ್ತದೊತ್ತಡ, ಉಸಿರಾಟದ ಪರಿಮಾಣ ಮತ್ತು ಚಯಾಪಚಯಕ್ಕೆ ಸಂಬಂಧಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಐಸ್ ಬಾತ್‌ಗಳ ಬಳಕೆಯು ಯಾವುದೇ ತರವಾದ ಸ್ನಾಯು ನೋವು, ಅಥವಾ ಇನ್ನಿತರೆ ನೋವುಗಳಿಂದ ಚೇತರಿಸಿಕೊಳ್ಳಲು ಕ್ರೀಡಾಪಟುಗಳು ಬಳಸುವ ಅತ್ಯಂತ ಸಾಮಾನ್ಯ ತಂತ್ರವಾಗಿದೆ ಎಂದು ಮುಂಬೈನ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿರುವ ಕೋಕಿಲಾಬೆನ್‌ ಕ್ರೀಡಾ ವಿಜ್ಞಾನ ಮತ್ತು ಪುನರ್ವಸತಿ ಕೇಂದ್ರದ ಕ್ರೀಡಾ ಔಷಧದ ಸಲಹೆಗಾರ ಅಶುತೋಷ್ ನಿಮ್ಸೆ ಹೇಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಐಸ್ ನೀರಿನಿಂದ ಸ್ನಾನ ಮಾಡುವ ಪ್ರವೃತ್ತಿ ಭಾರತದಲ್ಲೂ ಹೆಚ್ಚಾಗಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ , ಚಿತ್ರನಟಿ ಸಮಂತಾ ರೂತ್ ಪ್ರಭು , ರಾಕುಲ್ ಪ್ರೀತ್ ಸಿಂಗ್, ಕನ್ನಡದವರಾದ ಶರ್ಮಿಳಾ ಮಾಂಡ್ರೆ, ನಿಧಿ ಸುಬ್ಬಯ್ಯ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಐಸ್ ಬಾತ್ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಐಸ್ ಬಾತ್ ಹೇಗೆ ಕೆಲಸ ಮಾಡುತ್ತದೆ? ನೀವು ಐಸ್ ಸ್ನಾನ ಮಾಡುವಾಗ, ತಣ್ಣನೆಯ ನೀರು ನಿಮ್ಮ ದೇಹದ ಮತ್ತು ಚರ್ಮದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ತಾಪಮಾನದಲ್ಲಿನ ಈ ಬದಲಾವಣೆಯು ನಿಮ್ಮ ಚರ್ಮದ ರಕ್ತನಾಳಗಳನ್ನು ಕಿರಿದಾಗಿಸುತ್ತದೆ (ವಾಸೋಕನ್ಸ್ಟ್ರಿಕ್ಷನ್) ಮತ್ತು ನಿಮ್ಮ ದೇಹವು ಬೆಚ್ಚಗಾಗಲು ಪ್ರಯತ್ನಿಸಿದಾಗ ರಕ್ತ ಆಳವಾಗಿ ಚಲಿಸುತ್ತದೆ. ನೀವು ಐಸ್ ಸ್ನಾನದಿಂದ ಹೊರಬಂದಾಗ, ನಿಮ್ಮ ರಕ್ತನಾಳಗಳು ವಿಸ್ತರಿಸುತ್ತವೆ. ಮತ್ತು ಆಮ್ಲಜನಕ ಮತ್ತು ಪೋಷಕಾಂಶ-ಭರಿತ ರಕ್ತವನ್ನು ನಿಮ್ಮ ಸ್ನಾಯುಗಳನ್ನು ಒಳಗೊಂಡಂತೆ ನಿಮ್ಮ ದೇಹದ ಅಂಗಾಂಶಗಳಿಗೆ ಪಂಪ್ ಮಾಡುತ್ತದೆ. ಈ ಪ್ರಕ್ರಿಯೆಯು ಸ್ನಾಯು ನೋವನ್ನು ಉಂಟುಮಾಡುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀರಿನಲ್ಲಿ ಮುಳುಗುವುದು ನಿಮ್ಮ ದೇಹದ ಮೇಲೆ ಒಟ್ಟಾರೆ ಒತ್ತಡವನ್ನು ಕಡಿಮೆಮಾಡುತ್ತದೆ. ಈ ಪ್ರಕ್ರಿಯೆಯನ್ನು ಹೈಡ್ರೋಸ್ಟಾಟಿಕ್ ಒತ್ತಡ ಎಂದು ಕರೆಯಲಾಗುತ್ತದೆ. ಹೈಡ್ರೋಸ್ಟಾಟಿಕ್ ಒತ್ತಡವು ನಿಮ್ಮ ಹೃದಯ, ಮೆದುಳು ಮತ್ತು ಶ್ವಾಸಕೋಶಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಈ ಪ್ರಮುಖ ಅಂಗಗಳಿಗೆ ಇನ್ನೂ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಜೊತೆಗೆ, ನಿದ್ರೆ, ಒತ್ತಡ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತದೆ. ನಿಮ್ಮ ಮನಸನ್ನು ಮುದಗೊಳಿಸಿ, ಆಹ್ಲಾದತೆ ತುಂಬುತ್ತದೆ. ಕೇಂದ್ರ ನರಮಂಡಲಕ್ಕೆ ಉತ್ತೇಜನಕಾರಿಯಾಗುತ್ತದೆ. ಮಾನಸಿಕ ದೃಢತೆ ತರುತ್ತದೆ.

ಕನ್ನಡ ನಟಿಯರ ಐಸ್‌ಬಾತ್ ಕ್ರೇಜ್

* ಸ್ಯಾಂಡಲ್‌ವುಡ್ ನಲ್ಲಿಯೂ ಕೆಲ ನಟಿಯರಿಗೆ ಐಸ್‌ಬಾತ್ ಕ್ರೇಜ್ ಇದೆ. ಮೊನ್ನೆ ತಾನೇ ಬಾಲಿಯಲ್ಲಿ ನಟಿ ಶರ್ಮಿಳಾ ಮಾಂಡ್ರೆ ಐಸ್ ಪೂಲ್‌ನಲ್ಲಿ ಮಿಂದೆದ್ದು ಬಂದ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಬಗ್ಗೆ ಮಾತನಾಡುವ ಶರ್ಮಿಳಾ, ‘ಇದೊಂದು ಪ್ರಾಚೀನ ಚಿಕಿತ್ಸಾ ಪದ್ಧತಿ. ಇದರಿಂದ ನರ ವ್ಯವಸ್ಥೆ ಚುರುಕಾಗಿ ಆರೋಗ್ಯ ವೃದ್ಧಿಯಾಗುತ್ತೆ. ಪ್ರತಿರೋಧ ಶಕ್ತಿ ಹೆಚ್ಚುತ್ತೆ. ಗಾಯಗಳು ಗುಣವಾಗುತ್ತವೆ. ನಾನು ವಿಸಿಟ್ ಮಾಡಿದ ಬಾಲಿಯ ಐಸ್‌ಪೂಲ್ ಬಹಳ ಸೊಗಸಾಗಿತ್ತು. ನಾನು 25 ಸೆಕೆಂಡ್ ಈ ಐಸ್ ನೀರಲ್ಲಿದ್ದೆ. ಇಲ್ಲಿ 90 ಸೆಕೆಂಡ್ ಇದ್ದರೆ ಇನ್ನೂ ಒಳ್ಳೆಯದು. ಹೀಗೆ ಐಸ್ ಬಾತ್ ಮಾಡೋದ್ರಿಂದ ದೇಹ ಮಾತ್ರ ಅಲ್ಲ, ಮನಸೂ ರಿಫ್ರೆಶ್ ಆಗುತ್ತೆ’ ಎಂದಿದ್ದಾರೆ.

* ಇನ್ನೊಂದೆಡೆ ನಟಿ ನಿಧಿ ಸುಬ್ಬಯ್ಯ ಸಹ ಐಸ್ ಬಾತ್ ಟ್ರೈ ಮಾಡಿದ್ದಾರಂತೆ. ‘ನಾನು ಎರಡೂವರೆ ನಿಮಿಷ ಐಸ್ ಟಬ್‌ನಲ್ಲಿದ್ದೆ. ಸಖತ್ ಮಜವಾದ ಅನುಭವ ಅದು. ನನಗೆ ವರ್ಕೌಟ್ ಮಾಡುವಾಗ ಉಂಟಾದ ನೋವು ಐಸ್‌ಬಾತ್ ಬಳಿಕ ಕಡಿಮೆ ಆಗಿದೆ. ನಿದ್ರೆ ಚೆನ್ನಾಗಿ ಬರ್ತಿದೆ. ಚರ್ಮಕ್ಕೂ ಹೊಳಪು ಬರುತ್ತಿದೆ’ ಎಂದು ಬೀಗಿದ್ದಾರೆ.

ಮನುಷ್ಯನ ದೇಹವು ಶೀತ ತಾಪಮಾನಕ್ಕೆ ಒಡ್ಡಿಕೊಂಡಾಗ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ಸ್ನಾಯುಗಳು ಮತ್ತು ಕೀಲುಗಳಲ್ಲಿ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಶುತೋಷ್ ವಿವರಿಸುತ್ತಾರೆ. ಹೆಚ್ಚುವರಿಯಾಗಿ, ಶೀತ ಉಷ್ಣತೆಯು ನರಗಳ ತುದಿಗಳನ್ನು ನಿಶ್ಚೇಷ್ಟಿತಗೊಳಿಸುತ್ತದೆ. ಅಂದರೆ ಜೋಮುಹಿಡಿಸುತ್ತದೆ (numbness). ತಾತ್ಕಾಲಿಕವಾಗಿ ನೋವಿನಿಂದ ಪರಿಹಾರ ನೀಡುತ್ತದೆ. ಕ್ರೀಡಾಪಟುಗಳು ಮತ್ತು ಸದಾ ಸಕ್ರಿಯವಾಗಿರುವ ವ್ಯಕ್ತಿಗಳು ತಮ್ಮ ಹೆಚ್ಚಿನ ದೈಹಿಕ ಬೇಡಿಕೆಗೆ ಅನುಗುಣವಾಗಿ ಈ ಪ್ರಯೋಜನಗಳನ್ನು ಹೆಚ್ಚಾಗಿ ಅನುಭವಿಸಬಹುದು. ಇನ್ನು, ಐಸ್ ಸ್ನಾನವು ಸ್ನಾಯು ನೋವು ಅಥವಾ ಉರಿಯೂತವನ್ನು ಅನುಭವಿಸುವ ಯಾರಿಗೇ ಆದರೂ ಪ್ರಯೋಜನಕಾರಿಯಾಗಿದೆ. ಉದಾಹರಣೆಗೆ ದೀರ್ಘಕಾಲದಿಂದ ನೋವುಗಳಿಂದ ಬಳಲುತ್ತಿರುವವರು ಅಥವಾ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳಿಗೂ ಇದು ಸಹಕಾರಿಯಾಗಿದೆ.

ಐಸ್ ಸ್ನಾನವನ್ನು ಪ್ರಾಥಮಿಕವಾಗಿ ದೈಹಿಕ ಚೇತರಿಕೆಗಾಗಿ ಬಳಸಲಾಗುತ್ತದೆ. ಶಾಖದ ಅಲೆಗಳ ಅಸ್ವಸ್ಥತೆಯಿಂದ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ. ತಣ್ಣೀರಿನಲ್ಲಿ ಮುಳುಗುವುದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವಿಶೇಷವಾಗಿ ಪ್ರಸ್ತುತ ಬಿಸಿ ವಾತಾವರಣದಲ್ಲಿ ಉಲ್ಲಾಸಕರ ಸಂವೇದನೆಯನ್ನು ನೀಡುತ್ತದೆ. ಆದಾಗ್ಯೂ, ಐಸ್ ಸ್ನಾನವು ಶಾಖದ ಅಲೆಗಳಿಗೆ ದೀರ್ಘಾವಧಿಯ ಪರಿಹಾರವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಅದು ತಾತ್ಕಾಲಿಕ ಉಪಶಮನವನ್ನು ನೀಡುತ್ತದೆ ಮತ್ತು ಶಾಖ-ಕಡಿಮೆಗೊಳಿಸುವ ಇತರ ತಂತ್ರಗಳಾದ ಜಲಸಂಚಯನದಲ್ಲಿ ಉಳಿಯುವುದು, ನೆರಳಿನಲ್ಲಿರುವುದು, ಫ್ಯಾನ್ ಅಥವಾ ಹವಾನಿಯಂತ್ರಣವನ್ನು ಬಳಸುವುದು ಉತ್ತಮ ಎಂದೂ ಅಗರ್ವಾಲ್ ಹೇಳುತ್ತಾರೆ.

ಐಸ್ ಸ್ನಾನದಿಂದ ಉಂಟಾಗುವ ಇಂತಹ ಪ್ರಯೋಜನಗಳ ಹೊರತಾಗಿಯೂ ಐಸ್ ಸ್ನಾನವು ಕೆಲವು ದುಷ್ಪರಿಣಾಮಗಳನ್ನು ಬೀರುತ್ತದೆ. 2021 ರ ಅಧ್ಯಯನ ವಿಶ್ಲೇಷಣೆಯು ನಿಯಮಿತವಾದ ಐಸ್ ಸ್ನಾನವು ಪ್ರತಿರೋಧ ತರಬೇತಿ ರೂಪಾಂತರಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ ಎಂದು ಎಚ್ಚರಿಸಿದೆ. ತಣ್ಣೀರಿನ ಇಮ್ಮರ್ಶನ್ ಅನ್ನು ಬಳಸುವ ಜನರು ಆಘಾತ ಮತ್ತು/ ಅಥವಾ ಹೈಪರ್​​ವೆಂಟಿಲೇಷನ್ ಅನ್ನು ಅನುಭವಿಸಬಹುದು. ಇನ್ನು ವಿಪರೀತ ಸಂದರ್ಭಗಳಲ್ಲಿ, ಹಿಮಾವೃತ ನೀರಿನಲ್ಲಿ ಹಠಾತ್ ಮುಳುಗುವಿಕೆಯು ಹೃದಯಾಘಾತಕ್ಕೆ ಕಾರಣವಾಗಬಹುದು. ತಣ್ಣೀರಿನ ಇಮ್ಮರ್ಶನ್‌ಗೆ ದೇಹವನ್ನು ಕ್ರಮೇಣವಾಗಿ ಒಗ್ಗಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ವಿಶೇಷವಾಗಿ ಅನುಕೂಲಕರ ಆರೋಗ್ಯ ಪರಿಸ್ಥಿತಿ ಅಥವಾ ಶೀತಕ್ಕೆ ಒಡ್ಡಿಕೊಳ್ಳುವವರಿಗೆ ಇದು ಉತ್ತಮ ಎಂದು ವೈದ್ಯರು ಸೂಚಿಸುತ್ತಾರೆ.

ದೀರ್ಘಕಾಲದವರೆಗೆ ಶೀತ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ ಲಘು ಉಷ್ಣತೆಯ ಅಪಾಯವನ್ನು ಹೆಚ್ಚಿಸಬಹುದು. ವಿಶೇಷವಾಗಿ ನೀರಿನ ತಾಪಮಾನವು ತೀರಾ ಕಡಿಮೆಯಿದ್ದರೆ ಅಥವಾ ವ್ಯಕ್ತಿಯು ದೀರ್ಘಕಾಲದವರೆಗೆ ನೀರಿನಲ್ಲಿದ್ದರೆ ಇದರ ಅಪಾಯ ಹೆಚ್ಚು. ಈ ಅಪಾಯಗಳನ್ನು ಕಡಿಮೆ ಮಾಡಲು, ವ್ಯಕ್ತಿಗಳು ಸುಮಾರು 10-15 ಡಿಗ್ರಿ ಸೆಲ್ಸಿಯಸ್ ತಂಪಿನ ಐಸ್ ಸ್ನಾನದ ಅವಧಿಯನ್ನು ಸುಮಾರು 10-15 ನಿಮಿಷಗಳಿಗೆ ಮಿತಗೊಳಿಸಿಕೊಳ್ಳಬೇಕು. ಆದೇ ರೀತಿ ಅತಿಯಾದ ನಡುಕ, ಮರಗಟ್ಟುವಿಕೆ ಅಥವಾ ಅಸ್ವಸ್ಥತೆಯನ್ನು ಅನುಭವಿಸಿದರೆ ನಿಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಹಾಗೆಯೇ ಅಪಾಯವನ್ನು ತಪ್ಪಿಸಲು ಐಸ್ ಸ್ನಾನವನ್ನು ನಿಲ್ಲಿಸುವುದು ಅತ್ಯಗತ್ಯ ಎಂದು ವೈದ್ಯಲೋಕ ಹೇಳುತ್ತದೆ.

Published On - 5:50 pm, Sat, 1 June 24

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM