AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಹಾ, ಅಂಜಲಿ ಹಾಗೆಯೇ ನಿನ್ನ ಹತ್ಯೆ ಆಗುತ್ತೆ; ಹುಬ್ಬಳ್ಳಿಯ ಮುಖ್ಯ ಶಿಕ್ಷಕಿಗೆ ಬೆದರಿಕೆ ಪತ್ರ

ನೇಹಾ, ಅಂಜಲಿ ಹತ್ಯೆ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿ(Hubballi)ಯ ಬೆಂಗೇರಿಯಲ್ಲಿರುವ ರೋಟರಿ ಪ್ರಾಥಮಿಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಪತ್ರ ಕಳುಹಿಸಿದ್ದಾನೆ. ಇದೀಗ ಮತ್ತಷ್ಟು ಆತಂಕ ಸೃಷ್ಟಿಸಿದೆ. ವಿಷಯ ತಿಳಿದ ಕೂಡಲೇ ಶಿಕ್ಷಕಿ ಮನೆಗೆ ಎಸಿಪಿ ಶಿವಪ್ರಕಾಶ್ ನಾಯಕ್ ಭೇಟಿ ನೀಡಿದ್ದಾರೆ.

ನೇಹಾ, ಅಂಜಲಿ ಹಾಗೆಯೇ ನಿನ್ನ ಹತ್ಯೆ ಆಗುತ್ತೆ; ಹುಬ್ಬಳ್ಳಿಯ ಮುಖ್ಯ ಶಿಕ್ಷಕಿಗೆ ಬೆದರಿಕೆ ಪತ್ರ
ಹುಬ್ಬಳ್ಳಿಯ ಮುಖ್ಯ ಶಿಕ್ಷಕಿಗೆ ಬೆದರಿಕೆ ಪತ್ರ
ಶಿವಕುಮಾರ್ ಪತ್ತಾರ್
| Edited By: ಕಿರಣ್ ಹನುಮಂತ್​ ಮಾದಾರ್|

Updated on:Jun 01, 2024 | 5:45 PM

Share

ಹುಬ್ಬಳ್ಳಿ, ಜೂ.01: ನೇಹಾ ಹಾಗೂ ಅಂಜಲಿ ಹಾಗೆಯೇ ಹತ್ಯೆ ಆಗುತ್ತದೆ ಎಂದು ಹುಬ್ಬಳ್ಳಿ(Hubballi)ಯ ಬೆಂಗೇರಿಯಲ್ಲಿರುವ ರೋಟರಿ ಪ್ರಾಥಮಿಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ(Teacher)ಗೆ ಅನಾಮಧೇಯ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆದಿದ್ದಾನೆ. ಮುಖ್ಯ ಶಿಕ್ಷಕಿ ದೀಪಾ ಅಡವಿಮಠ ಎನ್ನುವವರಿಗೆ ಕಳೆದ ಐದು ದಿನಗಳ ಹಿಂದೆ ಪೋಸ್ಟ್(ಅಂಚೆ) ಮೂಲಕ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಹಿನ್ನಲೆ ಹತ್ಯೆ ಬೆದರಿಕೆ ಪತ್ರದ ಕುರಿತು ಕೇಶ್ವಾಪೂರ ಪೊಲೀಸರ ಗಮನಕ್ಕೆ ಮುಖ್ಯ ಶಿಕ್ಷಕಿ ತಂದಿದ್ದು, ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಮುಖ್ಯ ಶಿಕ್ಷಕಿ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ.

ಎಸಿಪಿ ಭೇಟಿ

ಶಿಕ್ಷಕಿ ದೀಪಾ ಮನೆಗೆ ಎಸಿಪಿ ಶಿವಪ್ರಕಾಶ್ ನಾಯಕ್ ಭೇಟಿ ನೀಡಿದ್ದು, ಮಾಹಿತಿ ಪಡೆದಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಮುಖ್ಯ ಶಿಕ್ಷಕಿ ಮನೆ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನೇಹಾ, ಅಂಜಲಿ ಹತ್ಯೆ ಘಟನೆ ಮಾಸುವ ಮುನ್ನವೇ ಕೊಲೆ ಬೆದರಿಕೆ ಪತ್ರ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ:ನೇಹಾ ಹಿರೇಮಠ ತಂದೆಯನ್ನು ಚೇಸ್ ಮಾಡಿದ ಆಟೋ ಚಾಲಕ, ಮುಂದೇನಾಯ್ತು ನೋಡಿ

ಈ ಕುರಿತು ಮಾತನಾಡಿದ ಮುಖ್ಯ ಶಿಕ್ಷಕಿ ದೀಪಾ ಅಡವಿಮಠ, ‘ ಮೇ. 28 ರಂದು ನನಗೆ ಅನಾಮಧೇಯ ಪತ್ರ ಬಂದಿದೆ. ಅದರಲ್ಲಿ ‘ದೀಪಾ ನಿನ್ನ ಹತ್ಯೆ ನೇಹಾ ಹಾಗೂ ಅಂಜಲಿ ಹಾಗೆ ಕೆಲವೇ ದಿನಗಳಲ್ಲಿ ಅಂತಾ ಬರೆದಿದೆ. ಯಾವ ಮಕ್ಕಳ ಮೇಲೂ ನನಗೆ ದ್ವೇಷ ಇಲ್ಲ, ಮಕ್ಕಳಿಗೂ ನನ್ಮ ಮೇಲೆ ದ್ವೇಷವಿಲ್ಲ. ನಾನು ಕಣ್ಣಲ್ಲಿ ಬುದ್ದಿ ಹೇಳಿದ್ದೇನೆ. ಇದೀಗ ಬೆಂಗೇರಿಯ ರೋಟರಿ ಶಾಲೆಗೆ ಪತ್ರ ಬಂದಿದೆ ಎಂದರು.

ಇನ್ನು ನಾನು ಮುಖ್ಯ ಶಿಕ್ಷಕಿಯಾಗಿ ನಾನು ಕೆಲಸ ಮಾಡುತ್ತಿದ್ದು, ನನಗೆ ಪತ್ರ ಬಂದ ದಿನವೇ ನಾನು ಪೊಲೀಸರ ಗಮನಕ್ಕೆ ತಂದಿದ್ದೇನೆ. ಈ ಹಿನ್ನಲೆ ಪೊಲೀಸರು ತನಿಖೆ ಮಾಡ್ತೀವಿ ಎಂದಿದ್ದು, ಪತ್ರ ಬರೆದ ಅನಾಮಧೇಯ ವ್ಯಕ್ತಿಯನ್ನು ಪತ್ತೆ ಮಾಡೋದಾಗಿ ಹೇಳಿದ್ದಾರೆ. ಈ ರೀತಿ ಯಾರೇ ಪತ್ರ ಬರೆದರೂ ಅವರಿಗೆ ಶಿಕ್ಷೆ ಆಗಬೇಕು. ನಾವು ಅಮಾಯಕ ಶಿಕ್ಷಕಿ, ವಿದ್ಯಾರ್ಥಿಗಳ ಮೇಲೆ ನನಗೆ ಅನುಮಾನ ಇಲ್ಲ. ಎಲ್ಲ ವಿದ್ಯಾರ್ಥಿಗಳು ಪ್ರೀತಿ ಇಂದ ಇದ್ದಾರೆ‌. ವಿದ್ಯಾರ್ಥಿಗಳು ನನ್ನ ಮೊಬೈಲ್ ನಂಬರ್ ಗಾಡ್ ಎಂದು ಸೇವ್ ಮಾಡಿದ್ದಾರೆ. ಪತ್ರ ಬಂದ ದಿನದಿಂದ ನನಗೆ ಫ್ರೀಯಾಗಿ ಇರೋಕೆ ಆಗುತ್ತಿಲ್ಲ. ಭಯ ಆಗುತ್ತಿದೆ ಎಂದು ದೀಪಾ ಅಡವಿಮಠ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Sat, 1 June 24

Follow Us
Shivakumar Pattar
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು