ಇಂಡಿಯಾ ಮೈತ್ರಿಕೂಟಕ್ಕೆ ಕನಿಷ್ಟ 295 ಸೀಟು ಸಿಗಲಿವೆ, ಸೀಟುಗಳ ಸಂಖ್ಯೆ ಹೆಚ್ಚಬಹುದೇ ಹೊರತು ಕಮ್ಮಿಯಾಗಲ್ಲ: ಮಲ್ಲಿಕಾರ್ಜುನ ಖರ್ಗೆ

ಇಂಡಿಯಾ ಮೈತ್ರಿಕೂಟಕ್ಕೆ ಕನಿಷ್ಟ 295 ಸೀಟು ಸಿಗಲಿವೆ, ಸೀಟುಗಳ ಸಂಖ್ಯೆ ಹೆಚ್ಚಬಹುದೇ ಹೊರತು ಕಮ್ಮಿಯಾಗಲ್ಲ: ಮಲ್ಲಿಕಾರ್ಜುನ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 01, 2024 | 6:40 PM

ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರು ನೀಡಿದ ಮಾಹಿತಿಯ ಆಧಾರದ ಮೇಲೆ ತಮಗೆ ಸಿಗುವ ಸ್ಥಾನಗಳ ಸಂಖ್ಯೆಯನ್ನು ಕಂಡುಕೊಳ್ಳಲಾಗಿದೆ ಎಂದು ಖರ್ಗೆ ಹೇಳಿದರು. ನಾಯಕರು ಜನರಿಂದ ಮತ್ತು ತಮ್ಮ ತಮ್ಮ ಪಕ್ಷಗಳ ಕಾರ್ಯಕರ್ತರಿಂದ ಕಲೆಹಾಕಿರುವ ಮಾಹಿತಿಯನ್ನು ಸಭೆಯಲ್ಲಿ ಶೇರ್ ಮಾಡಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ದೆಹಲಿ: ಇಂಡಿಯಾ ಮೈತ್ರಿಕೂಟದ (INDIA alliance) ಪ್ರಮುಖ ನಾಯಕರು ಇಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಸುಮಾರು ಎರಡೂವರೆ ತಾಸುಗಳ ನಡೆದ ಸಭೆಯಲ್ಲಿ ಹಲವಾರು ವಿಷಯಗಳನ್ನು ವಿಸ್ತೃತವಾಗಿ ಚರ್ಚಿಸಲಾಯಿತು ಎಂದರು. ಚುನಾವಣೆ ಸಮಯದಲ್ಲಿ ಮೈತ್ರಿಕೂಟದ ಸದಸ್ಯ ಪಕ್ಷಗಳಿಂದ ಆಗಿರಬಹುದಾದ ಪ್ರಮಾದಗಳು ಮತ್ತು ಫಲಿತಾಂಶಗಳು (poll results) ಪ್ರಕಟವಾದ ಮೇಲೆ ನಡೆಯುವ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು ಎಂದು ಖರ್ಗೆ ಹೇಳಿದರು. ಇಂಡಿಯ ಮೈತ್ರಿಕೂಟಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 295 ಸ್ಥಾನಗಳು ಸಿಗಲಿವೆ ಎಂದ ಖರ್ಗೆ ಅಂತಿಮ ಫಲಿತಾಂಶಗಳು ಹೊರಬಿದ್ದಾಗ ತಮಗೆ ಸಿಗುವ ಸ್ಥಾನಗಳ ಸಂಖ್ಯೆ ಹೆಚ್ಚಾಗಬಹುದೇ ಹೊರತು ಕಡಿಮೆಯಂತೂ ಆಗಲಾರದು ಎಂದು ಹೇಳಿದರು. ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರು ನೀಡಿದ ಮಾಹಿತಿಯ ಆಧಾರದ ಮೇಲೆ ತಮಗೆ ಸಿಗುವ ಸ್ಥಾನಗಳ ಸಂಖ್ಯೆಯನ್ನು ಕಂಡುಕೊಳ್ಳಲಾಗಿದೆ ಎಂದು ಖರ್ಗೆ ಹೇಳಿದರು. ನಾಯಕರು ಜನರಿಂದ ಮತ್ತು ತಮ್ಮ ತಮ್ಮ ಪಕ್ಷಗಳ ಕಾರ್ಯಕರ್ತರಿಂದ ಕಲೆಹಾಕಿರುವ ಮಾಹಿತಿಯನ್ನು ಸಭೆಯಲ್ಲಿ ಶೇರ್ ಮಾಡಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಮ್ಮ ನಿರ್ಧಾರ ಒಪ್ಪದಿದ್ದರೆ ಪಕ್ಷ ತೊರೆಯಬೇಕಾಗುತ್ತದೆ; ಅಧೀರ್ ರಂಜನ್​ಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ