ಲಕ್ಕಿ ಎಂಪಿ ಎಂದೇ ಕರೆಯಲ್ಪಡುವ ಗದ್ದಿಗೌಡರ್ ಬಗ್ಗೆ ನಿಮಗೆಷ್ಟು? ಅವರ ಆಸ್ತಿ ಎಷ್ಟಿದೆ ನೋಡಿ

|

Updated on: Jun 06, 2024 | 10:15 PM

ಪಿಸಿ ಗದ್ದಿಗೌಡರ್ ಅಂದ್ರೆ ಸಾಕು ಎಲ್ಲರೂ ಅದೃಷ್ಟದ ರಾಜಕಾರಣಿ ಲಕ್ಕಿ ಸಂಸದ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ನಿರಂತರವಾಗಿ ಐದು ಬಾರಿ ಗೆದ್ದಿದ್ದಾರೆ. ಐದು ಬಾರಿ ಗೆದ್ದರೂ ಸಹ ದೊಡ್ಡ ಸಿರಿವಂತರಲ್ಲ. ಅಪಾರ ವರ್ಚಸ್ಸು ಪಕ್ಷದಲ್ಲೂ ದೊಡ್ಡ ಪ್ರಭಾವಿಯಲ್ಲ.ಆದರೆ ಅವರ ಸದ್ಗುಣ, ಸರಣ ವ್ಯಕ್ತಿತ್ವ, ಸನ್ನಡತೆ ಒಂದೊಂದು ಲೋಕಸಭೆ ಚುನಾವಣೆಯಲ್ಲಿ ಒಂದೊಂದು ಅಲೆ ಅವರ ಕೈ ಹಿಡಿಯುತ್ತಲೇ ಬಂದಿದೆ. ಹಾಗಾದ್ರೆ, ಅವರ ರಾಜಕೀಯ ಇತಿಹಾಸ ಹೇಗಿದೆ? ಅವರ ಬಳಿ ಎಷ್ಟು ಆಸ್ತಿದೆ? ಇಲ್ಲಿದೆ ವಿವರ

ಲಕ್ಕಿ ಎಂಪಿ ಎಂದೇ ಕರೆಯಲ್ಪಡುವ ಗದ್ದಿಗೌಡರ್ ಬಗ್ಗೆ ನಿಮಗೆಷ್ಟು? ಅವರ ಆಸ್ತಿ ಎಷ್ಟಿದೆ ನೋಡಿ
Follow us on

2004ರಲ್ಲಿ ವಾಜಪೇಯಿ ಅಲೆ, 2009ರಲ್ಲಿ ಯಡಿಯೂರಪ್ಪ ಅಲೆ, 2014, 2019, ಮತ್ತು ಈಗ 2024ರಲ್ಲಿ ಮೋದಿ ಅಲೆ ಹೀಗೆ ಒಂದಿಲ್ಲೊಂದು ಗಾಳಿಯಲ್ಲಿ ತೇಲಿ ಮತ್ತೆ ಮತ್ತೆ ‌ಮೇಲೆ ಬರುತ್ತಿರುವವರು ಪಿಸಿ ಗದ್ದಿಗೌಡರ್ (PC gaddigoudar). ಇವರು ಬಾಗಲಕೋಟೆ (Bagalkot) ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಗೆದ್ದಿದ್ದಾರೆ. 2009ರಲ್ಲಿ ಜೆ.ಟಿ ಪಾಟೀಲ್ ಎದುದು 35 ಸಾವಿರ ಮತಗಳ ಅಂತರಿಂದ ಗೆದ್ದ ಗದ್ದಿಗೌಡರ್ 2019ರಲ್ಲಿ ಲಕ್ಷಾಂತರ ಮತಗಳ ಅಂತರದಿಂದಲೇ ಗೆದ್ದಿದ್ದರು .ಕಳೆದ ಬಾರಿ ವೀಣಾ ಕಾಶಪ್ಪನವರ ‌ಎದುರು ಕೂಡ ಒಂದುವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಆದರೆ ಈ ಬಾರಿ ಮತಗಳ ಅಂತರ ಕುಸಿದೆ. ಮೋದಿ ಅಲೆ, ಎದುರಾಳಿ ಪ್ರಬಲ ಸಚಿವ ಶಿವಾನಂದ ಪಾಟಿಲ್ ಪುತ್ರಿ ಸಂಯುಕ್ತ ಪಾಟೀಲ್ ಭಾರೀ ಪೈಪೋಟಿ ಒಡ್ಡಿದ್ದರು. ಶಾಸಕರ ಸಂಖ್ಯಾಬಲ ಆಡಳಿತ ಪಕ್ಷದ ಬಲ ಅಹಿಂದ ಬಲ ಹೀಗೆ ಎಲ್ಲ ಬಾಣಗಳನ್ನು ಹೂಡಿ ಭರ್ಜರಿ ತಂತ್ರ ಹೆಣೆದಿದ್ದರು. ಆದರೂ ಗದ್ದಿಗೌಡರ್ ಐದನೇ ಬಾರಿಗೂ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ.

ಗದ್ದಿಗೌಡರ್ ವೈಯಕ್ತಿ ಜೀವನ

ಇನ್ನು ಗದ್ದಿಗೌಡರ್ ರೈತ ಕುಟುಂಬದ ವ್ಯಕ್ತಿ. ಯಾವುದೇ ರಾಜಕೀಯ ಹಿನ್ನೆಲೆ‌ ಇಲ್ಲದ ಸಾಮಾನ್ಯ ಕಾರ್ಯಕರ್ತ. ಎಲ್ ಎಲ್‌ ಬಿ‌ ಮುಗಿಸಿ ವಕೀಲ ವೃತ್ತಿ ಮಾಡಿ ನಂತರ ಗದ್ದಿಗೌಡರ್​ ಜೂನ್ 1, 1951ರಲ್ಲಿ ಚಂದನಗೌಡ, ಬಾಳವ್ವ ಈ ದಂಪತಿಯ ಕಿರಿಯ ಪುತ್ರನಾಗಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಚಿಕ್ಕ ಗ್ರಾಮದಲ್ಲಿ ಜನಿಸಿದ್ದಾರೆ. ಇವರು, ಸುಸಂಸ್ಕೃತ,ಪ್ರಗತಿಪರ ರೈತರ,ಕುಟುಂಬದವರು. ಗದ್ದಿಗೌಡರ್ ಬಾಲ್ಯದಿಂದಲೂ ಚುರುಕುತನ, ಜಾಣ್ಮೆಯುಳ್ಳವರು,ಚಾಣಾಕ್ಷತೆ, ಸಂಘಟನಾ ಮನೋಭಾವನೆಯುಳ್ಳವರು. ಚತುರತೆ,ತಾಳ್ಮೆ, ಸಹನೆ,ಕರುಣೆ, ಹಲವು ಸದ್ಗುಣಗಳನ್ನು ರೂಡಿಸಿಕೊಂಡವರು.

ಗುರುಹಿರಿಯರ, ರಾಜಕಾರಣಿಗಳ ಮಾರ್ಗದರ್ಶನದೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು ರಾಜಕೀಯ ಚಾಣಾಕ್ಷತೆ ಬುದ್ದಿಯುಳ್ಳವರು ಎಲ್ಲಾ ಜನರೊಂದಿಗೆ ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ಯಾವುದೇ ರೀತಿಯ ಬೇದ ಭಾವ ಮಾಡದೇ ಸರ್ವರೊಂದಿಗೆ, ಸಮಾನವಾಗಿ ಬೆರೆತು ಅವರೊಂದಿಗೆ ಸುಖಲೋಪಹಾರಿ ವಿಚಾರಗಳನ್ನ ವಿಚಾರಿಸಿ, ಸಮಾಧಾನ ತಾಳ್ಮೆಯಿಂದ ಪ್ರತಿಯೊಬ್ಬರ ಸಮಸ್ಯೆಗಳನ್ನು ಬಗೆಹರಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಿಷ್ಪಕ್ಷಪಾತವಾಗಿ, ಮಾಡುವಂತಹ,ಸರಳ ಸಜ್ಜನಿಕೆಯ, ಸ್ನೇಹಜೀವಿ ಎಂದು ಹೆಸರಾಗಿರುವವರು.

1976 ರಲ್ಲಿ ಬಾದಾಮಿಯಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು, ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸೂಕ್ತವಾದ, ವಾದವನ್ನು ಮಂಡಿಸಿ ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥ ಗೊಳಿಸುವಲ್ಲಿ ಕೂಡಾ ಬಹಳಷ್ಟು ಶ್ರಮವಹಿಸಿದ್ದಾರೆ.

ಗದ್ದಿಗೌಡರ್ ನಡೆದು ಬಂದ ರಾಜಕೀಯ ಹಾದಿ

ರಾಜಕಾರಣದಲ್ಲಿ ಯಾವುದೇ ವಿಶೇಷ ಸದ್ದು ಮಾಡದೇ ತಮ್ಮಷ್ಟಕ್ಕೆ ತಾವಿರುವ ವಿಶೇಷ ರಾಜಕಾರಣಿ ಪರ್ವತಗೌಡ ಚಂದನಗೌಡ ಗದ್ದಿಗೌಡರ್‌. ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರೆನಿಸಿಕೊಂಡಿದ್ದ ಗದ್ದಿಗೌಡರ್‌, ಬಾಗಲಕೋಟೆ ಪ್ರತ್ಯೇಕ ಜಿಲ್ಲೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೆಗಡೆ ಸರ್ಕಾರದ ಜಿಲ್ಲಾ ಮರು ರಚನೆಯ ಸಮಿತಿಯ ಅಧ್ಯಕ್ಷರಾಗಿ ಗದ್ದಿಗೌಡರ್‌ ಅವರು 1987ರಲ್ಲಿ ನೇಮಕವಾಗಿದ್ದರು. ಮೂಲಕ ಅವರ ಸಾರ್ವಜನಿಕ ಜೀವನಕ್ಕೆ ಅಧಿಕೃತ ಚಾಲನೆ ದೊರೆಯಿತು.

ಬಳಿಕ 1988ರಲ್ಲಿ ಅವರನ್ನು ರಾಜ್ಯ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಯಿತು. ಆದರೆ ಬಳಿಕ ನಡೆದ ವಿಧಾನಸಭೆ ಚುನಾವಣೆಗೆ ಅವರಿಗೆ ಟಿಕೆಟ್‌ ನೀಡಲು ಜನತಾದಳ ನಿರಾಕರಿಸಿತು. ಹೆಗಡೆ ಅವರ ನಿಧನದ ಬಳಿಕ ರಾಜ್ಯದ ಸಾಕಷ್ಟು ಉತ್ತರ ಕರ್ನಾಟಕದ ನಾಯಕರಂತೆ ಗದ್ದಿಗೌಡರ್‌ ಕೂಡ ಬಿಜೆಪಿ ಸೇರಿದರು.

2004ರಲ್ಲಿ ಮೊದಲ ಬಾರಿಗೆ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಬಿಜೆಪಿಯಿಂದ ಆಯ್ಕೆಯಾದರು. ಅಂದಿನಿಂದ ಇವತ್ತಿನವರೆಗೆ ಸತತವಾಗಿ ಐದು ಬಾರಿ ಅವರು ಲೋಕಸಭಾ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ. ಇಡೀ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಯಾವುದೇ ಅಪಸ್ವರವಿರದ ಹಾಗೂ ಟಿಕೆಟ್‌ ಹಂಚಿಕೆಯಲ್ಲಿ ಗೊಂದಲವೇ ಇಲ್ಲದ ಏಕೈಕ ಕ್ಷೇತ್ರ ಇದಾಗಿರಬಹುದು.

ಗದ್ದಿಗೌಡರ್​ ಆಸ್ತಿ ಎಷ್ಟಿದೆ?

2029ರಲ್ಲಿ ಗದ್ದಿಗೌಡರ್ ಕುಟುಂಬದ ಆಸ್ತಿ 4.39 ಕೋಟಿ ಇತ್ತು. ಈಗ 7.57 ಕೋಟಿ ರೂಗೆ ಹೆಚ್ಚಾಗಿದೆ. ಸಾಲವೂ 79 ಲಕ್ಷದಿಂದ 2.44 ಕೋಟಿ ರೂಗೆ ಹೆಚ್ಚಾಗಿದೆ. ಪಿ.ಸಿ ಗದ್ದಿಗೌಡರ್​ ಅವರ ಬಳಿ ಸದ್ಯ 4,050,0000 (ನಾಲ್ಕು ಕೋಟಿ ಐವತ್ತು ಲಕ್ಷ) ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೆ, ಚರಾಸ್ಥಿ ಮೌಲ್ಯ 8262393 ರೂ. ಇದೆ.

ಪತ್ನಿ ಸಾವಿತ್ರಿ ಹೆಸರಿನಲ್ಲಿ 17, 12 979 ರೂ. (17 ಲಕ್ಷದ 12 ಸಾವಿರದ 979 ರೂ) ಮೌಲ್ಯ ಚರಾಸ್ತಿ . ಸ್ಥಿರಾಸ್ತಿ ಇಲ್ಲ. ಇನ್ನು ಮಗ ಚಂದನಗೌಡ ಹೆಸರಿನಲ್ಲಿ 2 ಕೋಟಿ 13 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ, 40.80 ಲಕ್ಷ ಚರಾಸ್ತಿ ಹೊಂದಿದ್ದಾರೆ. ಇನ್ನು 1.12 ಕೋಟಿ ಸಾಲವಿದೆ.