ಡೆಹ್ರಾಡೂನ್ನಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದ ಕೃಷ್ಣ ಬೈರೇಗೌಡ
ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ಚಾರಣಿಗರು ಉತ್ತರಾಖಂಡದ ಸಹಸ್ತ್ರತಲ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದು, ಆ ಪೈಕಿ 9 ಮಂದಿ ಮೃತಪಟ್ಟಿದ್ದರು. ಬದುಕುಳಿದ 13 ಜನ ಕನ್ನಡಿಗರನ್ನು ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda)ಅವರು ಡೆಹ್ರಾಡೂನ್ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿದ್ದಾರೆ.
ಬೆಂಗಳೂರು ಗ್ರಾಮಾಂತರ, ಜೂ.06: ಉತ್ತರಾಖಂಡ್ಗೆ (Uttarakhand) ಚಾರಣಕ್ಕೆಂದು ರಾಜ್ಯದ 21 ಜನರು ತೆರಳಿದ್ದರು. ಈ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ಚಾರಣಿಗರು ಉತ್ತರಾಖಂಡದ ಸಹಸ್ತ್ರತಲ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದು, ಆ ಪೈಕಿ 9 ಮಂದಿ ಮೃತಪಟ್ಟಿದ್ದರು. ಬಳಿಕ ಬದುಕುಳಿದವರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆ ನಡೆಸಿ, ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರುವ ಬಗ್ಗೆ ಉತ್ತರಾಖಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಜೊತೆ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda)ಅವರು ಮಾತುಕತೆ ನಡೆಸಿ, ಇದೀಗ ಕೃಷ್ಣಬೈರೇಗೌಡ ಅವರು ಡೆಹ್ರಾಡೂನ್ನಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿದ್ದಾರೆ.
ಇಂಡಿಗೋ ವಿಮಾನದಲ್ಲಿ ಆಗಮಿಸಿದ 13 ಜನ ಕನ್ನಡಿಗರು
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ಕೃಷ್ಣಬೈರೆಗೌಡ ಜೊತೆ ಇಂಡಿಗೋ ವಿಮಾನದಲ್ಲಿ 13 ಜನ ಕನ್ನಡಿಗರು ಆಗಮಿಸಿದ್ದಾರೆ. ಏರ್ಪೋರ್ಟ್ನಲ್ಲಿ ಸ್ವಾಗತಕೋರಲು ಕುಟುಂಬಸ್ಥರು ಸಹ ಆಗಮಿಸಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡ್ ಚಾರಣ: ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಿಷ್ಟು
ಡೆಹ್ರಾಡೂನ್ ನಿಂದ ಬೆಂಗಳೂರಿಗೆ ವಾಪಸ್ ಬಂದವರ ಹೆಸರು
- ಸೌಮ್ಯಾ ಕನಲೆ- 36 ವರ್ಷ
- ವಿನಯ್ MK, 49 ವರ್ಷ
- ಶಿವಜ್ಯೋತಿ- 46 ವರ್ಷ
- ಸುಧಾಕರ್, 64 ವರ್ಷ
- ಸ್ಮೃತಿ, 41 ವರ್ಷ
- ಶೀನಾ ಲಕ್ಷ್ಮಿ, 48 ವರ್ಷ
- ಮಧುಕಿರಣ್ ರೆಡ್ಡಿ- 52 ವರ್ಷ
- ಜಯಪ್ರಕಾಶ್- 61 ವರ್ಷ
- ಭರತ್- 53 ವರ್ಷ
- ಅನಿಲ್ ಭಟ್ಟ್- 52 ವರ್ಷ
- ವಿವೇಕ್ ಶ್ರೀಧರ್- 42 ವರ್ಷ
- ರಿತಿಕ್ ಜಿಂದಾಲ್
- ನವೀನ್ A
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ