AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿ ಬೈಕ್​ಗೆ ಡಿಕ್ಕಿ ಹೊಡೆದ ಕಾರು; ಇಬ್ಬರ ಸಾವು

ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿ(Hoskote-chintamani State Highway) ಯಲ್ಲಿ ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಿಗೆ ಬೈಕ್​ ಡಿಕ್ಕಿ(Accident)ಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಕುರಿತು ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿ ಬೈಕ್​ಗೆ ಡಿಕ್ಕಿ ಹೊಡೆದ ಕಾರು; ಇಬ್ಬರ ಸಾವು
ಅಪಘಾತದಲ್ಲಿ ಮೃತಪಟ್ಟವರು
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jun 06, 2024 | 4:00 PM

Share

ಬೆಂಗಳೂರು ಗ್ರಾಮಾಂತರ, ಜೂ.06: ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಿಗೆ ಬೈಕ್​ ಡಿಕ್ಕಿ(Accident)ಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿ(Hoskote-chintamani State Highway) ಯಲ್ಲಿ ಸಂಭವಿಸಿದೆ. ಬೆಂಗಳೂರಿನ ಶಿವಾಜಿನಗರ ನಿವಾಸಿ ಮೊಹಮ್ಮದ್ ಫೈಜ್(18) ಹಾಗೂ ಕಣ್ಣೂರಹಳ್ಳಿ ನಿವಾಸಿ ಜಗದೀಶ್(30) ಮೃತಪಟ್ಟ ಬೈಕ್ ಸವಾರರು. ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಮಾಡಿ ಕಾರು ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದು, ಪರಾರಿಯಾಗುವ ಭರದಲ್ಲಿ ಮತ್ತೆರಡು ಬೈಕ್​ಗಳಿಗೆ ಕಾರು ಗುದ್ದಿದೆ. ಅದರ ರಭಸಕ್ಕೆ ಈ ದುರ್ಘಟನೆ ನಡೆದಿದೆ.

ಇನ್ನು ಅಬ್ಬಾಸ್, ಹಬ್ಬಾಸ್ ಪಾಷ ಮತ್ತು ಅಬುಜರ್ ಎಂಬುವವರಿಗೆ ಗಾಯಾವಾಗಿದ್ದು, ಕೂಡಲೇ ಗಾಯಾಳುಗಳಿಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಐ20 ಕಾರಿನಲ್ಲಿ ಬಂದ ಚಾಲಕ ಪ್ರಗತೀಶ್ ರಾವ್ ಎಂಬಾತ ಅಜಾಗರೂಕತೆಯಿಂದ ಕಾರು ಚಲಾಯಿಸಿ ಇಬ್ಬರ ಪ್ರಾಣವನ್ನು ತೆಗೆದಿದ್ದಾನೆ. ಇನ್ನು ಕುಡಿದ ಅಮಲಿನಲ್ಲಿ ಕಾರು ಅಡ್ಡಾದಿಡ್ಡಿ ಚಲಾಯಿಸಿ ಅಪಘಾತ ಮಾಡಿದ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಕಲಬುರಗಿ: ಕಮಲಾಪುರ ಬಳಿ ಭೀಕರ ಅಪಘಾತ, ಮೂವರು ಸಾವು

 ನ್ಯಾಯಕ್ಕಾಗಿ ಶವಾಗಾರದ ಬಳಿ ಪ್ರತಿಭಟನೆ

ಘಟನೆ ಸಂಬಂಧ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಮೃತರ ಕುಟುಂಬಗಳಿಗೆ ನ್ಯಾಯಕೊಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಹಿನ್ನಲೆ ಹೊಸಕೋಟೆ ಶವಾಗಾರದ ಬಳಿ ಮೃತ ಜಗಧೀಶ್ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Thu, 6 June 24