ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೆಚ್ಚಿದ ಅಪಘಾತಗಳ ಸಂಖ್ಯೆ; ಮೂರೇ ವರ್ಷದಲ್ಲಿ 262 ಸಾವು

ಹುಬ್ಬಳ್ಳಿ-ಧಾರವಾಡ ಅವಳಿ ನಗರ, ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ಒಂದು ಕಡೆ ವಾಣಿಜ್ಯ ನಗರಿ ಹುಬ್ಬಳ್ಳಿ ಬೆಳೆಯುತ್ತಿದ್ದರೆ, ಇತ್ತ ವಿದ್ಯಾಕಾಶಿ ಧಾರವಾಡವೂ ಬೆಳೆಯುತ್ತಲೇ ಸಾಗಿದೆ. ಇದರೊಂದಿಗೆ ಅವಳಿ ನಗರದಲ್ಲಿ ವಾಹನ ದಟ್ಟಣೆ ಪ್ರಮಾಣವೂ ಹೆಚ್ಚಾಗಿದ್ದು, ಇತ್ತೀಚಿನ ಮೂರು ವರ್ಷಗಳಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ. ಪೊಲೀಸರು ಅಪಘಾತಗಳನ್ನು ಎಷ್ಟೇ ನಿಯಂತ್ರಿಸಲು ಯತ್ನಿಸಿದರೂ ಅದು ಸಾಧ್ಯವೇ ಆಗುತ್ತಿಲ್ಲ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೆಚ್ಚಿದ ಅಪಘಾತಗಳ ಸಂಖ್ಯೆ; ಮೂರೇ ವರ್ಷದಲ್ಲಿ 262 ಸಾವು
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೆಚ್ಚಿದ ಅಪಘಾತಗಳ ಸಂಖ್ಯೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: May 31, 2024 | 10:09 PM

ಧಾರವಾಡ, ಮೇ.31: ಹುಬ್ಬಳ್ಳಿ-ಧಾರವಾಡ(Hubli-Dharwad) ಅವಳಿ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಸಂಚಾರಿ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಲೇ ಇದೆ. ಹು-ಧಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ವಾಹನ ಸವಾರರು ಎಚ್ಚೆತ್ತುಕೊಳ್ಳದ ಪರಿಣಾಮ, ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಅಪಘಾತಗಳಲ್ಲಿ ನೂರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮೃತರ ಪೈಕಿ ಅತಿ ಹೆಚ್ಚು ಯುವಕರೇ ಎನ್ನುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಕಳೆದ ಮೂರು ವರ್ಷಗಳಲ್ಲಿ ನಡೆದ ಅಪಘಾತಗಳ ಸಂಖ್ಯೆಯ ವಿವರ ಈ ರೀತಿ ಇದೆ

2022ರ ಅಪಘಾತದಲ್ಲಿ 97 ಪುರುಷರು ಹಾಗೂ 14 ಮಹಿಳೆಯರು ಸೇರಿ 111 ಜನರ ಸಾವನ್ನಪ್ಪಿದರೆ, 419 ಪುರುಷರು, 87 ಮಹಿಳೆಯರು ಸೇರಿ ಒಟ್ಟು 506 ಜನರಿಗೆ ತೀವ್ರ ಗಾಯವಾಗಿದೆ.

2023ರ ಅಪಘಾತದಲ್ಲಿ 100 ಪುರುಷರು, 17 ಮಹಿಳೆಯರು ಸೇರಿ ಒಟ್ಟು 117 ಜನ ಮೃತರಾದರೆ, 454 ಪುರುಷರು ಹಾಗೂ 105 ಮಹಿಳೆಯರು ಸೇರಿ ಒಟ್ಟು 559 ಜನರಿಗೆ ಗಾಯವಾಗಿದೆ.

2024 ರ ಜನವರಿಯಿಂದ ಇಂದಿನ ವರೆಗೆ 34 ಜನ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಅದರಲ್ಲಿ 30 ಪುರುಷರು ಹಾಗೂ 4 ಮಹಿಳೆಯರಿದ್ದಾರೆ. ಇನ್ನು 113 ಪುರುಷರು, 15 ಮಹಿಳೆಯರು ಸೇರಿ ಒಟ್ಟು 128 ಜನರಿಗೆ ಗಾಯವಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸ್ವಯಂ ಅಪಘಾತಗಳ ಸಂಖ್ಯೆ ಹೆಚ್ಚಳ

ಈ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡಿರುವ ಸಂಚಾರಿ ಪೊಲೀಸರು, ಅಪಘಾತಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯವೂ ಅನೇಕ ಕಡೆಗಳಲ್ಲಿ ತಪಾಸಣೆ ನಡೆಸುವ ಪೊಲೀಸರು ಸಾಕಷ್ಟು ಪ್ರಮಾಣದಲ್ಲಿ ದಂಡದ ರುಚಿ ಮುಟ್ಟಿಸಿದರೂ ಯಾವುದೇ ಪರಿಣಾಮ ಬೀರಿಲ್ಲ.

ಮೂರು ವರ್ಷಗಳಲ್ಲಿ ಪೊಲೀಸರು ವಿಧಿಸಿದ ದಂಡ ಕೋಟಿ ಲೆಕ್ಕದಲ್ಲಿದೆ

1) 2022 ರಲ್ಲಿ ದಾಖಲಾದ ಸಂಚಾರ ನಿಯಮ ಉಲ್ಲಘಿಸಿದ ಪ್ರಕರಣಗಳ ಸಂಖ್ಯೆ : 1,40,416

ಸ್ಥಳದಲ್ಲಿಯೇ ವಸೂಲಿ ಮಾಡಲಾದ ದಂಡ:  66,167,100 ರೂ.

ನ್ಯಾಯಾಲಯದಿಂದ ವಸೂಲಿ ಮಾಡಲಾದ ದಂಡ: 1,28,64,100 ರೂ.

2022 ರಲ್ಲಿ ವಸೂಲಿ ಮಾಡಲಾದ ಒಟ್ಟು ದಂಡ ರೂ. 7,90,31,200 ರೂ.

2) 2023 ರಲ್ಲಿ ದಾಖಲಾದ ಸಂಚಾರ ನಿಯಮ ಉಲ್ಲಘಿಸಿದ ಪ್ರಕರಣಗಳ ಸಂಖ್ಯೆ : 1,91,883

ಸ್ಥಳದಲ್ಲಿಯೇ ವಸೂಲಿ ಮಾಡಲಾದ ದಂಡ:  7,52,65,125 ರೂ.

ನ್ಯಾಯಾಲಯದಿಂದ ವಸೂಲಿ ಮಾಡಲಾಗಿರುವ ದಂಡ: 1,83,61,000 ರೂ.

2023 ರಲ್ಲಿ ವಸೂಲಿ ಮಾಡಲಾದ ಒಟ್ಟು ದಂಡ : 9,36,26,125 ರೂ.

3) 2024ರ ಜನವರಿಯಿಂದ ಮೇ ಅಂತ್ಯದವರೆಗೆ ಸಂಚಾರ ನಿಯಮ ಉಲ್ಲಘಿಸಿದ ಪ್ರಕರಣಗಳ ಸಂಖ್ಯೆ : 54,468

ಸ್ಥಳದಲ್ಲಿಯೇ ವಸೂಲಿ ಮಾಡಲಾದ ದಂಡ: 2,60,54,400 ರೂ.

ನ್ಯಾಯಾಲಯದಿಂದ ವಸೂಲಿ ಮಾಡಲಾಗಿರುವ ದಂಡ:  69,51,500 ರೂ.

ಈ ವರ್ಷದ ಐದು ತಿಂಗಳ ಅವಧಿಯಲ್ಲಿ ವಸೂಲಿ ಮಾಡಲಾದ ದಂಡ: 3,30,05,900 ರೂ.

ಇದನ್ನೂ ಓದಿ:ವಿದ್ಯುತ್‌ ಅಪಘಾತದಿಂದ 2 ಕಾಲು, ಒಂದು ಕೈ ಕಳೆದುಕೊಂಡು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿ ದಾಖಲೆ ಬರೆದ ಯುವಕ 

ಅಚ್ಚರಿಯ ಸಂಗತಿ ಅಂದರೆ ಮೂರು ವರ್ಷಗಳ ಅವಧಿಯಲ್ಲಿಯೇ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ದಂಡವನ್ನು ವಸೂಲಿ ಮಾಡಲಾಗಿದೆ. ಇಷ್ಟೆಲ್ಲ ಕ್ರಮ ಕೈಗೊಂಡರೂ ಒಂದು ಕಡೆ ಸಂಚಾರಿ ನಿಯಮ ಉಲ್ಲಂಘನೆಯಾಗುತ್ತಿರೋದು ಕಡಿಮೆಯಾಗಿಲ್ಲ. ಅದರೊಂದಿಗೆ ಅಪಘಾತ ಪ್ರಕರಣದಲ್ಲಿ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿಲ್ಲ. ಇದು ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಇನ್ನು ಅಪಘಾತ ಪ್ರಕರಣಗಳಿಗೆ ಕಾರಣ ಕೇವಲ ಸಂಚಾರಿ ನಿಯಮದ ಉಲ್ಲಂಘನೆಯಷ್ಟೇ ಕಾರಣವಲ್ಲ. ಬದಲಿಗೆ ಅವೈಜ್ಞಾನಿಕ ರೋಡ್ ಹಂಪ್ಸ್, ಅವೈಜ್ಞಾನಿಕ ಸಿಗ್ನಲ್ ಹಾಗೂ ಹದಗೆಟ್ಟಿರೋ ರಸ್ತೆಗಳು ಕೂಡ ಇದಕ್ಕೆ ಕಾರಣವಾಗಿವೆ. ಒಟ್ಟಿನಲ್ಲಿ ಒಂದು ಕಡೆ ಪೊಲೀಸರು ಹಾಕುತ್ತಿರುವ ದಂಡದ ಪ್ರಮಾಣ ಕೋಟಿ ಕೋಟಿ ಲೆಕ್ಕಕ್ಕೆ ಮುಟ್ಟುತ್ತಿದ್ದರೂ, ಇತ್ತ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಾವಿನ ಸಂಖ್ಯೆ ಕೂಡ ಅದೇ ರೀತಿ ಹೆಚ್ಚಾಗುತ್ತಿರುವುದು ಮಾತ್ರ ಆತಂಕಕಾರಿ ವಿಚಾರವೇ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!