ವಿದ್ಯುತ್‌ ಅಪಘಾತದಿಂದ 2 ಕಾಲು, ಒಂದು ಕೈ ಕಳೆದುಕೊಂಡು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿ ದಾಖಲೆ ಬರೆದ ಯುವಕ 

ಸಮುದ್ರ ಮಟ್ಟದಿಂದ ಸುಮಾರು 17 ಸಾವಿರದ 598 ಅಡಿ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರುವ ಮೂಲಕ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ   ವಿಶ್ವದ ಮೊದಲ ವಿಕಲಚೇತನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಗೋವಾದ ಟಿಂಕೇಶ್‌ ಕೌಶಿಕ್‌ ಭಾಜನರಾಗಿದ್ದಾರೆ. ಈ ಮೂಲಕ  ಸಾಧನೆಗೆ ದೇಹ ನ್ಯೂನತೆ ಯಾವುದೂ ಅಡ್ಡಿಯಾಗದೂ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

ವಿದ್ಯುತ್‌ ಅಪಘಾತದಿಂದ 2 ಕಾಲು, ಒಂದು ಕೈ ಕಳೆದುಕೊಂಡು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿ ದಾಖಲೆ ಬರೆದ ಯುವಕ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 24, 2024 | 5:44 PM

ಸಾಧಿಸಲು  ಧೃಡವಾದ ಮನಸ್ಸು, ಛಲ ಇರಬೇಕು. ಇವೆರಡು ಇದ್ದರೇ ಯಾವ ವ್ಯಕ್ತಿಯಾದರೂ ಏನು ಬೇಕಾದ್ರೂ ಸಾಧಿಸಬಹುದು ಎಂಬುದನ್ನು ಗೋವಾದ 30 ವರ್ಷ ವಯಸ್ಸಿನ ಟಿಂಕೇಶ್‌ ಕೌಶಿಕ್‌ ತೋರಿಸಿಕೊಟ್ಟಿದ್ದಾರೆ. ಅಪಘಾತವೊಂದರಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಇವರು, ವಿಕಲಚೇತನರಿಗೆ  ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರ ಅಂಗವೈಕಲ್ಯ ಅಡ್ಡಿಯಾಗದು, ಸಾಧಿಸುವ ಛಲವೊಂದಿದ್ದರೇ ಯಾರೂ ಏನು ಬೇಕಾದರೂ ಸಾಧಿಸಬಹುದು ಎನ್ನುತ್ತಾ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಏರುವ ಮೂಲಕ ಕೌಶಿಕ್‌ “ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಏರಿದ ವಿಶ್ವದ ಮೊದಲ ವಿಕಲಚೇತನ ವ್ಯಕ್ತಿ” ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಗೋವಾದ ನಿವಾಸಿಯಾಗಿರುವ ಕೌಶಿಕ್‌  ತನ್ನ 9 ನೇ ವಯಸ್ಸಿನಲ್ಲಿ ಹರಿಯಾಣದಲ್ಲಿ ಭೀಕರ ವಿದ್ಯುತ್‌ ಅಪಘಾತವೊಂದರಲ್ಲಿ ತನ್ನ ಎರಡೂ ಕಾಲುಗಳು ಹಾಗೂ ಒಂದು ಕೈಯನ್ನು ಕಳೆದುಕೊಳ್ಳುತ್ತಾರೆ. ನಂತರ ಅವರಿಗೆ  ಕೃತಕ (ಪ್ರಾಸ್ಥೆಟಿಕ್)‌  ಕಾಲುಗಳನ್ನು ಹಾಗೂ ಕೈಯನ್ನು ಜೋಡಿಸಲಾಯಿತು. ಈ ದುರಂತ ನಡೆದು ಕೆಲ ವರ್ಷಗಳ ಬಳಿಕ ಗೋವಾಕ್ಕೆ ಸ್ಥಳಾಂತರಗೊಂಡ ಕೌಶಿಕ್‌  ತನಗೆ ಅಂಗವೈಕಲ್ಯತೆ ಇದೆ ಎಂದು ಕುಗ್ಗದೆ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಎಂದು ಧೃಡ ಮನಸ್ಸು ಮಾಡಿ ಫಿಟ್ನೆಸ್‌ ಕೋಚ್‌ ಆಗಿ  ಕೆಲಸವನ್ನು ಆರಂಭಿಸುತ್ತಾರೆ. ಇದೀಗ ಅವರು ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಏರುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಮೇ 11 ರಂದು ಬಹು ಸವಾಲಿನ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಪ್ರಯಾಣವನ್ನು ಪೂರ್ಣಗೊಳಿಸಿದ ಕೌಶಿಕ್‌ ತನ್ನ ದೈಹಿಕ ನ್ಯೂನತೆಯ  ಹೊರತಾಗಿಯೂ ತನ್ನ ಮಾನಸಿಕ ಶಕ್ತಿಯಿಂದ ಈ ಸಾಧನೆನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಫಸ್ಟ್‌ ನೈಟ್‌ಗೆ ಸ್ನೇಹಿತರು ಇಷ್ಟೊಂದು ಕಾಟ ಕೊಡೋದಾ, ಗಿಚ್ಚಿ ಗಿಲಿಗಿಲಿ ಧನರಾಜ್‌ ಹಂಚಿಕೊಂಡ ವಿಡಿಯೋ

“ತಾನು ಫಿಟ್‌ನೆಸ್‌ ಕೋಚ್ ಆಗಿರುವುದರಿಂದ ಮೌಂಟ್‌ ಎವರೆಸ್ಟ್‌ ಏರಲು ಸುಲಭವಾಗಬಹುದು ಎಂದು ಎಂದು ಭಾವಿಸಿದ್ದೆ.  ಇದಕ್ಕಾಗಿ ತಯಾರಿ ನಡೆಸಿದಾದ ಸವಾಲುಗಳ ಬಗ್ಗೆ ಅರಿತುಕೊಂಡೆ, ಪ್ರಾಸ್ಥೆಟಿಕ್‌ ಅಂಗಗಳನ್ನು ಜೋಡಿಸಿದ ಕಾರಣದಿಂದಾಗಿ ಈ ಟ್ರೆಕ್‌ ತುಂಬಾನೇ ನೋವಿನಿಂದ ಕೂಡಿತ್ತು, ದಾರಿ ಮಧ್ಯೆ ಆರೋಗ್ಯವೂ ಹದಗೆಟ್ಟಿತ್ತು” ಎಂದು ಕೌಶಿಕ್‌ ಹೇಳಿಕೊಂಡಿದ್ದಾರೆ.

ಕೌಶಿಕ್‌ ಅವರು ತಮ್ಮ ಈ ಅದ್ಭುತ ಸಾಧನೆಗಳಿಂದ ಗೋವಾ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಗೋವಾದ ವಿಕಲ ಚೇತನರ ಹಕ್ಕುಗಳ ಸಂಘ (ಡ್ರ್ಯಾಗ್)‌ ದ ಮುಖ್ಯಸ್ಥ ಅವೆಲಿನೋ ಡಿಸೋಜಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ